Advertisement
– ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶಗಳು. ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳಿವೆ. ಆರೋಗ್ಯ ದಲ್ಲಿ ಸುಧಾರಣೆ, ಮಾನಸಿಕ ಬಲವರ್ಧನೆ, ದೈಹಿಕ ಬಲ ಹೆಚ್ಚಳದ ಜತೆಗೆ ದೇಹದಲ್ಲಿನ ವಿಷಕಾರಿ ಅಂಶಗಳ ನಿವಾರಣೆ.
Related Articles
Advertisement
– ದೇಹ, ಮನಸ್ಸು ಮತ್ತು ಆತ್ಮ ಒಂದಾಗಿ ಹೆಣೆಯಲ್ಪಟ್ಟಿದೆ. ದೇಹದಲ್ಲಿ ಅಸಮತೋಲನ ಉಂಟಾದರೆ ಅದು ಮನಸ್ಸನ್ನು ಬಾಧಿಸುತ್ತದೆ. ಮನಸ್ಸಿನಲ್ಲಿ ಅಹಿತ ಭಾವನೆ ಉಂಟಾದರೆೆ ಅದು ದೇಹ ದಲ್ಲಿ ರೋಗವಾಗಿ ಪ್ರಕಟವಾಗುತ್ತದೆ. ಯೋಗಾಸನಗಳು ಅವಯವ ಗಳನ್ನು ತೀಡುತ್ತವೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ.
– ಯೋಗ ಮತ್ತು ಧ್ಯಾನಕ್ಕೆ ನಿಮ್ಮ ಅಂತರ್‌ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಏನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ನಿಮಗೆ ಸ್ವಯಂಸು#ರಿತವಾಗಿ ತಿಳಿಯುತ್ತದೆ. ಇದರಿಂದ ಸಕಾರಾತ್ಮಕವಾದ ಫಲಿತಾಂಶಗಳು ಸಿಗುತ್ತವೆ.
– ಮನಸ್ಸಿನ ನೆಮ್ಮದಿಗೂ ಯೋಗ ಸಹಕಾರಿ. ದಿನದ ಯಾವುದೇ ಸಮಯದಲ್ಲೂ ಕೈಗೊಳ್ಳಬಹುದು. ಪ್ರತಿನಿತ್ಯ ಸಣ್ಣ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನವನ್ನು ಮಾಡ ಬೇಕು. ಗೊಂದಲದ ಮನಸ್ಸನ್ನು ಪ್ರಶಾಂತಗೊಳಿಸಲುಇದು ಅತ್ಯುತ್ತಮ ದಾರಿ. – ಬಲಿಷ್ಠ, ಮೃದು ಮತ್ತು ನಮ್ಯವಾದ ದೇಹ ನಿಮಗೆ ಬೇಕೆಂದರೆ ಯೋಗ ನಿಮ್ಮ ದಿನಚರಿಯ ಭಾಗವಾಗಬೇಕು. ನಿತ್ಯ ಯೋಗಾಭ್ಯಾಸ, ವ್ಯಾಯಾಮ ದೇಹದ ಸ್ನಾಯುಗಳನ್ನು ಸದೃಢಗೊಳಿಸಿ, ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ. – ಸಂಜೀವಣ್ಣ ಕುಂದಾಪುರ, ಯೋಗ ಗುರು