Advertisement

WPL ಹರಾಜು 30 ಸ್ಥಾನಗಳಿಗೆ 165 ಆಟಗಾರ್ತಿಯರು!

11:46 PM Dec 02, 2023 | Team Udayavani |

ಮುಂಬಯಿ: ಇದೇ ತಿಂಗಳ 9ರಂದು ಮುಂಬಯಿಯಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20ಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. 165 ಆಟಗಾರ್ತಿಯರು ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಆಯ್ಕೆ ಗೊಳ್ಳುವವರು 30 ಮಂದಿ ಮಾತ್ರ. ಮುಂದಿನ ಫೆಬ್ರವರಿ-ಮಾರ್ಚ್‌ನಲ್ಲಿ 2ನೇ ಆವೃತ್ತಿಯ ಡಬ್ಲ್ಯುಪಿಎಲ್‌ ನಡೆಯಲಿದೆ.

Advertisement

ಹರಾಜು ಪಟ್ಟಿಯಲ್ಲಿರುವ 165 ಆಟಗಾರ್ತಿಯರಲ್ಲಿ 104 ಮಂದಿ ಭಾರತೀಯರು, 61 ಮಂದಿ ವಿದೇಶಿ ಯರು. ಇದರಲ್ಲಿ 15 ಮಂದಿ ಸಹ ಸದಸ್ಯ ದೇಶಗಳಿಗೆ ಸೇರಿದ ಆಟಗಾರ್ತಿ ಯರಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಆಯ್ಕೆಯಲ್ಲಿ 9 ಮಂದಿ ವಿದೇಶಿಯ ರಿಗೆ ಸ್ಥಾನ ಸಿಗಲಿದೆ. ವೆಸ್ಟ್‌ ಇಂಡೀಸ್‌ನ ಡಿಯಾಂಡ್ರಾ ಡಾಟಿನ್‌, ಆಸ್ಟ್ರೇಲಿಯದ ವೇಗದ ಬೌಲರ್‌ ಕಿಮ್‌ ಗಾರ್ಥ್ 50 ಲಕ್ಷ ರೂ. ಮೂಲಬೆಲೆಯಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next