Advertisement

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

12:32 AM Oct 03, 2023 | Team Udayavani |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಸೋಮವಾರ ಬಿಸಿಲಿನ ವಾತಾವರಣವಿತ್ತು. ಮುಂಜಾನೆ ಮಂಗಳೂರು ನಗರದಹೊರವಲಯ ಸೇರಿದಂತೆ ಗ್ರಾಮಾಂತರ ಪ್ರದೇಶದ ವಿವಿಧೆಡೆ ದಟ್ಟ ಮಂಜು ಕವಿದ ವಾತಾವರಣ ಕಂಡುಬಂತು.

Advertisement

ಸಂಜೆ ಬಳಿಕ, ರಾತ್ರಿ ಕೆಲವಡೆ ಸಾಮಾನ್ಯ ಮಳೆ ಸುರಿದಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ ಮಂಗಳವಾರ ಎಲ್ಲೋ ಅಲರ್ಟ್‌ ನೀಡಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30.2 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 23.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಹಿಂದೆ ಸರಿಯುತ್ತಿರುವ ಮುಂಗಾರು
ನೈಋತ್ಯ ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ದೇಶದಲ್ಲಿ ಈಗಾಗಲೇ ಆರಂಭವಾಗಿದ್ದು, ಇನ್ನು 15 ದಿನಗಳಲ್ಲಿ ಕರಾವಳಿಯಿಂದಲೂ ಹಿಂದೆ ಸರಿಯುವ ಸಾಧ್ಯತೆಯಿದೆ. ನಾಲ್ಕು ತಿಂಗಳ ಮುಂಗಾರಿನ ಮಳೆಯ ಅಂಕಿ ಅಂಶವನ್ನು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದೆ.

ಶೇ. 19ರಷ್ಟು ಮಳೆ ಕೊರತೆ
ಜೂ. 1ರಿಂದ ಸೆ. 30ರ ವರೆಗಿನ ಮಾಹಿತಿಯಂತೆ ಕರಾವಳಿಯಲ್ಲಿ ಈ ಬಾರಿ ಶೇ. 19ರಷ್ಟು ಮಳೆ ಕೊರತೆಯಾಗಿದೆ. ದ.ಕ.ಲ್ಲಿ ವಾಡಿಕೆ 3,388 ಮಿ.ಮೀ. ಮಳೆಯಲ್ಲಿ 2,616 ಮಿ.ಮೀ. ಸುರಿದು, ಶೇ. 23ರಷ್ಟು ಕೊರತೆ, ಉಡುಪಿಯಲ್ಲಿ ವಾಡಿಕೆ 4,022ರಷ್ಟರಲ್ಲಿ 3,156 ಮಿ.ಮೀ. ಮಳೆಯಾಗಿ ಶೇ.22 ಕೊರತೆಯಾ ಗಿದೆ. ಉ.ಕ.ದಲ್ಲಿ 2,647 ಮಿ.ಮೀ. ಯಲ್ಲಿ 2,244 ಮಿ.ಮೀ. ಸುರಿದು ಶೇ. 15ರಷ್ಟು ಮಳೆ ಕೊರತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next