Advertisement

ಮಹಿಳಾ ಪೊಲೀಸರಿಗೆ ಯೋಗ ತರಬೇತಿ

12:30 AM Mar 09, 2019 | Team Udayavani |

ಉಡುಪಿ: ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಜ್ಜರಕಾಡು ಮಹಿಳಾ ಸಮಾಜದ ಹಾಲ್‌ನಲ್ಲಿ ಮಹಿಳಾ ಪೊಲೀಸರಿಗೆ ಯೋಗ ತರಬೇತಿ ನಡೆಯಿತು.

Advertisement

ಅಯ್ಯಂಗಾರ್‌ ಯೋಗ ಸೆಂಟರ್‌ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಎಸ್‌ಪಿ ನಿಶಾ ಜೇಮ್ಸ್‌ ಉದ್ಘಾಟಿಸಿದರು.

ಎಸ್‌ಪಿ, 4 ಮಂದಿ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ 70 ಕ್ಕೂ ಅಧಿಕ ಮಹಿಳಾ ಪೊಲೀಸ್‌ ಸಿಬಂದಿ ಇದರ ಪ್ರಯೋಜನ ಪಡೆದುಕೊಂಡರು. ಯೋಗಶಿಕ್ಷಕಿ ಶೋಭಾ ಶೆಟ್ಟಿ ಹಾಗೂ ಸಿಬಂದಿ ಮಾರ್ಗದರ್ಶನ ನೀಡಿದರು. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯಿತು. 

ಅಯ್ಯಂಗಾರ್‌ ಯೋಗ ಸೆಂಟರ್‌ ವತಿಯಿಂದ ಭಾರತದಾದ್ಯಂತ ಯೋಗದ ಬಗ್ಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಉಡುಪಿಯಲ್ಲಿ 30 ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. 

ಆರೋಗ್ಯ ರಕ್ಷಣೆಗೆ ಸಹಕಾರಿ
ಮಹಿಳಾ ಪೊಲೀಸರು ಸಾರ್ವಜನಕರ ರಕ್ಷಣೆಯಲ್ಲಿ ತೊಡಗುತ್ತಾರೆ. ಈ ವಿದ್ಯೆ ಅವರಿಗೆ ಪ್ರಯೋಜನವಾಗಬಹುದು. ಅವರು ಶಿಸ್ತಿನಿಂದ ಇರುವ ಕಾರಣ ಯೋಗ ಅವರಿಗೆ ಉಪಯೋಗವಾಗುತ್ತದೆ. ಅವರ ಆರೋಗ್ಯ ರಕ್ಷಣೆಗೂ ಸಹಕಾರಿಯಾಗುತ್ತದೆ.
 
ಹಲವಾರು ಆಸನಗಳನ್ನು ಪೊಲೀಸರಿಗೆ ತಿಳಿಸಿಕೊಡಲಾಗಿದೆ. ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರಿಗೂ ತರಬೇತಿ ನೀಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದರು.

Advertisement

ಯೋಗ ಅವಶ್ಯ
ಮಹಿಳೆಯರಿಗೆ ಅಧಿಕ ಒತ್ತಡ ಇರುತ್ತದೆ. ಅವರ ಒತ್ತಡ ನಿಯಂತ್ರಿಸಲು ಯೋಗ ಅತೀ ಅಗತ್ಯ. ಸ್ವಲ್ಪ ಸಮಯ ಯೋಗ ಮಾಡಿದಾಗ ಉತ್ತಮ ಅನುಭವ ಸಿಗುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಶಿಕ್ಷಣದಲ್ಲಿ ನಿರತರಾದರೆ ಒತ್ತಡ ನಿವಾರಿಸಬಹುದು ಎನ್ನುತ್ತಾರೆ ಯೋಗ ಶಿಕ್ಷಕಿ ಶೋಭಾ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next