Advertisement

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

12:33 AM Jan 06, 2025 | Team Udayavani |

ಹೊಸದಿಲ್ಲಿ: ಯುಟ್ಯೂಬರ್‌ ಅಂಕುಶ್‌ ಬಹುಗುಣ ಅವರಿಗೆ ಸೈಬರ್‌ ವಂಚಕರು 40 ಗಂಟೆಗಳ ಕಾಲ ಡಿಜಿಟಲ್‌ ಅರೆಸ್ಟ್‌ ಮಾಡಿದ ಘಟನೆ ನಡೆದಿದೆ.

Advertisement

ಈ ಬಗ್ಗೆ ಅವರೇ ಇನ್‌ಸ್ಟಾ ಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ವೀಡಿಯೋದಲ್ಲಿ ಅನುಭವ ಹಂಚಿಕೊಂಡಿ ದ್ದಾರೆ. “ನನಗೆ ವಿದೇಶಿ ಸಂಖ್ಯೆಯಿಂದ ಕರೆ ಬಂದಿತ್ತು. ಅದನ್ನು ರಿಸೀವ್‌ ಮಾಡಿದಾಗ ಅವರು ಪೊಲೀಸ್‌ ಅಧಿಕಾರಿಗಳೆಂದು ಹೇಳಿದರು.

ಕಾನೂನುಬಾಹಿರವಾಗಿ ಪಾರ್ಸೆಲ್‌ ಅನ್ನು ಕಳುಹಿಸಿದ್ದರಿಂದ ನನ್ನನ್ನು “ಸೈಬರ್‌ ಅರೆಸ್ಟ್‌” ಮಾಡುತ್ತಿರುವುದಾಗಿ ಅವರು ಹೇಳಿದರು. ನನ್ನ ವಿರುದ್ಧ ಬಂಧನಕ್ಕೆ ವಾರಂಟ್‌ ಇರುವುದಾಗಿ ಬೆದರಿಸಿದ್ದರು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next