Advertisement

ಜ್ಯಾಕ್ ಕ್ರಾವ್ಲಿ ದ್ವಿಶತಕ, ಬಟ್ಲರ್ ಶತಕದ ಮೆರೆದಾಟ: ಪಾಕಿಸ್ಥಾನ ಪರದಾಟ

08:34 AM Aug 23, 2020 | keerthan |

ಸೌಥಂಪ್ಟನ್: ಇಂಗ್ಲೆಂಡ್ ಬೇಸಿಗೆಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೂಟ್ ಪಡೆ ಭರ್ಜರಿ ಆಟದಿಂದ ಮೆರೆದಾಡಿದೆ. ಜ್ಯಾಕ್ ಕ್ರಾವ್ಲಿ ದ್ವಿಶತಕ, ಜೋಸ್ ಬಟ್ಲರ್ ಶತಕ ಮತ್ತು ಜೇಮ್ಸ್ ಆ್ಯಂಡರ್ಸನ್ ಭರ್ಜರಿ ದಾಳಿ ಯ ನೆರವಿನಿಂದ ಭಾರಿ ಮುನ್ನಡೆ ಸಾಧಿಸಿದೆ.

Advertisement

ಇಂಗ್ಲೆಂಡ್ ಪಡೆ ಎಂಟು ವಿಕೆಟ್ ನಷ್ಟಕ್ಕೆ 583 ರನ್ ಗಳಿಸಿದರೆ, ಪಾಕಿಸ್ಥಾನ 24 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಶತಕ ಬಾರಿಸಿದ ಕ್ರಾವ್ಲಿ ಅದನ್ನೇ ದ್ವಿಶತಕವನ್ನಾಗಿಸಿದರು. 24 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಕ್ರಾವ್ಲಿ 267 ರನ್ ಗಳಿಸಿದರು. ಉತ್ತಮ ಫಾರ್ಮ್ ನಲ್ಲಿರುವ ಜೋಸ್ ಬಟ್ಲರ್ 152 ರನ್ ಗಳಿಸಿದರು. ಐದನೇ ವಿಕೆಟ್ ಗೆ ಈ ಜೋಡಿ 359 ರನ್ ಜೊತೆಯಾಟ ನಡೆಸಿತು.

ದಿನದ ಅಂತ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಪಾಕ್ ಮೊದಲ ಮೂರು ವಿಕೆಟ್ ಕಳೆದುಕೊಂಡಿದೆ. ಶಾನ್ ಮಸೂದ್, ಅಬಿದ್ ಅಲಿ ಮತ್ತು ಬಾಬರ್ ಅಜಂ ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next