Advertisement
ಇದು 15 ವರ್ಷಗಳ ಬಳಿಕ ಕೆರಿಬಿಯನ್ ನೆಲದಲ್ಲಿ ಬಾಂಗ್ಲಾದೇಶಕ್ಕೆ ಒಲಿದ ಮೊದಲ ಟೆಸ್ಟ್ ಗೆಲುವು ಕೂಡ ಆಗಿದೆ. 2009ರ ಪ್ರವಾಸದ ವೇಳೆ ಬಾಂಗ್ಲಾ 2-0 ಜಯ ಸಾಧಿಸಿತ್ತು. ಅನಂತರದ ಅವಧಿಯಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಆಡಿದ ಏಳೂ ಟೆಸ್ಟ್‌ಗಳನ್ನು ಸೋತಿತ್ತು. ಇದರಲ್ಲಿ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಕೂಡ ಸೇರಿದೆ.
ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ 5 ವಿಕೆಟ್ ಉರುಳಿಸಿ ವಿಂಡೀಸಿಗೆ ಘಾತಕವಾಗಿ ಪರಿಣಮಿಸಿದರು. ಚೇಸಿಂಗ್ ವೇಳೆ ಕವೆಮ್ ಹಾಜ್ ಸರ್ವಾಧಿಕ 55, ನಾಯಕ ಕ್ರೆಗ್ ಬ್ರಾತ್‌ವೇಟ್ 43 ರನ್ ಮಾಡಿದರು. ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ-164 ಮತ್ತು 268, ವೆಸ್ಟ್ ಇಂಡೀಸ್-146 ಮತ್ತು 185.
Related Articles
Advertisement
ಸರಣಿಶ್ರೇಷ್ಠ: ತಸ್ಕಿನ್ ಅಹ್ಮದ್, ಜೇಡನ್ ಸೀಲ್ಸ್.