Advertisement
35 ವರ್ಷಗಳಿಂದ ಕಂಬಳದ ಕೋಣಗಳನ್ನು ಓಡಿಸುತ್ತಿದ್ದ ಇವರು, ಗ್ರಾಮೀಣ ಕ್ರೀಡೆ ಕಂಬಳ ಕ್ಷೇತ್ರದ ವಿಶಿಷ್ಟ ಸಾಧನೆಗೈದು ಸುಮಾರು 600 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಕಂಬಳದ 16 ಕಡೆ ಭಾಗವಹಿಸಿ 24 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ಕನೆಹಲಗೆ ಮತ್ತು ಅಡ್ಡಹಲಗೆಯ ಕೋಣಗಳನ್ನು ಓಡಿಸುತ್ತಿದ್ದರು. ಈ ಹಿಂದೆ ಕೋಣಗಳನ್ನು ಹೊಂದಿದ್ದ ಇವರು ಇದೀಗ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೇರಳ, ಮಂಜೇಶ್ವರ, ಬಾರ್ಕೂರು ಕಡೆಗಳಲ್ಲಿಯೂ ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಿದ್ದ ಇವರು, ಸುಮಾರು 15 ಕಡೆಗಳಲ್ಲಿ ಸಮ್ಮಾನ ಸ್ವೀಕರಿಸಿದ್ದಾರೆ.
ಪ್ರಶಸ್ತಿಯಲ್ಲಿ ರೂ. 1 ಲಕ್ಷ ನಗದು, ಫಲಕ, ಪ್ರಶಸ್ತಿಪತ್ರ ಒಳಗೊಂಡಿದೆ. ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಟ್ಟಿಯನ್ನು ಪ್ರಕಟಿಸಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸರಕಾರ ರಾಜ್ಯ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಖುಷಿ ತಂದಿದೆ. ಗ್ರಾ. ಪ್ರದೇಶದಲ್ಲಿ ಜನಿಸಿದ ನನಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಚಿರಋಣಿ. ನನಗೆ 63 ವರ್ಷ ವಯಸ್ಸಾಗಿದ್ದು, ಕೋಣಗಳ ಓಟಗಾರನಾಗಿ ಮುಂದುವರಿಯುವ ಹುಮ್ಮಸ್ಸು ಇದೆ.
-ಯುವರಾಜ ಜೈನ್