Advertisement

ಅತ್ತಾವರದ ಯಲ್ಲಪ್ಪ, ನೇತಾಜಿ ಸೇನೆಯ ವಿತ್ತ ಮಂತ್ರಿ

11:28 PM Jan 22, 2022 | Team Udayavani |

ನೇತಾಜಿಯ ಆಪ್ತವಲಯದಲ್ಲಿ ಇದ್ದವರ ಪೈಕಿ ನನ್ನ ಮಾವ ಯಲ್ಲಪ್ಪ ಅವರೂ ಪ್ರಮುಖರು. ಮಂಗಳೂರಿನ ಅತ್ತಾವರ ಮೂಲದ ಯಲ್ಲಪ್ಪ ಅವರು ಬ್ಯಾರಿಸ್ಟರ್‌ ಪದವಿ ಪಡೆದು, ಆಗ ಸಿಂಗಾಪುರದಲ್ಲಿದ್ದರು. ಅಲ್ಲಿ ನೇತಾಜಿಯ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಿಂದ ಪ್ರೇರಿತರಾಗಿ, ಐಎನ್‌ಎಗೆ ಸೇರಿಕೊಂಡರು.

Advertisement

ಹಣಕಾಸು ವಿಚಾರದಲ್ಲಿ ಜ್ಞಾನಿಯಾಗಿದ್ದ ಯಲ್ಲ ಪ್ಪನವರು “ಆಜಾದ್‌ ಹಿಂದ್‌ ಸರಕಾರ’ದ ಮಂತ್ರಿ ಮಂಡ ಲದಲ್ಲೂ ಪ್ರಭಾವಿ ಸಚಿವರಾಗಿ ಕೆಲಸ ಮಾಡಿದರು. ಸರಕಾರ ಕಟ್ಟುವ ಸಮಯದಲ್ಲಿ ಹಣಕಾಸಿನ ತೊಂದರೆ ಉದ್ಭವಿಸಿದಾಗ, “ಆಜಾದ್‌ ಹಿಂದ್‌ ಬ್ಯಾಂಕ್‌’ ಸ್ಥಾಪಿಸಿ ನೇತಾಜಿಗೆ ನೆರವಾದರು. “ಭಾರತದ ಕುಬೇರ’ ಅಂತಲೇ ಇವರಿಗೆ ಹೆಸರಿತ್ತು.

ಒಮ್ಮೆ ಯಲ್ಲಪ್ಪ ಅವರು ನೇತಾಜಿಯ ಜತೆಗೂಡಿ ಸನ್ಯಾಸಿ ವೇಷದಲ್ಲಿ ಮಂಗಳೂರಿನ ಅತ್ತಾವರದ ಮನೆಗೆ ಬಂದಿದ್ದರು ಅಂತಲೂ ನನ್ನ ತಾಯಿ ಹೇಳುತ್ತಿದ್ದರು. ಆದರೆ, ಯಲ್ಲಪ್ಪ ಅವರ ಅಂತ್ಯ ನೇತಾಜಿಯ ಸಾವಿನಂತೆಯೇ ನಿಗೂಢ. ಆಜಾದ್‌ ಹಿಂದ್‌ನ ಮಹಿಳಾ ಘಟಕದ ಮುಖ್ಯಸ್ಥೆ ಲಕ್ಷ್ಮೀ ಸೆಹಗಲ್‌ ಒಂದು ಪತ್ರದಲ್ಲಿ ಉಲ್ಲೇಖಿಸಿದಂತೆ, “ಮ್ಯಾನ್ಮಾರ್‌ನ ಒಂದು ಕಾಡಿನ ಮೇಲೆ ಬ್ರಿಟಿಷ್‌ ಸೈನ್ಯ ದಾಳಿ ಮಾಡಿತ್ತು. ಈ ವೇಳೆ ಯಲ್ಲಪ್ಪ ಹಾಗೂ ಮುತ್ತು ಅವರನ್ನು ಹೊರತುಪಡಿಸಿ, ಮಿಕ್ಕವರೆಲ್ಲರೂ ಬ್ರಿಟಿಷರಿಗೆ ಶರಣಾದರು. ಮರುದಿನ ಮತ್ತೆ ಬ್ರಿಟಿಷ್‌ ತುಕಡಿ ಅದೇ ಕಾಡಿನ ಮೇಲೆ ದಾಳಿ ಮಾಡಿ, ಯಲ್ಲಪ್ಪ ಅವರನ್ನು ಸೆರೆಹಿಡಿಯಿತು’ ಎಂದಿದ್ದಾರೆ. ಆದರೆ ಅನಂತರದ ದಿನಗಳಲ್ಲಿ ಯಲ್ಲಪ್ಪನವರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

-ಡಾ| ಪ್ರಭಾಕರ್‌

Advertisement

Udayavani is now on Telegram. Click here to join our channel and stay updated with the latest news.

Next