Advertisement
ಶನಿವಾರದ ಮೊದಲ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಆದರೆ ರವಿವಾರದ ಹವಾಮಾನ ಆಟಕ್ಕೆ ಸಹಕರಿಸಿತು. ಹೀಗಾಗಿ ತಲಾ 46 ಓವರ್ಗಳ ಪಂದ್ಯವನ್ನು ಆಡಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಪ್ರೈಮ್ ಮಿನಿಸ್ಟರ್ ಇಲೆವೆನ್ 43.2 ಓವರ್ಗಳಲ್ಲಿ 240ಕ್ಕೆ ಆಲೌಟಾದರೆ, ಭಾರತ 42.5 ಓವರ್ಗಳಲ್ಲೇ 4 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಆದರೆ ಪೂರ್ತಿ 46 ಓವರ್ಗಳನ್ನಾಡಿ 5 ವಿಕೆಟಿಗೆ 257 ರನ್ ಗಳಿಸಿತು.
ಬೌಲಿಂಗ್ನಲ್ಲಿ ಹರ್ಷಿತ್ ರಾಣಾ 6 ಎಸೆತಗಳ ಅಂತರದಲ್ಲಿ 4 ವಿಕೆಟ್ ಉಡಾಯಿಸಿ ಮಿಂಚಿದರು. ರಾಣಾ ಸಾಧನೆ 44ಕ್ಕೆ 4. ಆಕಾಶ್ ದೀಪ್ 58ಕ್ಕೆ 2 ವಿಕೆಟ್ ಕೆಡವಿದರು. ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್, ಜಡೇಜ ಒಂದೊಂದು ವಿಕೆಟ್ ಸಂಪಾದಿಸಿದರು. ಶುಭಮನ್ ಗಿಲ್ ಸರ್ವಾಧಿಕ 50 ರನ್ ಬಾರಿಸಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರು.
Related Articles
Advertisement
ಕೋನ್ಸ್ಟಾಸ್ ಶತಕಆತಿಥೇಯ ತಂಡದ ಆರಂಭಕಾರ ಸ್ಯಾಮ್ ಕೋನ್ಸ್ಟಾಸ್ 107 ರನ್ ಬಾರಿಸಿ ಆಯ್ಕೆ ಮಂಡಳಿಯ ಕದ ತಟ್ಟಿದರು (97 ಎಸೆತ, 14 ಬೌಂಡರಿ, 1 ಸಿಕ್ಸರ್). ಹ್ಯಾನೊ ಜೇಕಬ್ಸ್ 61, ಜಾಕ್ ಕ್ಲೇಟನ್ 40 ರನ್ ಕೊಡುಗೆ ಸಲ್ಲಿಸಿದರು.