Advertisement

ಅಂಧರ ಬಾಳಿಗೆ ಬೆಳಕಾದ ನೇತ್ರ ಭಂಡಾರ

03:09 PM Nov 08, 2021 | Team Udayavani |

ಬಳ್ಳಾರಿ: “ಕಣ್ಣು’ ನಮ್ಮ ದೇಹದ ಪುಟ್ಟ ಅಂಗವಾದರೂ,ಅಷ್ಟೇ ಶ್ರೇಷ್ಠ ಅಂಗ. ಇಂಥ ಅಮೂಲ್ಯ “ಕಣ್ಣು’ಗಳನ್ನುಸಂಗ್ರಹಿಸಿಡಲು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿದಶಕದ ಹಿಂದೆಯೇ ವಿಮ್ಸ್‌ನಲ್ಲಿ ನೇತ್ರ ಭಂಡಾರಸ್ಥಾಪನೆಯಾಗಿದ್ದು, ನೂರಾರು ಜನರಿಗೆ ಕಣ್ಣು ಕಸಿಮಾಡುವ ಮೂಲಕ ಅಂಧರ ಬಾಳಲ್ಲಿ ಬೆಳಕಾಗಿದೆ.

Advertisement

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಶಕದಹಿಂದೆಯೇ “ನಿತ್ಯಜ್ಯೋತಿ ನೇತ್ರಭಂಡಾರ’ವನ್ನು ಸ್ಥಾಪಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇಮೊದಲ ನೇತ್ರ ಭಂಡಾರವಾಗಿದೆ. ಸಂಸ್ಥೆಯಲ್ಲಿಕಳೆದ ಹತ್ತು ವರ್ಷಗಳಲ್ಲಿ 1180 ಜನ ಹೆಸರು ನೋಂದಾಯಿಸಿ ನೇತ್ರದಾನ ಮಾಡುವ ಸಂಕಲ್ಪ ಮಾಡಿದ್ದಾರೆ.

ಇನ್ನು ರಸ್ತೆ ಅಪಘಾತ, ಆಸ್ಪತ್ರೆಗಳಲ್ಲೇ ಮೃತಪಟ್ಟವರಿಂದ ಈವರೆಗೆ ಪ್ರತಿ ತಿಂಗಳು ಸರಾಸರಿ3-5 ಜನರಿಂದ 10 ಕಣ್ಣುಗಳಂತೆ ವರ್ಷದಲ್ಲಿ 80-100 ಕಣ್ಣುಗಳು, 10 ವರ್ಷಗಳಲ್ಲಿ ಸುಮಾರು1 ಸಾವಿರ ಜನರಿಂದ ಕಣ್ಣುಗಳನ್ನು ಪಡೆಯಲಾಗಿದ್ದು,ಈವರೆಗೆ ಒಟ್ಟು 400 ಜನರಿಗೆ ಕಣ್ಣುಗಳನ್ನು ಕಸಿಮಾಡುವ ಮೂಲಕ ಅಂಧರ ಬಾಳಲ್ಲಿ ಬೆಳಕು ಮೂಡಿಸಲಾಗಿದೆ.

ಕಣ್ಣುಗಳ ಕೊರತೆ: ಕಣ್ಣುಗಳ ಕೃತಕ ಸೃಷ್ಟಿ ಅಸಾಧ್ಯ.ಹೀಗಾಗಿ ದೃಷ್ಟಿ ಇಲ್ಲದವರಿಗೆ ಉಳ್ಳವರು ತಮ್ಮಮರಣದ ನಂತರ ದಾನ ಮಾಡುವುದರಿಂದ ಮಾತ್ರದೃಷ್ಟಿ ಕೊಡಲು ಸಾಧ್ಯ. ಹಾಗಾಗಿ ಮನುಷ್ಯ ಸತ್ತನಂತರ ತಮ್ಮ ಆರೋಗ್ಯಕರ “ಕಣ್ಣು’ಗಳನ್ನು ಮಣ್ಣಲ್ಲಿಮಣ್ಣಾಗಲು ಬಿಡದೆ ದಾನ ಮಾಡಿದರೆ ಅಂಧರ ಬಾಳಲ್ಲಿ ಬೆಳಕು ಮೂಡಿಸಬಹುದು.

ಅವಿಭಜಿತಬಳ್ಳಾರಿ ಜಿಲ್ಲೆಯಲ್ಲಿ ಅಪಘಾತ, ಆಸ್ಪತ್ರೆಗಳಲ್ಲಿಮೃತಪಟ್ಟವರಿಂದ ಕಣ್ಣುಗಳನ್ನು ಪಡೆದು ಕಸಿಮಾಡಿದರೂ, ಉಭಯ ಜಿಲ್ಲೆಗಳಲ್ಲಿ ಕಣ್ಣು ಕಸಿಗಾಗಿ60ಕ್ಕೂ ಹೆಚ್ಚು ಅಂಧರು ಹೆಸರು ನೋಂದಾಯಿಸಿದ್ದಾರೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಬೆಂಗಳೂರುನೇತ್ರ ಭಂಡಾರದಿಂದಲೂ ಕಣ್ಣುಗಳನ್ನು ತರಿಸಿ ಕಸಿಮಾಡಲಾಗಿದೆ ಎಂದು ಭಂಡಾರದ ನಿರ್ದೇಶಕಪರಸಪ್ಪ ಬಂದ್ರಕಳ್ಳಿ ಹೇಳುತ್ತಾರೆ.

Advertisement

ಒಬ್ಬರ ಕಣ್ಣು ಇಬ್ಬರಿಗೆ ಕಸಿ: ಕಳೆದ ವಾರ ಮೃತಪಟ್ಟಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಂದ ಪಡೆದಎರಡು ಕಣ್ಣುಗಳನ್ನು ನಾಲ್ಕುಜನರಿಗೆ ಕಸಿ ಮಾಡಲಾಗಿದೆ.ಆದರೆ, ಅಷ್ಟು ಅತ್ಯಾಧುನಿಕತಂತ್ರಜ್ಞಾನ ಬಳ್ಳಾರಿಯ ನೇತ್ರಭಂಡಾರದಲ್ಲಿ ಇಲ್ಲ. ಇಲ್ಲಿ ಒಬ್ಬರಿಂದಪಡೆದ ಕಣ್ಣುಗಳನ್ನು ಇಬ್ಬರಿಗೆ ಕಸಿ ಮಾಡಬಹುದು.ನಾಲ್ಕು ಜನರಿಗೆ ಕಸಿ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ 2017ರಲ್ಲೇ ವಿಮ್ಸ್‌ ನಿರ್ದೇಶಕರಿಗೆಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದಕ್ಕೆ 24-28 ಲಕ್ಷರೂ. ಖರ್ಚಾಗಲಿದೆ. ಆದರೆ, ಅನುದಾನದಕೊರತೆಯಿಂದಾಗಿ ಕಳೆದ ಎರಡು ವರ್ಷಗಳಿಂದಪ್ರಸ್ತಾವನೆ ಮುಂದೂಡುತ್ತಾ ಬರಲಾಗಿದೆ. ಪುನೀತ್‌ಘಟನೆಯಿಂದಾಗಿ ಇದೀಗ ವಿಮ್ಸ್‌ನಲ್ಲೂ ಪ್ರಸ್ತಾವನೆಮುನ್ನೆಲೆಗೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆಅವರು.

ಕರಿಗುಡ್ಡೆ ತೊಂದರೆಯಿದ್ದರಷ್ಟೇ ಕಸಿ: ಕಣ್ಣುಗಳುಕಾಣದೆ ಕುರುಡಾಗಲು ಹಲವು ಕಾರಣಗಳಿವೆ.ಇತರರ ಕಣ್ಣುಗಳನ್ನು ಕಸಿ ಮಾಡಿದರೆ ಕಣ್ಣುಕಾಣಲಿವೆ ಎಂದು ಬಹುತೇಕರು ನಂಬಿದ್ದಾರೆ. ಕಣ್ಣಿನಮುಂಭಾಗದ ಕಾರ್ನಿಯಾ (ಕರಿಗುಡ್ಡೆ), ಹಿಂಭಾಗದರೆಟಿನಾ ಸಮಸ್ಯೆ ಇದ್ದಾಗ ಕರಿಗುಡ್ಡೆಯನ್ನು ಕಸಿಮಾಡಿದರಷ್ಟೇ ಕಣ್ಣುಗಳು ಕಾಣಲಿವೆ. ಉಳಿದಂತೆಇನ್ನಿತರೆ ಸಮಸ್ಯೆಗಳಿಗೆ ಲೆನ್ಸ್‌ ಅಳವಡಿಕೆ ಸೇರಿ ಹಲವುಮಾರ್ಗಗಳು ಇವೆ.

ಹೆಸರು ನೋಂದಣಿ ಹೇಗೆ?: ಕಣ್ಣು ದಾನಮಾಡುವವರು ವಿಮ್ಸ್‌ನ ನಿತ್ಯಜ್ಯೋತಿ ನೇತ್ರಭಂಡಾರದಲ್ಲಿ ಅರ್ಜಿ ಭರ್ತಿ ಮಾಡಿಕೊಡಬೇಕಾಗಿದೆ.ಬಳಿಕ ಭಂಡಾರದವರು ಎರಡು ಕಾರ್ಡ್‌ಗಳನ್ನುಭರ್ತಿ ಮಾಡಿಕೊಂಡು ಅದರಲ್ಲಿ ದಾನಿಗಳ ಹತ್ತಿರದಸಂಬಂಧಿ ಗಳ ಸಹಿ, ಪರಮನೆಂಟ್‌ ವಿಳಾಸ,ಮೊಬೈಲ್‌ ಸಂಖ್ಯೆ ಪಡೆದುಕೊಳ್ಳುತ್ತಾರೆ. ಕಾರ್ಡ್‌ನಲ್ಲಿಸಂಸ್ಥೆಯ ಫೋನ್‌, ಮೊಬೈಲ್‌ ನಂಬರ್‌ ಸಹ ಅಗತ್ಯಮಾಹಿತಿ ಇರಲಿದ್ದು, ದಾನಿಗಳು ಮೃತಪಟ್ಟಾಗ,ಸಂಬಂಧಿ ಕರು ಕರೆ ಮಾಡಿದಲ್ಲಿ ಹೋಗಿ ಕಣ್ಣುಗಳನ್ನುಪಡೆಯಲಾಗುತ್ತದೆ. ಕಸಿ ಮಾಡಿಸಿಕೊಂಡವರಿಗೆಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆವಹಿಸಿ ಮನೆಯಲ್ಲೇ ಮೃತಪಟ್ಟ ದಾನಿಗಳಕಣ್ಣುಗಳೊಂದಿಗೆ 5 ಎಂಎಲ್‌ ರಕ್ತವನ್ನು ಸಹಪಡೆಯಲಾಗುತ್ತದೆ. ಆಸ್ಪತ್ರೆಯಲ್ಲಾದರೆ ಅವರ ಕೇರ್‌ಶೀಟ್‌ ಪರಿಶೀಲಿಸಲಾಗುತ್ತದೆ.

ವೆಂಕೋಬಿ ಸಂಗನ ಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next