Advertisement

ವೃದ್ಧಿಮಾನ್ ಸಾಹ ಕೋವಿಡ್ ವರದಿ ನೆಗೆಟಿವ್: ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ದತೆ

07:41 AM May 18, 2021 | Team Udayavani |

ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ವೃದ್ಧಿಮಾನ್ ಸಾಹ ಅವರ ಕೋವಿಡ್ ವರದಿ ನೆಗೆಟಿವ್ ಆಗಿದ್ದು, ಇಂಗ್ಲೆಂಡ್ ಪ್ರವಾಸಕ್ಕೆ ಅನುಮತಿ ಸಿಕ್ಕಂತಾಗಿದೆ. ಸಾಹ ಅವರಿಗೆ ಐಪಿಎಲ್ ಸಮಯದಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು.

Advertisement

ಸನ್ ರೈಸರ್ಸ್  ಹೈದರಾಬಾದ್ ಪರ ಆಡುತ್ತಿದ್ದ ಸಾಹ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಬಳಿಕ ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲೂ ನೆಗಟಿವ್ ವರದಿಯಾಗಿದೆ. ಇದೀಗ ಇಂಗ್ಲೆಂಡ್ ಗೆ ತೆರಳಲಿರುವ 20 ಆಟಗಾರರ ಗುಂಪನ್ನು ಸಾಹ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಶೇ. 80 ಜಪಾನೀಯರಿಂದಲೇ ಒಲಿಂಪಿಕ್ಸ್‌ ಗೆ ವಿರೋಧ!

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಜೂನ್ ನಲ್ಲಿ ಆಟಗಾರರು ಮುಂಬೈಗೆ ತೆರಳಲಿದ್ದು, ಅದಕ್ಕೂ ಮೊದಲು ಮುಂಬೈನಲ್ಲಿ ಕ್ವಾರಂಟೈನ್ ಅವಧಿ ಮುಗಿಸಬೇಕಿದೆ. ಸುಮಾರು ಮೂರು ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸ ಇರುವ ಕಾರಣ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ತಮ್ಮ ಕುಟುಂಬದವರ ಜೊತೆ ತೆರಳಲು ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next