ನವದೆಹಲಿ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟದ ಸಮಯದಲ್ಲಿ ಮೊದಲು ಕಾರು ಕೊಂಡ ಬೆಲೆ ಮತ್ತು ನಂತರದ
ಮಾರಾಟದ ಬೆಲೆಯ ನಡುವಿನ ವ್ಯತ್ಯಾಸಕ್ಕಷ್ಟೇ ಶೇ.18ರಷ್ಟು ಜಿಎಸ್ ವಿಧಿಸಲಾಗುತ್ತದೆ ಎಂದು ಜಿಎಸ್‌ಟಿ ಮಂಡಳಿ ತಿಳಿಸಿದೆ.
ಸೆಕೆಂಡ್ ಹ್ಯಾಂಡ್ ಕಾರು ಮಾಡುವ ಕಂಪನಿಗಳಿಗೆ ಇದು ಅನ್ವಯವಾಗಲಿದ್ದು, ಕಾರಿನ ಸವಕಳಿ (ಡಿಪ್ರಿಸಿಯೇಷಶನ್) ಮೊತ್ತಕ್ಕಿಂತ ಕಡಿಮೆ ಬೆಲೆಗೆ ಕಾರು ಮಾರಾಟ ಮಾಡಿದ್ದರೆ, ಯಾವುದೇ ಜಿಎಸ್‌ಟಿ ಕಟ್ಟಬೇಕಿಲ್ಲ ಎಂದೂ ತಿಳಿಸಲಾಗಿದೆ.
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ಕಂಪನಿಗಳು 1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಸವಕಳಿ ಮೊತ್ತವನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಕಾರನ್ನು 20 ಲಕ್ಷ ರೂ.ಗಳಿಗೆ ಖರೀದಿಸಿ, ಅದರ ಸವಕಳಿ ಮೊತ್ತ 8 ಲಕ್ಷ ರೂ. ಎಂದು ನಿಗದಿಪಡಿಸಿದ್ದರೆ, ಕಾರಿನ ಬೆಲೆ 12 ಲಕ್ಷ ರೂ. ಎಂದು ಪರಿಗಣಿಸಲಾಗುತ್ತದೆ.
ಸೆಕೆಂಡ್ ಹ್ಯಾಂಡ್‌ಗೆ ಈ ಕಾರು ಮಾರುವಾಗ 10 ಲಕ್ಷ ರೂ.ಗೆ ಕಾರು ಮಾರಿದರೆ ಯಾವುದೇ ಜಿಎಸ್‌ಟಿ ಕಟ್ಟಬೇಕಿಲ್ಲ. ಬದಲಿಗೆ 15 ಲಕ್ಷ ರೂ.ಗೆ ಮಾರಿದರೆ 3 ಲಕ್ಷ ರೂ.ಗೆ ಶೇ.18ರಷ್ಟು ಜಿಎಸ್‌ಟಿ ಕಟ್ಟಬೇಕಾಗುತ್ತದೆ.