ಮಣಿಪಾಲ: ಡೊನಾಲ್ಡ್ ಟ್ರಂಪ್ ದ್ವಿದಿನ ಭಾರತ ಭೇಟಿಯಿಂದ ಈ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧ ಇನ್ನಷ್ಟು ವೇಗ ಪಡೆದು ಕೊಳ್ಳಬಹುದು ಎಂಬ ವಾದಕ್ಕೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಬಿ ಆರ್ ವಿಶ್ವನಾಥ್ ಗೌಡ; ಖಂಡಿತಾ. ಎರಡು ದೇಶಗಳ ಆರ್ಥಿಕ ಅಭಿವೃದ್ಧಿಗೆ ಪೂರಕ ಅಂಶಗಳು ನಡೆಯಲಿವೆ ,ಮುಂದಿನ ಆರ್ಥಿಕ ವರ್ಷಗಳಲ್ಲಿ ಉನ್ನತ ಮಟ್ಟದ ಸಂಬಂಧ ಗಟ್ಟಿಯಾಗಲು ಈ ಸಮೀಲನ ನಾಂದಿ ಹಾಡುತ್ತದೆ. ಜೈ ಹಿಂದ್ ಭಾರತ್ ಮಾತಾ ಕೀ ಜೈ.
ಗಾಯಿತ್ರಿ ಕೃಷ್ಣಪ್ಪ; ವಿಶ್ವ ಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಸಿಗೋವರೆಗೂ ಪ್ರಬಲ ಹೋರಾಟ ಮಾಡಲಿ ನಮ್ಮ ಪರವಾಗಿ ಸುಮ್ಮನೆ ಹೇಳೋದಲ್ಲ
ರಘು ಪಾವಗಢ: ಮೋದಿ ಫಾಲೋವರ್ಸ್ ಇದನ್ನು ಸರಿ ಎನ್ನುತ್ತಾರೆ ಮೋದಿ ವಿರುದ್ಧ ಮಾತನಾಡುವವರು ಇದನ್ನು ತಪ್ಪು ಎನ್ನುತ್ತಾರೆ ಅಷ್ಟೇ. ಅದರಿಂದ ನಿಜವಾಗಲೂ ಉಪಯೋಗ ಆದಾಗ ಮಾತ್ರ ಅದರಿಂದ ಲಾಭ ನಷ್ಟ ಗೊತ್ತಾಗುವುದು
ಕಲಂದರ್ ಶಫಿ ತವಕ್ಕಲ್: ಎರಡು ಪ್ರಬಲ ರಾಷ್ಟ್ರಗಳ ಪ್ರಬಲ ನಾಯಕರ ಭೇಟಿ ಕೆಲವೊಂದು ಆರ್ಥಿಕ ಪ್ರಗತಿಗೆ ನಾಂದಿ ಹಾಡಬಹುದು. ಎರಡು ರಾಷ್ಟಗಳ ಆರೋಗ್ಯಕರ ಒಪ್ಪಂದಗಳು ನಡೆಯಲಿ ಎರಡು ನಾಯಕರದ್ದು ರಾಜಕೀಯ ದುರುದ್ದೇಶವಾದರೆ ಆರ್ಥಿಕ ಪ್ರಗತಿ ಅಸಾಧ್ಯ.
ಸ್ಟಿವನ್ ಜೆ ಆಳ್ವ: ವಿಶ್ವದಲ್ಲಿ ಅಮೆರಿಕಾ ದೊಡ್ಡ ವ್ಯಾಪಾರಿ. ಕೇವಲ ದೊಡ್ಡವಲ್ಲದೆ ಸ್ವಾರ್ಥಿ ವ್ಯಾಪಾರಿ. ಮಾನವೀಯತೆಗೆ ಕಿಚ್ಚು ಹಚ್ಚಿಯಾದರೂ ದುಡ್ಡು ಮಾಡುವ ದುರ್ಬುದ್ಧಿಯಿದೆ. ಟ್ರಂಪುಗಳ ಭೇಟಿಯಿಂದ ಸದ್ಯಕ್ಕೆ ಕೇಂದ್ರ ಬೊಕ್ಕಸದಿಂದ 100 ಕೋಟಿ ಹೊರಬಿದ್ದು ಕೆಲವು ಗುಜ್ಜುಗಳಿಗೆ ಕೆಲಸವಾಗಿ ಅದರ ಒಂದು ಪಾಲು ಅಲ್ಲಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಚಲಾವಣೆಯಾಯಿತು. ಸದ್ಯಕ್ಕೆ ಇದೇ ಆರ್ಥಿಕ ಕಷ್ಟ ನಷ್ಟ.