Advertisement

ವಂಶವಾಹಿ ತಿದ್ದಿದ ಮಗು ಜನನ

06:00 AM Nov 27, 2018 | Team Udayavani |

ಬೀಜಿಂಗ್‌: ವಿಶ್ವದಲ್ಲೇ ಅತ್ಯಂತ ಮಹತ್ವದ ವೈದ್ಯಕೀಯ ಸಾಧನೆಯೊಂದನ್ನು ಚೀನಾದ ವಿಜ್ಞಾನಿಗಳು ಮಾಡಿದ್ದಾರೆ. ಏಕ ಕೋಶ ಭ್ರೂಣವಾಗಿದ್ದಾಗಲೇ ತಾಯಿಯ ಗರ್ಭಕೋಶದೊಳಗಿಂದಲೇ ಏಡ್ಸ್‌ ಸೋಂಕು ತಗುಲದಂತೆ ವಂಶವಾಹಿಗಳನ್ನು ತಿದ್ದಿದ ಅವಳಿ ಮಕ್ಕಳು ಚೀನಾದಲ್ಲಿ ಜನಿಸಿದ್ದಾರೆ. ಈ ಮಕ್ಕಳಿಗೆ ಲುಲು ಹಾಗೂ ನಾನಾ ಎಂದು ಹೆಸರಿಡಲಾಗಿದೆ. ಸಂಶೋಧಕ ಜಿಯಾಂ ಕುಯಿ ವಂಶವಾಹಿಯನ್ನು ತಿದ್ದುಪಡಿ ಮಾಡಿರುವ ಬಗ್ಗೆ ವಿವರಣೆ ನೀಡಿದ್ದು, ಇದು ವಿವಾದಿತ ಶಸ್ತ್ರಚಿಕಿತ್ಸೆ ಎಂದೂ ಅವರು ಹೇಳಿದ್ದಾರೆ.

Advertisement

ವಂಶವಾಹಿ ತಿದ್ದುಪಡಿ ಮಾಡುವ ತಂತ್ರಜ್ಞಾನ ಯಶಸ್ವಿಯಾದಲ್ಲಿ ಏಡ್ಸ್‌ ರೀತಿಯಲ್ಲೇ ಹಲವು ಆನುವಂಶೀಯ ರೋಗಗಳನ್ನು ತಡೆ ಗಟ್ಟಬಹುದಾಗಿದೆ. ಆದರೆ, ತಮ್ಮ ಮಕ್ಕಳು ತುಂಬಾ ಬುದ್ಧಿವಂತರಾಗಬೇಕು, ಇಂಥದ್ದೇ ಕೂದಲು ಶೈಲಿ ಇರಬೇಕು ಅಥವಾ ಕೂದಲು ಬಣ್ಣ ಇರಬೇಕು ಎಂದು ಪಾಲಕರು ಬಯಸಿದರೆ, ಅದಕ್ಕೆ ಸಂಬಂಧಿಸಿದಂತೆ ವಂಶವಾಹಿ ಯನ್ನು ತಿದ್ದುಪಡಿ ಮಾಡಿಸುವ ಪರಂಪರೆಯೂ ಶುರುವಾಗಬಹುದು ಎಂದು ವಿಜ್ಞಾನಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಜಿಯಾಂಕುಯಿ ನಡೆಸಿದ ಸಂಶೋ ಧನೆಯ ಬಗ್ಗೆಯೂ ಪಾಶ್ಚಾತ್ಯ ದೇಶಗಳ ವಿಜ್ಞಾನಿ ಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಂಶವಾಹಿ ತಿದ್ದುಪಡಿಗೆ‌ ಹಲವು ಯತ್ನಗಳು ನಡೆದಿವೆಯಾದರೂ, ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next