Advertisement

Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ

07:26 AM Jan 02, 2025 | Team Udayavani |

ಮೇಷ: ವ್ಯಾವಹಾರಿಕವಾಗಿ ಈ ದಿನ ನಿಮ್ಮ ಪಾಲಿಗೆ ಅದೃಷ್ಟವನ್ನು ತಂದುಕೊಡಲಿದೆ. ಉದ್ಯಮಿಗಳಿಗೆ ಕಡಿಮೆಯಾದ ಸಮಸ್ಯೆಗಳು. ಆಪ್ತರ ಬಳಿ ಅನಗತ್ಯ ಚರ್ಚೆಗೆ ಅವಕಾಶ ಕೊಡಬೇಡಿ. ಮಹಿಳಾ ಉದ್ಯಮಿಗಳಿಗೆ ಸಾಮಾನ್ಯ ಯಶಸ್ಸು.

Advertisement

ವೃಷಭ: ಹೊಸ ಸಂಕಲ್ಪದೊಂದಿಗೆ ಕಾರ್ಯಾರಂಭ. ಶಿಕ್ಷಿತ ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರ ನಷ್ಟಕ್ಕೆ ದಾರಿ. ಖಾದಿ ವಸ್ತ್ರ ಉದ್ಯಮಿಗಳಿಗೆ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ.

ಮಿಥುನ: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಅಪಾತ್ರರಿಗೆ ಸಲಹೆ ನೀಡಿ ಅವಮಾನ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಹೇರಳ ಲಾಭ. ಹಳೆಯ ಒಡನಾಡಿಗಳ ಭೇಟಿ ಸಂಭವ.

ಕರ್ಕಾಟಕ: ಉದ್ಯೋಗಸ್ಥರಿಗೆ ಸೌಲಭ್ಯಗಳ ಹೆಚ್ಚಳ. ಉದ್ಯಮಿಗಳಲ್ಲಿ ಕೆಲವರಿಗೆ ಮಾರಾಟ ಜಾಲದ ಸಮಸ್ಯೆ. ಸರಕಾರಿ ಸೌಲಭ್ಯಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಚಾರಿತ್ರ್ಯವಂತರ ಹೆಸರು ಕೆಡಿಸಲು ಸಂಚು.

ಸಿಂಹ: ಹೊಸ ಸ್ಥಾನಕ್ಕೆ ವರ್ಗಾವಣೆ ಸಂಭವ. ಹೊಸ ರೂಪ ತಳೆದ ಉದ್ಯಮಕ್ಕೆ ಶುಭದಿನ. ಕುಟುಂಬದ ಮನೆಯಲ್ಲಿ ದೇವತಾ ಕಾರ್ಯ. ಆರೋಗ್ಯದ ಬಗ್ಗೆ ಗಮನಹರಿಸಿ. ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ. ಖರ್ಚು ಮಿತಿಮೀರದಿರಲಿ.

Advertisement

ಕನ್ಯಾ: ಉದ್ಯೋಗ, ವ್ಯವಹಾರ ಎರಡಕ್ಕೂ ಶುಭದಿನ. ಕೃಷಿ ಬೆಳೆಗಳಿಗೆ ಕಾಡುಪ್ರಾಣಿಗಳ ಕಾಟ. ಪಾಲುದಾರಿಕೆ ಉದ್ಯಮ ಮುನ್ನಡೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಅಧ್ಯಾಪಕರಿಗೆ, ಶಸ್ತ್ರವೈದ್ಯರಿಗೆ ಹರ್ಷದ ದಿನ.

ತುಲಾ: ಪಂಚಮ ಶನಿಯಿಂದ ಸಾಧನೆಗೆ ಉತ್ತೇಜನ. ಪ್ರಾಮಾಣಿಕ ಉದ್ಯಮಿಯ ಹೆಸರು ಕೆಡಿಸುವ ಸಂಚು. ಸಾರ್ವಜನಿಕ ವ್ಯಕ್ತಿಗಳ ಪ್ರತಿಷ್ಠೆಗೆ ಹಾನಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ. ಲೇವಾದೇವಿ ವ್ಯವಹಾರದಿಂದ ದೂರವಿರಿ.

ವೃಶ್ಚಿಕ: ಸರ್ವವಿಧಗಳಲ್ಲೂ ಶುಭವಾಗಿರುವ ದಿನ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ದುಂದುವೆಚ್ಚಕ್ಕೆ ಕೈ ಹಾಕದಿರಿ.

ಧನು: ಉದ್ಯೋಗ ಘಟಕದ ಕಾರ್ಯ ಸುಧಾರಣೆಯ ಹೊಣೆಗಾರಿಕೆ. ಸರಕಾರಿ ಕಾರ್ಯಾಲಯಗಳಲ್ಲಿ ಮಧ್ಯವರ್ತಿಗಳಿಂದ ತೊಂದರೆ. ಉದ್ಯಮದ ವೈವಿಧ್ಯೀಕರಣ ಕ್ರಮಕ್ಕೆ ಮುನ್ನಡೆ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ.

ಮಕರ: ಕಾರ್ಯಕ್ಷಮತೆ ವೃದ್ಧಿಗೆ ಪರಿಶ್ರಮ. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಸಾಧ್ಯತೆ. ಕೇಟರಿಂಗ್‌ ವೃತ್ತಿಯವರಿಗೆ ಅಧಿಕ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.

ಕುಂಭ: ಕೆಲಸ, ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಅಧಿಕ ಕೆಲಸದ ಚಿಂತೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ.

ಮೀನ: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಕಾರ್ಯಗಳು ಇಲಾಖೆಯವರ ಸಹಕಾರದಿಂದ ಯಶಸ್ವಿ. ಪುನರಾರಂಭಗೊಂಡ ಉದ್ಯಮ ಮುನ್ನಡೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆಶಯ ನೆರವೇರಿಸಲು ಸಿದ್ಧತೆ. ಮನೆಯಲ್ಲಿ ಮಂಗಳಕರ ಕಾರ್ಯಕ್ಕೆ ಮುನ್ನುಡಿ.

Advertisement

Udayavani is now on Telegram. Click here to join our channel and stay updated with the latest news.

Next