Advertisement

10 ಸಾವಿರ ವರ್ಷದ ಗಡಿಯಾರ!

06:05 AM Mar 11, 2018 | |

ಟೆಕ್ಸಾಸ್‌:  ಈ ಗಡಿಯಾರದ ಮುಳ್ಳುಗಳು, ಸೆಕೆಂಡ್‌, ನಿಮಿಷ ಅಥವಾ ಗಂಟೆಗೊಮ್ಮೆ ತಿರುಗುವುದಿಲ್ಲ. ಬದಲಿಗೆ ವರ್ಷಕ್ಕೆ, ನೂರು ವರ್ಷಕ್ಕೆ ಹಾಗೂ ಒಂದು ಸಾವಿರ ವರ್ಷಕ್ಕೊಮ್ಮೆ ತಿರುಗುತ್ತವೆ. ಇದರ ಆಯುಷ್ಯವೇ 10 ಸಾವಿರ ವರ್ಷ!

Advertisement

ಇದು ಯಾವುದೋ ಸಿನಿಮಾದಲ್ಲಿರುವ ಕಲ್ಪನೆಯ ಗಡಿಯಾರವಲ್ಲ. ಬದಲಿಗೆ ವೆಸ್ಟ್‌ ಟೆಕ್ಸಾಸ್‌ನಲ್ಲಿ ಪರ್ವತದಲ್ಲಿ ನಿರ್ಮಿಸ ಲಾಗುತ್ತಿರುವ ಬೃಹತ್‌ ಗಡಿಯಾರ. ಹಲವು ದಶಕಗಳಿಂದಲೂ ನಡೆಯುತ್ತಿದ್ದ ಇದರ ಬಗೆಗಿನ ಸಂಶೋಧನೆ ಇದೀಗ ಅಮೇಜಾನ್‌ ಸಂಸ್ಥೆಯ ಮಾಲೀಕ ಜೆಫ್ ಬೆಜೋಸ್‌ ನೆರವಿನಿಂದ ಕಾರ್ಯರೂಪಕ್ಕೆ ಬರುತ್ತಿದೆ. ಈ ಗಡಿಯಾರದ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ.

ಭೂಮಿಯ ಉಷ್ಣ ವೇ ಶಕ್ತಿ!: 500 ಅಡಿ ಎತ್ತರವಿರುವ ಈ ಗಡಿಯಾರಕ್ಕೆ ಭೂಮಿಯ ಉಷ್ಣ ಶಕ್ತಿಯೇ ಇಂಧನ. ಇದರ ಬಹುತೇಕ ಭಾಗವನ್ನು ಅತ್ಯಂತ ಉನ್ನತ ಗುಣಮಟ್ಟದ ಸ್ಟೀಲ್‌ನಿಂದ ನಿರ್ಮಿಸಲಾಗಿದೆ. ಚಲಿಸುವ ಭಾಗಗಳು ಬೇಗನೆ ಸವೆಯುವುದರಿಂದ ಕಲ್ಲು ಮತ್ತು ಸೆರಾಮಿಕ್‌ ನಿಂದ ನಿರ್ಮಿಸಲಾಗುತ್ತಿದೆ. ಸೆರಾಮಿಕ್‌ಗೆ ಯಾವುದೇ ಲ್ಯೂಬ್ರಿಕೇಶನ್‌ ಅಗತ್ಯವಿರುವುದಿಲ್ಲ. ಅಲ್ಲದೆ ನಿಧಾನವಾಗಿ ತಿರುಗುವುದಕ್ಕೆ ಇವು ಸೂಕ್ತವಾಗಿವೆ.

ದಶಕಗಳ ಹಿಂದಿನ ಯೋಜನೆ: 1989ರಲ್ಲಿ ಡ್ಯಾನಿ ಹಿಲ್ಸ್‌ ಈ ರೀತಿಯ ಗಡಿಯಾರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂದಿನಿಂದಲೂ ಈ ಬಗ್ಗೆ ಅವರು ಸಂಶೋಧನೆ ನಡೆಸುತ್ತಿದ್ದಾರೆ. ಈಗ ಜೆಫ್ ಇದನ್ನು ಸಾಧ್ಯವಾಗಿಸಲು ಹೊರಟಿದ್ದಾರೆ. ಈ ಬಗ್ಗೆ ವೀಡಿಯೋವೊಂದನ್ನು ಜೆಫ್ ಬಿಡುಗಡೆ ಮಾಡಿದ್ದಾರೆ. ಆದರೆ ಇದರ ನಿರ್ಮಾಣ ಕಾರ್ಯ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next