Advertisement

Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!

11:46 PM Nov 19, 2024 | Team Udayavani |

ನವದೆಹಲಿ: ಥಾಯ್ಲೆಂಡ್‌ನ‌ ಫ‌ುಕೇಟ್‌ ಎಂಬಲ್ಲಿಂದ ನವದೆಹಲಿಗೆ ನ.16ರಂದು ಹೊರಡಬೇಕಾಗಿದ್ದ ವಿಮಾನ 80 ಗಂಟೆ ವಿಳಂಬ (3 ದಿನ) ಆಗಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಅತಂತ್ರರಾಗಿದ್ದಾರೆ.

Advertisement

ನ.16ರ ರಾತ್ರಿ ಫ‌ುಕೇಟ್‌ನಿಂದ ದೆಹಲಿಗೆ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸಬೇಕಾಗಿತ್ತು. ತಾಂತ್ರಿಕ ತೊಂದರೆಯಿಂದ 6 ಗಂಟೆ ವಿಳಂಬವಾಗಲಿದೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದರು. ಬಳಿಕ ಹಾರಾಟ ಶುರು ಮಾಡಿದ ವಿಮಾನ ಟೇಕಾಫ್ ಆದ 2.5 ಗಂಟೆಯಲ್ಲೇ ಮತ್ತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಏರ್‌ಪೋರ್ಟ್‌ಗೆ ಹಿಂತಿರುಗಿತು. ಹೀಗಾಗಿ, 3 ದಿನಗಳ ಕಾಲ ಪ್ರಯಾಣಿಕರು ಅಲ್ಲೇ ಪರದಾಡಬೇಕಾಯಿತು.

ಪ್ರಯಾಣಿಕರಿಗೆ ವಸತಿ ಮತ್ತಿತರ ವ್ಯವಸ್ಥೆ ಕಲ್ಪಿಸಿರುವುದಾಗಿಯೂ, ಕೆಲವರು ದೆಹಲಿಗೆ ವಾಪಸಾಗಿರುವುದಾಗಿಯೂ ಏರಿಂಡಿಯಾ ತಿಳಿಸಿದೆ. ಇನ್ನೂ 30-40 ಮಂದಿ ಫ‌ುಕೇಟ್‌ನಲ್ಲಿದ್ದು, ಅವರು ಶೀಘ್ರವೇ ವಾಪಸಾಗಲಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರವು ಈ ಬಗ್ಗೆ ವರದಿ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next