ಮಣಿಪಾಲ: ದೇಶದೆಲ್ಲಡೆ ಕೊರೊನಾ ಭೀತಿ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿಯ ಐಪಿಎಲ್ ಕೂಟವನ್ನು ಮುಂದೂಡಬೇಕು ಎಂಬ ವಾದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದ, ಆಯ್ದ ಉತ್ತರಗಳು ಇಲ್ಲಿದೆ.
ಸಂತೋಷ್ ಡಿಸೋಜಾ: ಒಂದೇ ಕಡೆ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಬೇಕೆಂದು ಮೊನ್ನೆ ಪ್ರಧಾನಿಯೇ ಹೇಳಿದ್ದಾರೆ. ಆದರೂ ದುಡ್ಡಿನ ಆಸೆಗಾಗಿ ಈ ಬಾರಿಯ ಐಪಿಎಲ್ ಕೂಟ ರದ್ದುಪಡಿಸಲ್ಲ ಎಂದು ಕ್ರಿಕೆಟ್ ಮಂಡಳಿ ಹೇಳಿರುವುದು ನಾಚಿಕೆಗೇಡು. ಐಪಿಎಲ್ ಕೂಟಕ್ಕೆ ಮಾತ್ರ ಯಾಕೆ ವಿನಾಯಿತಿ?ದೇಶದ ಜನರ ಆರೋಗ್ಯಗಿಂತ ಐಪಿಎಲ್ ಮುಖ್ಯವೇ? ಕೇಂದ್ರ ಸರ್ಕಾರ ಉತ್ತರಿಸಲಿ.
ಬದ್ರಿನಾಥ್ ಪ್ರಹ್ಲಾದ್: ಹೌದು. ಐಪಿಲ್ ರದ್ದಾಗುವುದರಿಂದ ಬಿಸಿಸಿಐ ಹಾಗೂ ಆಟಗಾರರಿಗಷ್ಟೇ ನಷ್ಟ. ಮೊದಲೇ ಅವಾಂತರ ಸೃಷ್ಟಿಸಿರುವ ಕೊರೋನಾ ದಿಂದ ಜೀವಗಳ ಜೊತೆ ಮತ್ತಷ್ಟು ಆಟವಾಡುವುದು ಬೇಡ. ಐಪಿಲ್ ಯಾವಾಗ ಬೇಕಾದರೂ ಆಡಬಹುದು. ಪ್ರಸ್ತುತ ಮೊದಲ ಆದ್ಯತೆ, ಕೊರೋನ ಹರಡದಂತೆ ಎಷ್ಟರ ವಹಿಸುವುದು.
ಮಹೇಶ್ ಗೋವಿ: ದೇಶಕ್ಕಿಂತ ಮುಖ್ಯವಾದದು ಯಾವುದು ಇಲ್ಲ, ಬೇಕಿದ್ದರೆ ಈವರ್ಷ ಐಪಿಎಲ್ ಕ್ರಿಕೆಟ್ ಟೂರ್ನಿ ರದ್ದಾಗಲಿ.
ಶ್ರೀಧರ್ ಉಡುಪ: ಅಂತರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಈಗಾಗಲೇ ನಿಗದಿಯಾಗಿರುವ ಕಾರಣ ಐಪಿಎಲ್ ಪಂದ್ಯಕೂಟವನ್ನು ಮುಂದೂಡುವ ಸಾಧ್ಯತೆ ಇಲ್ಲ. ಆದರೆ ಕರೋನ ವೈರಸ್ ಹಾವಳಿ ದೇಶದಲ್ಲಿ ಇನ್ನೂ ಹೆಚ್ಚಾದರೆ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಪಂದ್ಯಕೂಟವನ್ನು ಈ ವರ್ಷ ರದ್ದುಗೊಳಿಸುವಂತೆ ಸರಕಾರವು ಬಿಸಿಸಿಐಗೆ ಆದೇಶಿಸುವುದು ಅನಿವಾರ್ಯವಾಗಬಹುದು. ಇನ್ನು ಪ್ರೇಕ್ಷಕರನ್ನು ನಿರ್ಬಂಧಿಸಿ ಟಿವಿ ವೀಕ್ಷಕರಿಗೆ ಮಾತ್ರ ಪಂದ್ಯಕೂಟವನ್ನು ಆಯೋಜಿಸಿದರೆ ಆಟದಲ್ಲಿ ಯಾವುದೇ ನೈಜ ಸ್ವಾರಸ್ಯ ಉಳಿಯುವುದಿಲ್ಲ.