ಮುಂಬಯಿ: ಬಿಗ್ ಬಾಸ್ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ದೊಡ್ಮನೆಯೊಳಗಿನ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ಟೌನ್ ಆಗಿದೆ.
ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಬಿಗ್ ಬಾಸ್ 18 (Bigg Boss 18) ಆರಂಭದಿಂದಲೂ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಿದೆ. ಸ್ಪರ್ಧಿಗಳ ಮಾತು, ವ್ಯಕ್ತಿತ್ವದ ವಿಚಾರ ಸೇರಿದಂತೆ ಹಲವು ಕಾರಣಗಳಿಂದ ಬಿಗ್ ಬಾಸ್ ಹಿಂದಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿ ಚಾಹತ್ ಪಾಂಡೆ (Chaahat Pandey) ಇಂಟರ್ ನೆಟ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ʼಸೀಕ್ರೆಟ್ ಬಾಯ್ ಫ್ರೆಂಡ್ʼ ವಿಚಾರ.
ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಫ್ಯಾಮಿಲಿ ವೀಕ್ ನಡೆದಿತ್ತು. ಇಡೀ ವಾರ ದೊಡ್ಮನೆಗೆ ಸ್ಪರ್ಧಿಗಳ ಪೋಷಕರು ಬಂದು ತನ್ನ ಮಕ್ಕಳ ಜತೆ ಸಮಯವನ್ನು ಕಳೆಯುವುದರ ಜತೆಗೆ ಇತರೆ ಸ್ಪರ್ಧಿಗಳ ಸರಿ – ತಪ್ಪಿನ ಬಗ್ಗೆ ಮಾತನಾಡಿದ್ದರು.
ಚಾಹತ್ ಪಾಂಡೆ ಅವರ ತಾಯಿ ಹೇಳಿದ ಮಾತು ನೆಟ್ಟಿಗರ ಗಮನ ಸೆಳೆದಿದೆ. ತಮ್ಮ ಮಗಳು ಯಾವತ್ತೂ ಕುಟುಂಬದ ವಿರುದ್ಧ ಹೋಗುವುದಿಲ್ಲ. ಆಕೆಗೆ ಯಾವುದೇ ಬಾಯ್ ಫ್ರೆಂಡ್ ಇಲ್ಲವೆಂದು ವೀಕ್ಷಕರ ಮುಂದೆಯೇ ಹೇಳಿದ್ದಾರೆ. ಇದಲ್ಲದೆ ಚಾಹತ್‌ಗೆ ಬಾಯ್ ಫ್ರೆಂಡ್ ಇದ್ದಾರೆ ಎಂದಿದ್ದ ಅವಿನಾಶ್ ಮಿಶ್ರಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅದೇ ಸಮಯದಲ್ಲಿ ಸಲ್ಮಾನ್ ಖಾನ್, ʼಹ್ಯಾಪಿ 5th ಆ್ಯನಿವರ್ಸರಿ ಮೈ ಲವ್ʼ ಎಂದು ಕೇಕ್ ವೊಂದರ ಮುಂದೆ ಚಾಹತ್ ಕೂತಿರುವ ಫೋಟೋವನ್ನು ತೋರಿಸಿ ನಿಮ್ಮ ತಾಯಿ ನಿಮಗೆ ನಿಮ್ಮ ವ್ಯಕ್ತಿತ್ವ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮಗೆ ಹುಡುಗಿಯ ಸುತ್ತ ಸುತ್ತುವ ಹುಡುಗ ಇಷ್ಟವೆಲ್ಲವೆಂದಿದ್ದಾರೆ. ಆದರೆ ನಮ್ಮ ತಂಡಕ್ಕೆ ಕೆಲವರು ಏನೋ ಕಳುಹಿಸಿದ್ದಾರೆ ಎಂದು ಫೋಟೋ ತೋರಿಸಿದ್ದಾರೆ. ಇದಕ್ಕೆ ಅವಿನಾಶ್ ಮೇಲೆ ಚಾಹತ್ ರೇಗಾಡಿ ಹೀಗೆ ಮಾಡಬೇಡಿ ಎಂದಿದ್ದಾರೆ. ಇದಕ್ಕೆ ಸಲ್ಮಾನ್ ಖಾನ್ ಇದ್ರೆ ಇದೆ ಹೇಳಿ ಇಲ್ಲಂದ್ರೆ ಇಲ್ಲ ಹೇಳಿವೆಂದಿದ್ದಾರೆ. ಹೀಗೆ ಇಲ್ಲ ಸರ್ ಎಂದು ಸಲ್ಮಾನ್ ಬಳಿ ಚಾಹತ್ ಹೇಳಿದ್ದಾರೆ.
ಇದೀಗ ಚಾಹತ್ ಅವರ ತಾಯಿ ಬಿಗ್ ಬಾಸ್ ತಂಡದವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ನನ್ನ ಮಗಳಿಗೆ ಯಾವುದೇ ಹುಡುಗವಿಲ್ಲ. ಒಂದು ವೇಳೆ ಬಿಗ್ ಬಾಸ್ ತಂಡದವರು ತೋರಿಸಿದ ಹಾಗೆ ಅವಳಿಗೆ ಪ್ರಿಯಕರ ಇದ್ದರೆ ಅವನ ಫೋಟೋ, ಹೆಸರನ್ನು ಬಹಿರಂಗಪಡಿಸಿ. ಹೀಗೆ ಮಾಡಿದರೆ ಬಿಗ್ ಬಾಸ್ ತಂಡಕ್ಕೆ 21 ಲಕ್ಷ ರೂ. ನಗದು ನೀಡುತ್ತೇನೆ ಎಂದು ಓಪನ್ ಚಾಲೆಂಜ್ ಹಾಕಿರುವುದಾಗಿ ವರದಿ ತಿಳಿಸಿದೆ.
‘ನಾಥ್ ಜೆವಾರ್ ಯಾ ಝಂಜೀರ್’ ಧಾರಾವಾಹಿ ಸೆಟ್‌ನಲ್ಲಿ ಚಾಹತ್ ತಮ್ಮ ಬಾಯ್ ಫ್ರೆಂಡ್‌ನಿಂದ ಪ್ರತಿನಿತ್ಯ ಗಿಫ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಸಹ ಸ್ಪರ್ಧಿಗಳೊಂದಿಗೆ ಅವಿನಾಶ್ ಹೇಳಿದ್ದರು.
ಚಾಹತ್ ಗುಜರಾತಿ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಲ್ಮಾನ್ ಸುಳಿವು ನೀಡಿದ್ದರು. ಬಿಗ್ ಬಾಸ್ 18 ಮನೆಗೆ ಪ್ರವೇಶಿಸುವ ಮೊದಲು ಚಾಹತ್ ತನ್ನ ಗೆಳೆಯನನ್ನು ತನ್ನ ತಾಯಿಗೆ ಪರಿಚಯಿಸಿದ್ದಳು. ಆದರೆ ಆ ವ್ಯಕ್ತಿ ಬೇರೆ ಜಾತಿಯಿಂದ ಬಂದಿದ್ದರಿಂದ ಆಕೆಯ ತಾಯಿ ಈ ಸಂಬಂಧವನ್ನು ವಿರೋಧಿಸಿದ್ದರು ಇಂಡಿಯಾ ಫೋರಮ್ಸ್ ವರದಿ ಮಾಡಿ ತಿಳಿಸಿದೆ.