Advertisement

ಹೆಬ್ಬಾಳದಲ್ಲಿ ಯುವತಿಯ ಅಪಹರಣ;ಮೂವರು ಕಾಮುಕರಿಂದ ಗ್ಯಾಂಗ್‌ರೇಪ್‌ 

01:35 PM Jul 28, 2018 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಇನ್ನೊಂದು ಗ್ಯಾಂಗ್‌ರೇಪ್‌ ಪ್ರಕರಣ ಬೆಳಕಿಗೆ ಬಂದಿದ್ದು  ಹೆಬ್ಬಾಳದಲ್ಲಿ  ಶುಕ್ರವಾರ ಯುವತಿಯೊಬ್ಬಳನ್ನು ಅಪಹರಿಸಿ ಗ್ಯಾಂಗ್‌ರೇಪ್‌ ಎಸಗಿರುವ ಕಳವಳಕಾರಿ ಘಟನೆ ನಡೆದಿದೆ. 

Advertisement

ಮನೋರಾಯನ ಪಾಳ್ಯದ ಮನೆಯಿಂದ ಯುವತಿಯನ್ನು ಅಪಹರಿಸಿದ್ದ ಸಂತೋಷ್‌, ಆಕಾಶ್‌ ಮತ್ತು ಜೋಸೆಫ್ ಎನ್ನುವ ಮೂವರು ಗ್ಯಾಂಗ್‌ ರೇಪ್‌ ಎಸಗಿದ್ದಾರೆ.

ಹೆಬ್‌ಬಾಳ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next