ಬಾಲಿವುಡ್‌ನಲ್ಲಿ, ಸಿನಿಮಾಗಳ ವಸ್ತ್ರವಿನ್ಯಾಸದಿಂದ ಪ್ರೇರಣೆ ಪಡೆದು ವಸ್ತ್ರಗಳನ್ನು ವಿನ್ಯಾಸ ಮಾಡುವುದು ಸಾಮಾನ್ಯ ಸಂಗತಿ. ದಶಕಗಳ ಹಿಂದೆ ದಕ್ಷಿಣದಲ್ಲೂ ಈ ಟ್ರೆಂಡನ್ನು ಕಾಣಬಹುದಿತ್ತು. ವಸ್ತ್ರ ವಿನ್ಯಾಸಕಿ ಲತಾ ಪುಟ್ಟಣ್ಣನವರು ಈ ಕೊರತೆಯನ್ನು ತುಂಬಲು ಹೊರಟಿದ್ದಾರೆ. ಕಪ್ಪು ಬಿಳುಪು ಜಮಾನದಲ್ಲಿ ನಾಯಕಿಯರು ತೊಡುತ್ತಿದ್ದ ಸೀರೆಗಳು, ಲಂಗ ದಾವಣಿಗಳಿಂದ ಪ್ರೇರಣೆ ಪಡೆದು ದಿರಿಸುಗಳ ಸರಣಿಯನ್ನು ವಿನ್ಯಾಸಗೊಳಿಸಿದ್ದಾರೆ. ದೀಪಾವಳಿಯ ಪ್ರಯುಕ್ತ ಲತಾ ಪುಟ್ಟಣ್ಣನವರು “ಯಶೋದಾ’ ಎಂಬ ವಸ್ತ್ರಮೇಳವನ್ನು ಆಯೋಜಿಸಿದ್ದು ಅಲ್ಲಿ ಈ ದಿರಿಸುಗಳ ಸರಣಿಯನ್ನು ನೋಡಬಹುದು, ಖರೀದಿಸಲೂಬಹುದು.
ಎಲ್ಲಿ?: ತಾಜ್ ವೆಸ್ಟೆಂಡ್, ರೇಸ್ ಕೋರ್ಸ್ ರಸ್ತೆ
ಯಾವಾಗ?: ಅ. 26- 27, ಬೆಳಿಗ್ಗೆ 10- ಸಂಜೆ 6
ಹೆಚ್ಚಿನ ಮಾಹಿತಿಗೆ: 080 26567349