ಮಣಿಪಾಲ: ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಮೋಹನ್ ದಾಸ್ ಕಿಣಿ: ಕಲಿಕಾ ಮಾಧ್ಯಮ ಯಾವುದೇ ಇರಲಿ, ಕನ್ನಡವನ್ನೊಂದು ವಿಷಯವಾಗಿ ಅಧ್ಯಯನ ಮಾಡುವುದನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸುವುದರ ಜತೆಗೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ, ಖಾಸಗಿ ಶಾಲೆಗಳ ಸುಲಿಗೆಗೆ ಕಡಿವಾಣ ಹಾಕಬಹುದು ಮತ್ತು ಸರಕಾರಿ ಶಾಲೆಗಳನ್ನು ಸಮಾನಾಂತರವಾಗಿ ಬೆಳೆಸಬಹುದು. ಆಗ ಕನ್ನಡವೂ ಉಳಿಯುತ್ತದೆ, ಉನ್ನತ ಶಿಕ್ಷಣದಲ್ಲಿ ಆಂಗ್ಲ ಭಾಷೆಯ ಅಗತ್ಯತೆಯನ್ನೂ ಪೂರೈಸಿದಂತಾಗುತ್ತದೆ. ಆದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.
ನರಸಿಂಹ ಮೂರ್ತಿ ಎಂಎನ್: ಮಾತೃಭಾಷೆಯಲ್ಲಿ ಶಿಕ್ಷಣ ಎಂದರೆ ನಮ್ಮ ಕನ್ನಡ ಭಾಷೆಯನ್ನು ಮಾತ್ರ ಓದಿಸಬೇಕಾ? ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡ ಭಾಷೆಯೊಂದನ್ನೇ ಕಲಿಸಿ ಬೇರೆ ಭಾಷೆ ಬೇಡ ಎನ್ನುವುದಾದರೆ ನಮ್ಮ ಸಹಮತವಿದೆ. ಆದರೆ ಇಂಗ್ಲೀಷ್ ಭಾಷೆ ನಮ್ಮ ಗುಲಾಮಗಿರಿಯ ಸಂಕೇತವಾಗಿ ಕಲಿಯಲೇಬೇಕು ಎನ್ನುವುದಾದರೆ ಅದಕ್ಕೆ ನನ್ನ ವಿರೋಧವಿದೆ. ಕಾರಣ ಭಾರತದ ಭಾಷೆಗಳಾದ ಸಂಸ್ಕೃತ ಮತ್ತು ಹಿಂದಿ ಕಲಿಯಲು ನಾವು ಒಪ್ಪದೇ ಇದ್ದಾಗ ವಿದೇಶಿ ಭಾಷೆಗಳು ನಮಗೇಕೆ ಬೇಕು? ಒಂದು ವೇಳೆ ಇಂಗ್ಲಿಷ್ ಭಾಷೆಗೂ ಸ್ಥಾನ ಕೊಡುವುದಾದರೆ ಅದಕ್ಕೆ ತೃತೀಯ ಸ್ಥಾನ ನೀಡಬೇಕು. ನಮ್ಮ ನಾಡಭಾಷೆ, ದೇಶಭಾಷೆಗೆ ಆದ್ಯತೆ ನೀಡಿದ ನಂತರ ಪರಕೀಯ ಭಾಷೆಗೆ ಕಿಂಚಿತ್ತು ಸ್ಥಾನ ನೀಡಬಹುದು. ಭಾರತದ ಯಾವುದೇ ಭಾಷೆಯನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಯಾವುದೇ ನಷ್ಟವಿಲ್ಲ. ಅದರಿಂದ ಭಾರತೀಯತೆಯ ಅರಿವಾಗಿರುತ್ತದೆ. ಬೇರೆ ರಾಜ್ಯಗಳಲ್ಲಿ ಹಿಂದಿಯನ್ನು ಮತ್ತು ಭಾರತೀಯ ಇತರ ಭಾಷೆಗಳನ್ನು ಕಲಿಯುತ್ತಿಲ್ಲ, ಕನ್ನಡಿಗರು ಮಾತ್ರ ಕಲಿಯುತ್ತಿದ್ದಾರೆ ಎಂದರೆ ಅದು ನಮ್ಮ ಹಿರಿಮೆ, ಗರಿಮೆ, ಪ್ರಜ್ಞಾವಂತಿಕೆಯೇ ಹೊರತು ಕೀಳರಿಮೆಯಲ್ಲ. ಆದ್ದರಿಂದಲೇ ಇಡೀ ಭಾರತದಲ್ಲಿ ಅತಿ ಹೆಚ್ಚು ವಿಚಾರವಂತರು, ಬುದ್ಧಿವಂತರು, ಸಹೃದಯಿಗಳು ಇರುವ ನಾಡು ನಮ್ಮ ಹೆಮ್ಮೆಯ ಕನ್ನಡ ನಾಡು.
ಭಾರತ ಜನನಿಯ ತನುಜಾತೆ.
ಜಯಹೇ ಕರ್ನಾಟಕ ಮಾತೆ – ಕುವೆಂಪು.
ರಮೇಶ್ ತಿಂಗಳಾಯ: ಸರಕಾರವು ಬಂಡವಾಳ ಶಾಯಿಗಳ ಕಪಿ ಮುಷ್ಠಿಯಿಂದ ಒಮ್ಮೆ ಹೊರ ಬಂದು ಸರಕಾರಿ ಶಾಲೆಯನ್ನು ಸಮಪ೯ಕವಾಗಿ ಹೊಸ ಅವಿಸ್ಕಾರದೊಂದಿಗೆ ಪುನಸ್ಚೇತನಗೊಳಿಸಿ ಹೊಸತಾಂತ್ರಿಕತೆಯನ್ನು ಅಳವಡಿಸಿ ಶಿಕ್ಷಕರಿಗೆ ಬೇರೆ ಯಾವುದೆ ಜವಬ್ದಾರಿ ಕೊಡದೆ ಶಿಕ್ಷಣದ ಜವಬ್ಧಾರಿಯನ್ನು ಮಾತ್ರ ಕೊಡಿ.ಆವಾಗ ಮಾತ್ರಭಾಷೆ ತನ್ನಿಂತಾನೆ ಕಾಯ೯ರೂಪಕ್ಕೆ ಬರುತ್ತದೆ.ಇದು ಅಗತ್ಯ ಕೂಡ.ಈ ಬಗ್ಗೆ ಮಾಧ್ಯಮ ಸೂಕ್ತ ವರದಿ ಪ್ರಕಟಿಸುತ್ತ ಬರಲಿ