ಚಳಿಗಾಲ (Winter) ಸಂದರ್ಭದಲ್ಲಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ಇದರಿಂದ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬಹುದು. ಈ ಕಾಲದಲ್ಲಿ (ಚಳಿಗಾಲ) ರೋಗಗಳು ಹೆಚ್ಚಾಗಿ ಕಾಡುತ್ತದೆ. ದೇಹದಲ್ಲಿ ಸೂಕ್ಷ್ಮಾಣು ಹಾಗೂ ವೈರಸ್‍ಗಳು (Virus) ವೇಗದಲ್ಲಿ ಬೆಳವಣಿಗೆಯಾಗುತ್ತದೆ ಎನ್ನಲಾಗುತ್ತದೆ.
ಹಾಗಾಗಿ ನಾವು ಸೇವಿಸುವ ಆಹಾರಗಳಲ್ಲಿ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ (Immunity) ಲಭ್ಯವಾಗುವ ಆಹಾರಗಳನ್ನು ಸೇವಿಸಬೇಕು. ಈ ಸಮಯದಲ್ಲಿ ದೇಹಕ್ಕೆ ಕೊಬ್ಬಿನಾಂಶವಿರುವ ಆಹಾರದ ಅವಶ್ಯಕತೆ ಹೆಚ್ಚಾಗಿರುತ್ತದೆ. ಕೊಬ್ಬಿನಾಂಶವಿರುವ ಆಹಾರ ಸೇವಿಸುವುದರಿಂದ ದೇಹ ಸಮೃದ್ಧವಾಗಿಸುವುದರ ಜೊತೆಗೆ ದೇಹಕ್ಕೆ ಜೀವಸತ್ವ (Vitamin) ಹಾಗೂ ಇತರ ಪೋಷಕಾಂಶ (Nutrition) ಪಡೆಯಬಹುದು.
ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..
ಬೇರು ತರಕಾರಿಗಳು:
ಬೀಟ್‌ರೂಟ್ (Beetroot), ಕ್ಯಾರೆಟ್ (Carrot), ಸಿಹಿ ಆಲೂಗಡ್ಡೆ (Sweet potato), ಟರ್ನಿಪ್ (Turnip), ಮೂಲಂಗಿ (Radish) ಯಂತಹ ಬೇರು ತರಕಾರಿಗಳು (Root Vegetables) ಚಳಿಗಾಲದಲ್ಲಿ ಹೆಚ್ಚಾಗಿರುತ್ತವೆ. ಈ ತರಕಾರಿಗಳಲ್ಲಿ ವಿಟಮಿನ್ ಸಿ ಮತ್ತು ಎ ಸೇರಿದಂತೆ ಅಗತ್ಯವಾದ ಪೋಷಕಾಂಶಗಳಿಂದ (Nutrition) ತುಂಬಿರುತ್ತವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವುಗಳು ಉತ್ಕರ್ಷಣ ನಿರೋಧಕಗಳಲ್ಲಿ ( Antioxidant) ಸಮೃದ್ಧವಾಗಿವೆ. ಸಿಹಿ ಆಲೂಗಡ್ಡೆಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ (Potassium) ಅಧಿಕವಾಗಿದೆ. ಇದರಿಂದ ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ (Immune system) ಹೆಚ್ಚಾಗಿ ಶೀತ, ಜ್ವರದಂತಹ ರೋಗಗಳನ್ನು ತಡೆಗಟ್ಟಬಹುದು.
ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು, ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕಿತ್ತಳೆಗಳು, ನಿಂಬೆಹಣ್ಣುಗಳು, ಸ್ಟ್ರಾಬೆರಿ, ಮಾವಿನಹಣ್ಣು ಕಿವಿ ಹಣ್ಣು, ದ್ರಾಕ್ಷಿಹಣ್ಣುಗಳಲ್ಲಿ ವಿಟಮಿನ್ ಸಿ ಕೂಡ ಅಧಿಕವಾಗಿರುತ್ತದೆ. ಚಳಿಗಾಲದಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಹಸಿರು ತರಕಾರಿಗಳು:
ಹಸಿರು ತರಕಾರಿಗಳು (Leafy Green Vegetables) ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ನಿಮ್ಮ ದೇಹದ ಉಷ್ಣತೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಾಲಕ್, ಎಲೆಕೋಸು, ಬ್ರೊಕೋಲಿಯಂತಹ ಹಸಿರು ತರಕಾರಿಗಳು ವಿಟಮಿನ್ ಸಿ ಸಮೃದ್ಧವಾಗಿದೆ. ತರಕಾರಿಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಬ್ರೊಕೋಲಿ, ಶುಂಠಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಜ್ವರಗಳನ್ನು ತಡೆಯುತ್ತವೆ.
ಡ್ರೈ ಫ್ರೂಟ್ಸ್:
ಆರೋಗ್ಯಕರ ದೇಹಕ್ಕಾಗಿ ಡ್ರೈ ಫ್ರೂಟ್ಸ್ (Dry Fruits) ಸೇವಿಸುವುದು ಉತ್ತಮ. ಡ್ರೈ ಫ್ರೂಟ್ಸ್ ಗಳಲ್ಲಿ ಆರೋಗ್ಯಕರ ಕೊಬ್ಬು (Healthy fat), ಪ್ರೊಟೀನ್(Protien), ಫೈಬರ್ (Fiber) ಅಂಶ ಅಧಿಕವಾಗಿರುತ್ತದೆ. ಪ್ರತಿದಿನ ಮುಂಜಾನೆ ಡ್ರೈ ಫ್ರೂಟ್ಸ್ ತಿನ್ನುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಡ್ರೈ ಫ್ರೂಟ್ಸ್ ಗಳನ್ನು ನೀರಿನಲ್ಲಿ ನೆನೆಸಿ ಅಥವಾ ಹಾಗೇಯೂ ಸೇವಿಸಬಹುದು. ಡ್ರೈ ಫ್ರೂಟ್ ಗಳಿಂದ ಲಡ್ಡುಗಳನ್ನು ಕೂಡಾ ತಯಾರಿಸಬಹುದು ಅಥವಾ ಮಾರುಕಟ್ಟೆಗಳಲ್ಲೂ ದೊರೆಯುತ್ತದೆ.
ಬಾದಾಮಿ (Badam), ವಾಲ್‌ನಟ್ಸ್ (Walnuts), ಗೋಡಂಬಿ (Cashew) ಮತ್ತು ಪಿಸ್ತಾಗಳಂತಹ (Pistachio) ಡ್ರೈ ಫ್ರೂಟ್ಸ್ ಗಳಲ್ಲಿ ಆಂಟಿಆಕ್ಸಿಡೆಂಟ್ (Antioxidant) ಮತ್ತು ಖನಿಜಾಂಶಗಳು (Minerals) ಅಧಿಕವಾಗಿವೆ.
ಸೂಪ್:
ಚಳಿಗಾಲದಲ್ಲಿ ಬಿಸಿ-ಬಿಸಿ ಸೂಪ್ ಕುಡಿಯುವುದು ದೇಹ ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ತರಕಾರಿಗಳು, ಮಾಂಸ ಅಥವಾ ದ್ವಿದಳ ಧಾನ್ಯಗಳಂತಹ ಪದಾರ್ಥಗಳಿಂದ ಸೂಪ್ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಅತ್ಯುತ್ತಮ ಆಹಾರಗಳಲ್ಲಿ ಇದೂ ಒಂದು. ಬಿಸಿ ಬೌಲ್ ಸೂಪ್ ನಿಮ್ಮನ್ನು ಪುನರ್ಯೌವನಗೊಳಿಸುತ್ತದೆ. ಸೂಪ್ ಚಳಿಗಾಲದ ಆಹಾರವಾಗಿದೆ.
ಇತರ ಆಹಾರಗಳು:
ಆಲೂಗಡ್ಡೆ, ಶುಂಠಿ, ಅರಿಶಿನ, ಶೇಂಗಾ/ ಕಡಲೆಕಾಯಿ, ತೆಂಗಿನ ಕಾಯಿ, ನೆಲ್ಲಿಕಾಯಿ, ಬೆಳ್ಳುಳ್ಳಿ, ಈರುಳ್ಳಿ, ದಾಲ್ಚಿನ್ನಿಯಂತಹ ಮಸಾಲೆ ಪದಾರ್ಥಗಳು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿದರೆ ಆಹಾರ ಹೆಚ್ಚಿನ ರುಚಿ ಜೊತೆಗೆ ಪೋಷಣೆಯನ್ನು ನೀಡುತ್ತದೆ. ನಮ್ಮ ಆಹಾರದಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಇದ್ದಾಗ ದೇಹದ ಆರೋಗ್ಯ ಸುಧಾರಣೆಯಾಗುತ್ತದೆ.
ಇವುಗಳ ದೇಹದ ಮಾತ್ರವಲ್ಲದೇ ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ಉತ್ತಮ. ಆರೋಗ್ಯಕರ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಾತ್ರ ಹೆಚ್ಚಿನ ಪೋಷಣೆ ಹಾಗೂ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
*ಕಾವ್ಯಶ್ರೀ