Advertisement

ಸಹಾಯಾರ್ಥ ಟಿ20 ಪಂದ್ಯ: “ವಿಶ್ವ’ವಿರುದ್ಧ ವಿಂಡೀಸ್‌ ವಿಕ್ರಮ

06:00 AM Jun 02, 2018 | |

ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ತನ್ನ ಟಿ20 ವಿಶ್ವ ಚಾಂಪಿಯನ್‌ ಛಾತಿಗೆ ತಕ್ಕ ಪ್ರದರ್ಶನ ನೀಡಿದ ವೆಸ್ಟ್‌ ಇಂಡೀಸ್‌ ಮತ್ತೂಮ್ಮೆ “ವಿಶ್ವ’ವನ್ನೇ ಗೆದ್ದ ಸಾಧನೆ ಮಾಡಿದೆ. ಆದರೆ ವಿಂಡೀಸ್‌ ಪಡೆ ಜಯಭೇರಿ ಮೊಳಗಿಸಿದ್ದು ಐಸಿಸಿ ವಿಶ್ವ ಇಲೆವೆನ್‌ ವಿರುದ್ಧ. ಅಂತರ… ಭರ್ಜರಿ 72 ರನ್‌!

Advertisement

ಚಂಡಮಾರುತ ಹಾವಳಿಗೆ ಬಹುತೇಕ ಧ್ವಂಸಗೊಂಡಿ ರುವ ಕೆಲವು ಕೆರಿಬಿಯನ್‌ ಕ್ರಿಕೆಟ್‌ ಸ್ಟೇಡಿಯಂಗಳ ಜೀರ್ಣೋದ್ಧಾರಕ್ಕಾಗಿ ಆಯೋಜಿಸಲಾದ ಈ ಸಹಾ ಯಾರ್ಥ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಕೇವಲ 4 ವಿಕೆಟಿಗೆ 199 ರನ್‌ ಪೇರಿಸಿದರೆ, ಶಾಹಿದ್‌ ಅಫ್ರಿದಿ ನಾಯಕತ್ವದ ವಿಶ್ವ ಇಲೆವೆನ್‌ 16.4 ಓವರ್‌ಗಳಲ್ಲಿ 127 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.

ಎವಿನ್‌ ಲೆವಿಸ್‌, ಮಾರ್ಲಾನ್‌ ಸಾಮ್ಯುಯೆಲ್ಸ್‌, ದಿನೇಶ್‌ ರಾಮದಿನ್‌ ಮತ್ತು ಆ್ಯಂಡ್ರೆ ರಸೆಲ್‌ ಸಿಡಿಲಬ್ಬರ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದರು. ಕೆಸ್ರಿಕ್‌ ವಿಲಿಯಮ್ಸ್‌, ಸಾಮ್ಯುಯೆಲ್‌ ಬದ್ರಿ ಜತೆಗೆ ರಸೆಲ್‌ ಬೌಲಿಂಗಿನಲ್ಲೂ ಕ್ಲಿಕ್‌ ಆದರು. ಕೇವಲ 26 ಎಸೆತಗಳಿಂದ 58 ರನ್‌ (5 ಸಿಕ್ಸರ್‌, 5 ಬೌಂಡರಿ) ಸಿಡಿಸಿದ ಲೆವಿಸ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. 

ರಾಮದಿನ್‌ 25 ಎಸೆತಗಳಿಂದ ಅಜೇಯ 44 ರನ್‌ (3 ಬೌಂಡರಿ, 3 ಸಿಕ್ಸರ್‌), ಸಾಮ್ಯುಯೆಲ್ಸ್‌ 22 ಎಸೆತಗಳಿಂದ 43 ರನ್‌ (2 ಬೌಂಡರಿ, 4 ಸಿಕ್ಸರ್‌), ರಸೆಲ್‌ 10 ಎಸೆತ ಎದುರಿಸಿ ಅಜೇಯ 21 ರನ್‌ (3 ಸಿಕ್ಸರ್‌) ಬಾರಿಸಿ ವಿಂಡೀಸಿನ ಬೃಹತ್‌ ಮೊತ್ತಕ್ಕೆ ಕಾರಣರಾದರು.

8 ರನ್ನಿಗೆ ಬಿತ್ತು 4 ವಿಕೆಟ್‌!
ವಿಶ್ವ ಇಲೆವೆನ್‌ ಚೇಸಿಂಗ್‌ ಅತ್ಯಂತ ಶೋಚನೀಯವಾಗಿತ್ತು. 8 ರನ್‌ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್‌ ಸೇರಿಯಾಗಿತ್ತು. ಬದ್ರಿ (4ಕ್ಕೆ 2)-ರಸೆಲ್‌ (25ಕ್ಕೆ 2) ಜೋಡಿಯ ದಾಳಿ ಅಷ್ಟೊಂದು ಘಾತಕವಾಗಿತ್ತು.

Advertisement

ಪೆರೆರ ಏಕಾಂಗಿ ಹೋರಾಟ
ಆಲ್‌ರೌಂಡರ್‌ ತಿಸರ ಪೆರೆರ ಒಂದೆಡೆ ಕ್ರೀಸ್‌ ಆಕ್ರಮಿಸಿ ಕೊಂಡು 61 ರನ್‌ (37 ಎಸೆತ, 7 ಬೌಂಡರಿ, 3 ಸಿಕ್ಸರ್‌) ಬಾರಿಸದೇ ಹೋಗಿದ್ದರೆ ವಿಶ್ವ ಇಲೆವೆನ್‌ ನೂರರ ಗಡಿ ದಾಟುವುದೂ ಅನುಮಾನವಿತ್ತು.

ಸ್ಕೋರ್ ಪಟ್ಟಿ
ವೆಸ್ಟ್‌ ಇಂಡೀಸ್‌

ಕ್ರಿಸ್‌ ಗೇಲ್‌    ಬಿ ಮಲಿಕ್‌    18
ಎವಿನ್‌ ಲೆವಿಸ್‌    ಎಲ್‌ಬಿಡಬ್ಲ್ಯು ರಶೀದ್‌    58
ಆ್ಯಂಡ್ರೆ ಫ್ಲೆಚರ್‌    ಸ್ಟಂಪ್ಡ್ ರಾಂಚಿ ಬಿ ಅಫ್ರಿದಿ    7
ಮಾರ್ಲಾನ್‌ ಸಾಮ್ಯುಯೆಲ್ಸ್‌    ಸಿ ಪೆರೆರ ಬಿ ರಶೀದ್‌    43
ದಿನೇಶ್‌ ರಾಮದಿನ್‌    ಔಟಾಗದೆ    44
ಆ್ಯಂಡ್ರೆ ರಸೆಲ್‌    ಔಟಾಗದೆ    21

ಇತರ        8
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)    199
ವಿಕೆಟ್‌ ಪತನ: 1-75, 2-87, 3-100, 4-152.

ಬೌಲಿಂಗ್‌: ಮಿಚೆಲ್‌ ಮೆಕ್ಲೆನಗನ್‌    3-0-31-0
ಟೈಮಲ್‌ ಮಿಲ್ಸ್‌        3-1-13-0
ಶೋಯಿಬ್‌ ಮಲಿಕ್‌        3-0-31-1
ತಿಸರ ಪೆರೆರ        2-0-27-0
ರಶೀದ್‌ ಖಾನ್‌        4-0-48-2
ಶಾಹಿದ್‌ ಅಫ್ರಿದಿ        4-0-34-1
ಸಂದೀಪ್‌ ಲಮಿಚಾನೆ        1-0-12-0

ಐಸಿಸಿ ವಿಶ್ವ ಇಲೆವೆನ್‌
ತಮಿಮ್‌ ಇಕ್ಬಾಲ್‌    ಸಿ ಲೆವಿಸ್‌ ಬಿ ರಸೆಲ್‌    2
ಲ್ಯೂಕ್‌ ರಾಂಚಿ    ಎಲ್‌ಬಿಡಬ್ಲ್ಯು ಬದ್ರಿ    0
ಸ್ಯಾಮ್‌ ಬಿಲ್ಲಿಂಗ್ಸ್‌    ಸಿ ಬ್ರಾತ್‌ವೇಟ್‌ ಬಿ ರಸೆಲ್‌    4
ದಿನೇಶ್‌ ಕಾರ್ತಿಕ್‌    ಸಿ ಲೆವಿಸ್‌ ಬಿ ಬದ್ರಿ    0
ಶೋಯಿಬ್‌ ಮಲಿಕ್‌    ಎಲ್‌ಬಿಡಬ್ಲ್ಯು ಬ್ರಾತ್‌ವೇಟ್‌    12
ತಿಸರ ಪೆರೆರ    ಸಿ ಮತ್ತು ಬಿ ವಿಲಿಯಮ್ಸ್‌    61
ಶಾಹಿದ್‌ ಅಫ್ರಿದಿ    ಸಿ ನರ್ಸ್‌ ಬಿ ಪೌಲ್‌    11
ರಶೀದ್‌ ಖಾನ್‌    ಎಲ್‌ಬಿಡಬ್ಲ್ಯು ವಿಲಿಯಮ್ಸ್‌    9
ಮಿಚೆಲ್‌ ಮೆಕ್ಲೆನಗನ್‌    ಸಿ ನರ್ಸ್‌ ಬಿ ವಿಲಿಯಮ್ಸ್‌    10
ಸಂದೀಪ್‌ ಲಮಿಚಾನೆ    ಔಟಾಗದೆ    4

ಇತರ        14
ಒಟ್ಟು  (16.4 ಓವರ್‌ಗಳಲ್ಲಿ ಆಲೌಟ್‌)    127
ವಿಕೆಟ್‌ ಪತನ: 1-4, 2-8, 3-8, 4-8, 5-45, 6-93, 7-101, 8-108, 9-127.

ಬೌಲಿಂಗ್‌: ಸಾಮ್ಯುಯೆಲ್‌ ಬದ್ರಿ     3-1-4-2
ಆ್ಯಂಡ್ರೆ ರಸೆಲ್‌        3-0-25-2
ಕೆಸ್ರಿಕ್‌ ವಿಲಿಯಮ್ಸ್‌        3.4-0-42-3
ಕೀಮೊ ಪೌಲ್‌        3-0-24-1
ಕಾರ್ಲೋಸ್‌ ಬ್ರಾತ್‌ವೇಟ್‌        2-0-14-1
ಆ್ಯಶೆ ನರ್ಸ್‌        2-0-11-0

ಪಂದ್ಯಶ್ರೇಷ್ಠ: ಎವಿನ್‌ ಲೆವಿಸ್‌

Advertisement

Udayavani is now on Telegram. Click here to join our channel and stay updated with the latest news.

Next