Advertisement
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ “ಮಂಡ್ಯ ಟು ಇಂಡಿಯಾ’ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ ಕೇಂದ್ರದ ಕೈಗಾರಿಕಾ ಸಚಿವನಾಗಿರುವ ನನ್ನ ಜೊತೆಗೆ ಕೈಗಾರಿಕಾಭಿವೃದ್ಧಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಒಬ್ಬ ಮಂತ್ರಿಯೂ ಭೇಟಿಯಾಗಿಲ್ಲ. ಅವರಿಗೆ ರಾಜ್ಯವನ್ನು ಅಭಿವೃದ್ಧಿ ಮಾಡಬೇಕೆಂಬ ಹೃದಯ ವೈಶಾಲ್ಯತೆ ಇಲ್ಲ. ಪರಸ್ಪರ ವಿಶ್ವಾಸದಿಂದ ರಾಜ್ಯವನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಬೇಕು. ಕೇಂದ್ರದೊಂದಿಗೆ ಸಂಘರ್ಷ ಮಾಡಿದರೆ ಅಭಿವೃದ್ಧಿ ಅಸಾಧ್ಯ ಎಂದರು.
ಕುದುರೆಮುಖದಲ್ಲಿ ಗಣಿಗಾರಿಕೆ ಅಗತ್ಯವಾಗಿದೆ. ಆದರೆ, ಅಲ್ಲಿನ ಕಂಪನಿಯ ಕಾರ್ಯ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ತೊಂದರೆ ನೀಡುತ್ತಿದೆ. ಅದರ ಬಗ್ಗೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಷರತ್ತು ಉಲ್ಲಂಘನೆಯಾಗಿದ್ದರೆ, ಕಂಪನಿಯಿಂದ ಬರಬೇಕಾದ ಹಣದ ಲೋಪ ಇದ್ದರೆ ಬಗೆಹರಿಸುವ ಜವಾಬ್ದಾರಿ ನನ್ನದು. ಆದರೆ, ತೊಂದರೆ ಕೊಡುವ ಸಣ್ಣತನ ಬಿಡುವಂತೆ ಹೇಳಿದ್ದೇನೆಂದರು. ಕರ್ನಾಟಕ ಸೇರಿದಂತೆ ದೇಶದ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಕೈಗಾರಿಕೆ ಇಲಾಖೆಯಿಂದ ವಿಂಗ್ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದರು.