Advertisement

ಏಕಕಾಲಕ್ಕೆ ಎರಡೂ ಕೈಗಳಿಂದ ಬರೆದು ದಾಖಲೆ

10:19 PM Sep 14, 2020 | mahesh |

ಮಹಾನಗರ: ಏಕಕಾಲಕ್ಕೆ ಎರಡೂ ಕೈಗಳಿಂದ ಇಂಗ್ಲಿಷ್‌ ಪದಗಳನ್ನು ಸುಂದರವಾಗಿ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್‌ ಶೈಲಿಯಲ್ಲಿ ಬರೆಯುವ ಮಂಗಳೂರಿನ ಬಾಲಕಿ ಆದಿ ಸ್ವರೂಪ ಅವರ ಸಾಧನೆಗೆ ಉತ್ತರ ಪ್ರದೇಶದ ಬರೇಲಿಯಾ ಲತಾ ಫೌಂಡೇಶನ್‌ ಸಂಸ್ಥೆಯು ಎಕ್ಸ್ ಕ್ಲೂಸಿವ್‌ ವರ್ಲ್ಡ್‌ ರೆಕಾರ್ಡ್‌ ಘೋಷಿಸಿದೆ.

Advertisement

ಮಂಗಳೂರಿನ ಸ್ವರೂಪ ಅಧ್ಯ ಯನ ಕೇಂದ್ರದ ಗೋಪಾಡ್ಕರ್‌- ಸುಮಾಡ್ಕರ್‌ ಪುತ್ರಿಯಾಗಿರುವ ಆದಿ ಅವರು 2 ವರ್ಷಗಳ ಹಿಂದೆ ಸ್ವರೂಪ ಅಧ್ಯಯನ ಕೇಂದ್ರ ದಲ್ಲಿ ಎರಡೂ ಕೈಗಳಿಂದ ಬರೆ ಯುವುದನ್ನು ಆರಂಭಿಸಿದ್ದು, ಇದೀಗ ಎರಡೂ ಕೈಗಳಿಂದ ಹತ್ತು ರೀತಿಗಳಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಸಾಧನೆಯ ಅನಾವರಣ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಕೇಂದ್ರದ ಪ್ರಾಂಶುಪಾಲ ಸುಮಾಡ್ಕರ್‌ ಉಪಸ್ಥಿತರಿದ್ದರು.

ಬಹುಮುಖ ಪ್ರತಿಭೆ
ಆದಿಸ್ವರೂಪ ಬಹುಮುಖ ಪ್ರತಿಭೆಯ ಬಾಲಕಿ. ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣದ ಸ್ವಕಲಿಕಾ ವಿಧಾನದಂತೆ ಒಂದೂವರೆ ವರ್ಷ ಪ್ರಾಯದಲ್ಲೇ ಓದಲು, ಎರಡೂವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುವ ಸಾಮರ್ಥ್ಯ ಮೈಗೂಡಿಸಿದ್ದರು. ಹಾಗೆ ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿದ್ದು, ಎಂದೂ ಶಾಲೆಗೆ ಹೋಗದೆ ಇದೀಗ 10ನೇ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎರಡೂ ಕೈಗಳಿಂದ ಬರೆಯಲು ಸಿದ್ಧರಾಗಿದ್ದಾರೆ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್‌ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಈಗಾಗಲೇ 40 ಕತೆಗಳುಳ್ಳ ಕಥಾ ಸಂಕಲನ ಹೊರತಂದಿದ್ದಾರೆ. 40 ಚಿತ್ರಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿದ್ದಾರೆ. ಇಂಗ್ಲಿಷ್‌ನಲ್ಲಿ ಫ್ಯಾಂಟಸಿ ಕಾದಂಬರಿ ಬರೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next