Advertisement
ವಿಧಾನಸಭೆಯಲ್ಲಿ ಸರಕಾರ 2021-22ನೇ ಸಾಲಿನ ಮಧ್ಯ ವಾರ್ಷಿಕ ವರದಿ ಮಂಡಿಸಿದ್ದು, ರಾಜ್ಯದ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆಗಳು ಮತ್ತು ನೋಂದಣಿ ಮತ್ತು ಮುದ್ರಾಂಕ ಸೇರಿ ನಾಲ್ಕೂ ತೆರಿಗೆಗಳು ಸೆಪ್ಟಂಬರ್ ವರೆಗೆ ಶೇ. 46ರಷ್ಟು ಸಂಗ್ರಹವಾಗಿದೆ. ಕಳೆದ ವರ್ಷ ಅಂದರೆ 2020-21ನೇ ಸಾಲಿನಲ್ಲಿ ಸೆಪ್ಟಂಬರ್‌ವರೆಗೆ ಶೇ.37ರಷ್ಟು ಮಾತ್ರ ತೆರಿಗೆ ಸಂಗ್ರಹ ಮಾಡಲಾಗಿತ್ತು.
Related Articles
Advertisement
ಇದನ್ನೂ ಓದಿ:ಪೆಗಾಸಸ್ ವಿವಾದ: ಪ.ಬಂಗಾಳಕ್ಕೆ ಮುಖಭಂಗ; ಸಮಿತಿಯ ತನಿಖೆಗೆ ಸುಪ್ರೀಂ ಕೋರ್ಟ್ ತಡೆ
ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯಾಗುತ್ತಿದ್ದು. ಇನ್ನು ಮುಂದೆ ಸರಕಾರ ಕೇಂದ್ರದ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರವಷ್ಟೇ ಪರಿಹಾರ ನೀಡಬೇಕೆಂದು ಮುಖ್ಯ ಕಾರ್ಯ ದರ್ಶಿ ನೇತೃತ್ವದ ವಿತ್ತೀಯ ನಿರ್ವಹಣೆ ಪರಿಶೀಲನ ಸಮಿತಿ ಶಿಫಾರಸು ಮಾಡಿದೆ. ಕೋವಿಡ್ ಕಾರಣದಿಂದ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದ್ದು, ನೆರೆ ಪರಿಹಾರ ನೀಡಲು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಅರ್‌ಎಫ್ ಷರತ್ತುಗಳಿಗಿಂತ ಹೆಚ್ಚುವರಿ ಪರಿಹಾರ ನೀಡುತ್ತಿರುವುದು ಸರಕಾರಕ್ಕೆ ಹೊರೆಯಾಗಿದೆ ಎಂದು ಸಮಿತಿ ತಿಳಿಸಿದೆ. ಸಹಾಯಾನುದಾನ ಇಳಿಮುಖ
ಕೇಂದ್ರ ತೆರಿಗೆ ಪಾಲು ರಾಜ್ಯಕ್ಕೆ ಹಂಚಿಕೆ ಮಾಡಿದ್ದ 24,272 ಕೋಟಿ ರೂ. ಪೈಕಿ ಸೆಪ್ಟಂಬರ್‌ವರೆಗೆ 9.488 ಕೋಟಿ ರೂ.ಮೊತ್ತವಷ್ಟೇ ಬಿಡುಗಡೆಯಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ರಾಜ್ಯಕ್ಕೆ ಕೇಂದ್ರ ಹಂಚಿಕೆ ಮಾಡಿದ್ದ ತೆರಿಗೆ ಪಾಲಿನಲ್ಲಿ ಶೇ.39 ರಷ್ಟು ಮಾತ್ರ ಬಂದಿದೆ. ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಮತ್ತು ಸಹಾಯಾನುದಾನ ಇಳಿಮುಖವಾಗಿದೆ. ಕೊರೊನಾ ಎರಡನೇ ಅಲೆ ಪರಿಣಾಮವಾಗಿ ತೆರಿಗೆ ಸಂಗ್ರಹದಲ್ಲಿ 3,105 ಕೋಟಿ ರೂ. ಕೊರತೆಯಾಗಿರುವ ಬಗ್ಗೆಯೂ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ತಿಳಿಸಲಾಗಿದೆ.