Advertisement

ಯಕ್ಷಗಾನವನ್ನು ಬೆಳೆಸುವ ಕಾರ್ಯವಾಗಬೇಕು: ಕಿಶನ್‌ ಹೆಗ್ಡೆ

07:30 AM Jun 30, 2018 | |

ಕಾರ್ಕಳ: ಯಕ್ಷಗಾನ ನಮ್ಮ ಜೀವನದಲ್ಲಿ ಶಿಸ್ತು ರೂಪಿಸುವ ಪ್ರಬುದ್ಧ ಕಲೆ. ಸೂರ್ಯ-ಚಂದ್ರರಿರುವ ತನಕ ಈ ಕಲೆ ಉಳಿಯಲಿದೆ. ಅದನ್ನು ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು. ತರಬೇತಿ ಪಡೆಯುವ ವಿದ್ಯಾರ್ಥಿಗಳು ಅದನ್ನು ಗಂಭೀರತೆಯಿಂದ ತೆಗೆದುಕೊಳ್ಳಬೇಕು ಎಂದು ಸಾಲಿಗ್ರಾಮ ಮೇಳದ ಸಂಚಾಲಕ ಪಳ್ಳಿ ಕಿಶನ್‌ ಹೆಗ್ಡೆ  ಹೇಳಿದರು.

Advertisement

ಯಕ್ಷಕಲಾರಂಗ ಕಾರ್ಕಳ ಇದರ ಆಶ್ರಯದಲ್ಲಿ ತಾಲೂಕಿನ ಅಪೇಕ್ಷಿತ ಶಾಲಾ ಕಾಲೇಜುಗಳ 2018-19ನೇ ಸಾಲಿನ ಯಕ್ಷಗಾನ ಶಿಕ್ಷಣದ ತರಬೇತಿ ಕಾರ್ಯಕ್ರಮವನ್ನು ಜೂ. 28ರಂದು ಪೆರ್ವಾಜೆ ಸುಂದರ ಪುರಾಣಿಕ್‌ ಪ್ರೌಢಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನ ಪಠ್ಯೇತರ ಚಟುವಟಿಕೆಯ ಅಗ್ರಸ್ಥಾನದಲ್ಲಿದೆ. ಹಲವು ಶಾಲೆಗಳು ಯಕ್ಷಗಾನವನ್ನು ಕಲಿಸುವ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡುತ್ತವೆ. ವಿದ್ಯಾರ್ಥಿಗಳು ಕೇವಲ ಒಂದು ದಿನದ ಪ್ರದರ್ಶನಕ್ಕಾಗಿ ಮಾತ್ರ ಈ ಕಲೆಯನ್ನು ಕಲಿಯಬಾರದು. ವೃತ್ತಿಯನ್ನಾಗಿ ಸ್ವೀಕರಿಸಿ ಮುಂದುವರಿಯುವುದಾದರೂ ಉತ್ತಮ ಅವಕಾಶಗಳಿವೆ ಎಂದು ಹೇಳಿದರು.

ಸರಕಾರದ ಸಹಕಾರ ಅಗತ್ಯ
ಉಡುಪಿಯಲ್ಲಿರುವ ಯಕ್ಷ ಶಿಕ್ಷಣ ಟ್ರಸ್ಟ್‌ನಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನೀಡಲಾಗು ತ್ತದೆ. ಉಡುಪಿಯಲ್ಲಿ ಶಾಸಕರಾಗಿ ಆಯ್ಕೆಯಾಗುವವರು ಟ್ರಸ್ಟ್‌ನ ಅಧ್ಯಕ್ಷ ರಾಗಿರುತ್ತಾರೆ. ಕಾರ್ಕಳದಲ್ಲೂ ಅದೇರೀತಿ ಮಾಡುವ ಬಗ್ಗೆ  ಶಾಸಕರಲ್ಲಿ ಮಾತುಕತೆ ನಡೆಸಲಾಗಿದೆ. ಯಕ್ಷ ಶಿಕ್ಷಣಕ್ಕೆ ಸರಕಾರದ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಯಕ್ಷಕಲಾರಂಗದ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್‌. ವಿಜಯ ಶೆಟ್ಟಿ, ಶಾಲೆಯ 
ಎಸ್‌ಡಿಎಂಸಿ ಅಧ್ಯಕ್ಷ ವಿಜಯರಾಜ್‌ ಶೆಟ್ಟಿ ಉಪಸ್ಥಿತರಿದ್ದರು.ಯಕ್ಷಕಲಾರಂಗದ ಸಂಚಾಲಕ ಪ್ರೋ| ಪದ್ಮನಾಭ ಗೌಡ ಸ್ವಾಗತಿಸಿ, ಕೆ. ಮಾಧವ ವಂದಿಸಿದರು. ಪ್ರ. ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next