Advertisement

ತೊನ್ನು; ವಿಶ್ವ ತೊನ್ನು ದಿನ ಜೂನ್‌ 25

03:45 AM Jun 25, 2017 | |

ವಿಟಿಲಿಗೋ ಅಥವಾ ತೊನ್ನು ಎನ್ನುವುದು ನೋವೂ ಇಲ್ಲದ, ಜೀವಕ್ಕೆ ಅಪಾಯಕಾರಿಯೂ ಅಲ್ಲದ ಚರ್ಮದ ಒಂದು ರೋಗ ಸ್ಥಿತಿ. ಚರ್ಮದಲ್ಲಿ ತೇಪೆಗಳು ಮೂಡುವುದು ಮತ್ತು ಕೂದಲು ಬಿಳಿಯಾಗುವುದು ಇದು ತೊನ್ನು ರೋಗಿಗಳಲ್ಲಿ ಕಾಣಿಸಿಕೊಳ್ಳುವ ಬಹುಮುಖ್ಯ ಲಕ್ಷಣಗಳು. ಇದು ಸುಮಾರು 1-2%ನಷ್ಟು ಜನಸಮುದಾಯವನ್ನು ಬಾಧಿಸುತ್ತದೆ. ಭಾರತದಂತಹ ದೇಶದಲ್ಲಿ ತೊನ್ನು ಎಂಬುದು ಬಾಧಿತ ವ್ಯಕ್ತಿಯನ್ನು ಭಾವನಾತ್ಮಕವಾಗಿ ಕುಗ್ಗಿಸುವಂತಹ ಒಂದು ವಿಚಾರ. ಯಾಕೆಂದರೆ, ತೊನ್ನಿನ ಬಿಳಿಯ ಬಣ್ಣವು ಇಲ್ಲಿಯ ಸಾಮಾನ್ಯ ಜನತೆಯ ದಟ್ಟ ಮೈಬಣ್ಣದೆದುರು ಎದ್ದು ಕಾಣುತ್ತದೆ. ಯುವ ವಯಸ್ಸಿನ ತರುಣಿಯರಲ್ಲಿ ಕಾಣಿಸಿಕೊಳ್ಳುವ ತೊನ್ನು ಮಾನಸಿಕವಾಗಿ ವಿಶೇಷ ನೋವುಂಟು ಮಾಡುತ್ತದೆ. 

Advertisement

ತೊನ್ನು ಕಾಣಿಸಿಕೊಳ್ಳಲು 
ಕಾರಣಗಳೇನು? 

ತೊನ್ನು ಕಾಣಿಸಿಕೊಳ್ಳಲು ಏನು ಕಾರಣ ಎಂಬುದಕ್ಕೆ ಹಲವಾರು ವಿವರಣೆಗಳು ಇವೆ, ಆದರೆ ಅವುಗಳಲ್ಲಿ ಹೆಚ್ಚಿನವುಗಳು ಸಕಾರಾತ್ಮಕ ವಿವರಣೆಗಳಲ್ಲ. ತೊನ್ನು ಎನ್ನುವುದು ಒಂದು ಸ್ವಯಂ-ಪ್ರತಿರೋಧಕ ಅಸಹಜತೆ ಎನ್ನುವುದು ಹೆಚ್ಚು ಒಪ್ಪಿಕೊಳ್ಳಬಹುದಾದ ವಿವರಣೆ-ಅಂದರೆ ಶರೀರದ ರೋಗಪ್ರತಿರೋಧಕ ವ್ಯವಸ್ಥೆಯು ಚರ್ಮದಲ್ಲಿನ ಪಿಗೆ¾ಂಟ್‌ ಕೋಶಗಳನ್ನು (ಮೆಲನೋಸೈಟ್ಸ್‌) ಬಾಹ್ಯ ಅಂಶಗಳೆಂದು ಗುರು ತಿಸುತ್ತದೆ ಮತ್ತು ಅವುಗಳ ವಿರುದ್ಧ ಆಕ್ರಮಣ ಮಾಡುತ್ತದೆ. ಆದರೆ ಈ ಸ್ವಯಂ ಪ್ರತಿರೋಧಕ ಅಸಹಜತೆಯ ಮೂಲ ಆನುವಂಶಿಕ ವಾದುದು ಎನ್ನುವುದು ಹಲವರ ನಂಬಿಕೆ. ಆದರೆ ನಾಜೂಕು ಮನಸ್ಸು ಮತ್ತು ದೇಹ ಪ್ರಕೃತಿಯವರಲ್ಲಿ ಒತ್ತಡ, ಆಘಾತಕಾರಿ ಘಟನೆಗಳು ಅಥವಾ ಏಟುಗಳು ತೊನ್ನಿನ ರೋಗ ಸ್ಥಿತಿಗೆ ಕಾರಣವಾಗಬಹುದು ಅಥವಾ ಅದನ್ನು ಕೆರಳಿಸಬಹುದು.

ಇದು ಯಾರನ್ನು ಬಾಧಿಸಬಹುದು?
ತೊನ್ನು ಎಂಬ ಚರ್ಮದ ಅಸಹಜತೆಯು 20ರಿಂದ 30ರ ನಡುವಿನ ವಯೋಮಾನದವರನ್ನು ಹೆಚ್ಚು ಬಾಧಿಸುತ್ತದೆ. ಈ ಅಸಹಜತೆಯು ಎಲ್ಲಾ ಜನಾಂಗ, ಪಂಗಡದವರನ್ನು, ಪುರುಷ ಮತ್ತು ಸ್ತ್ರೀ ಎರಡೂ ವರ್ಗದವರನ್ನೂ ಸಮಾನವಾಗಿ ಬಾಧಿಸುತ್ತದೆ. ಈಗಾಗಲೇ ಬೇರೆ ರೀತಿಯ ಸ್ವಯಂ ಪ್ರತಿರೋಧಕ ಅಸಹಜತೆಯ ಕಾಯಿಲೆ ಇರುವವರಲ್ಲಿ ತೊನ್ನು ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ. 

ತೊನ್ನು ಹೇಗೆ ಕಾಣಿಸಿಕೊಳ್ಳುತ್ತದೆ? 
ಪಿಗೆ¾ಂಟ್‌ ಅಥವಾ ಚರ್ಮಕ್ಕೆ ಬಣ್ಣ ನೀಡುವ ಅಂಶವು ನಷ್ಟವಾಗುವ ಕ್ರಮ ಮತ್ತು ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ, ತೊನ್ನು ಬಹಳ ಸಣ್ಣದಾಗಿ ಕಾಣಿಸಿಕೊಳ್ಳುತ್ತದೆ. ಕ್ರಮೇಣ, ಇತರ ಜಾಗಗಳಲ್ಲೂ ಸಹ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ, ಈಗಾಗಲೇ ಇರುವ ತೇಪೆಯು ದೊಡ್ಡದಾಗುತ್ತಾ ಹೋಗಬಹುದು. ಕೆಲವು ಜನರಲ್ಲಿ ತೊನ್ನು ಹಲವಾರು ವರ್ಷಗಳು ಅಥವಾ ಕೆಲವು ದಶಕಗಳವರೆಗೆ ಯಾವ ವ್ಯತ್ಯಾಸವೂ ಆಗದೆ ಹಾಗೆಯೇ ಇರುತ್ತದೆ. ಮಾತ್ರವಲ್ಲ, ಹಠಾತ್ತಾಗಿ ಇನ್ನೊಂದು ಜಾಗದಲ್ಲಿ ಮತ್ತೂಂದು ಪಿಗೆ¾ಂಟೇಷನ್‌ ಅಥವಾ ತೇಪೆ ಕಾಣಿಸಿಕೊಳ್ಳುತ್ತದೆ. ಅಪರೂಪಕ್ಕೆ ಕೆಲವು ಬಾರಿ, ತೊನ್ನಿನ ತೇಪೆಗಳು ಯಾವ ಚಿಕಿತ್ಸೆಯೂ ಇಲ್ಲದೆ ನಿರಂತರವಾಗಿ ಮರು-ಪಿಗೆ¾ಂಟ್‌ ಆಗುತ್ತಿರುತ್ತವೆ. ಅಂದರೆ ಚರ್ಮವು ಮತ್ತೆ ತನ್ನ ಸಹಜ ಬಣ್ಣಕ್ಕೆ  ಮರಳುತ್ತದೆ. 

ತಾಯಿಗೆ ತೊನ್ನು ಇದ್ದರೆ 
ಅದು ಮಗುವಿಗೆ ಬರಬಹುದೇ?

ತೊನ್ನು ಇರುವ ಹೆಚ್ಚಿನ ಜನರ ಸಂಬಂಧಿಕರಿಗೆ ತೊನ್ನು ಇರುವುದಿಲ್ಲ, ಆದರೆ ತಂದೆ ತಾಯಿಯರಲ್ಲಿ ತೊನ್ನು ಇದ್ದು ಅಥವಾ ಒಡಹುಟ್ಟಿದವರಲ್ಲಿ ತೊನ್ನು ಇದ್ದು, ಆನುವಂಶಿಕ ಕಾರಣಗಳಿಂದಾಗಿ ಅದು ಅವರ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇದೆ.

Advertisement

ಯಾವ ರೀತಿಯ 
ಚಿಕಿತ್ಸೆಗಳು ಲಭ್ಯ ಇವೆ?

ಕಾಯಿಲೆಯ ಹರಡುವಿಕೆ ಮತ್ತು ವೈಶಿಷ್ಟ್ಯವನ್ನು ಅವಲಂಬಿಸಿಕೊಂಡು ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಪ್ರಸ್ತುತ ತೊನ್ನು ಕಾಯಿಲೆಗೆ ಲಭ್ಯ ಇರುವಂತಹ ಚಿಕಿತ್ಸೆಗಳು ಅಂದರೆ,ವೈದ್ಯಕೀಯ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸೆಗಳು. ಚರ್ಮದ ಸಹಜ ಬಣ್ಣವನ್ನು ಮರಳಿ ಪಡೆಯುವುದು ಹೆಚ್ಚಿನ ಚಿಕಿತ್ಸೆಗಳ ಪ್ರಮುಖ ಉದ್ದೇಶ ಆಗಿರುತ್ತದೆ.

ಒಳಗೊಂಡಿರುವ 
ವೈದ್ಯಕೀಯ ಚಿಕಿತ್ಸೆಗಳು  

ಚರ್ಮದ ಮೇಲೆ ಹಚ್ಚಬಹುದಾದಂತಹ ಮುಲಾಮು ಔಷಧಿಗಳು (ಸ್ಟೀರಾಯ್ಡ ಅಥವಾ ಇತರ ಕ್ರೀಂಗಳಂತಹ) ಚಿಕಿತ್ಸೆಗಳು. ಈ ಔಷಧಿಗಳನ್ನು ಚರ್ಮತಜ್ಞರ ನಿಗಾವಣೆಯ ಮೇರೆಗೆ ಮಾತ್ರವೇ ಉಪಯೋಗಿಸತಕ್ಕದ್ದು.  
– ಲೈಟ್‌ ಚಿಕಿತ್ಸೆಯಲ್ಲಿ ಬಾಯಿಯ ಮೂಲಕ ಪಡೆಯುವ ಪೊÕàರಾಲೆನ್‌ ಮೆಡಿಸಿನ್‌ ಜೊತೆಗೆ ಅಲ್ಟ್ರಾವೈಲೆಟ್‌ಅ ಲೈಟ್‌ ಅಥವಾ ಅಲ್ಟ್ರಾವೈಲೆಟ್‌ ಆ ಯ ಸ್ಪೆಸಿಕ್‌ ವೇವ್‌ ಲೆಂಥ್‌ (ಬ್ರಾಡ್‌ ಬ್ಯಾಂಡ್‌ ಅಥವಾ ನ್ಯಾರೋ ಬ್ಯಾಂಡ್‌ .ಸೂರ್ಯನಬೆಳಕಿನಲ್ಲಿ ಅಂತರ್ಗತವಾಗಿರುವ ನೀಲ ಲೋಹಿತಾತೀತ ಕಿರಣಗಳನ್ನು ಸಹ ಉಪಯೋಗಿಸಬಹುದು. ಇಲ್ಲಿ ರೋಗಿಗಳಿಗೆ ಪೊÕàರಾಲೆನ್‌ ಮಾತ್ರೆಗಳನ್ನು ಬಾಯಿಯ ಮೂಲಕ ತೆಗೆದುಕೊಳ್ಳಲು ಸೂಚಿಸಲಾಗುವುದು ಮತ್ತು 2 ಗಂಟೆಗಳ ಅನಂತರ ಚರ್ಮವನ್ನು ಸೂರ್ಯನ ಬೆಳಕಿಗೆ, ಅಂದರೆ ಬೆಳಗ್ಗೆ 8.30 ರಿಂದ 11.30 ರವರೆಗೆ ಅಥವಾ ಮಧ್ಯಾಹ್ನ 2.30 ರಿಂದ 3.30ರವರೆಗೆ ಒಡ್ಡಿಕೊಳ್ಳಬೇಕಾಗುವುದು. ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ಚಿಕಿತ್ಸೆಯನ್ನು ನೀಡಲಾಗುವುದು. ಶ್ರೇಣೀಕೃತ ಕ್ರಮದಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕಾಗುವುದು. ಈ ಚಿಕಿತ್ಸೆಯು ಕೂದಲಿನ ಸುತ್ತಮುತ್ತಲೂ ಪಿಗೆ¾ಂಟೇಷನ್‌ (ಬಣ್ಣಗೂಡಿಸುವಿಕೆ) ಉಂಟು ಮಾಡುತ್ತದೆ. ನ್ಯಾರೋಬ್ಯಾಂಡ್‌ ಫೋಟೋತೆರಪಿ ಎಂದರೇನು?ಶರೀರದ 20% ಗಿಂತಲೂ ಹೆಚ್ಚು ಭಾಗವನ್ನು ಆವರಿಸಿರುವ ಪರಿಸ್ಥಿತಿಯಲ್ಲಿ ನ್ಯಾರೋಬ್ಯಾಂಡ್‌ ಆಫೋಟೋತೆರಪಿಯನ್ನು, ಪ್ರಸ್ತುತ ತೊನ್ನಿನ ಚಿಕಿತ್ಸೆಯಲ್ಲಿ ಅತ್ಯುನ್ನತ ವಿಧಾನ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿ  311-313 nಞನಿಂದ ಖೀVಆ ಸ್ಪೆಕ್ಟ್ರಮ್‌ ಭಾಗವನ್ನು ಉಪಯೋಗಿಸುತ್ತಾರೆ. ಇದು ಚರ್ಮವನ್ನು ಸುಡಲು ತೆಗೆದುಕೊಳ್ಳುವ ಸಮಯಾವಕಾಶಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪಿಗೆ¾ಂಟ್‌ ಕೋಶಗಳು ಮೆಲೆನೋಸೈಟ್‌ ಮೆಲನಿನ್‌ಗಳನ್ನು ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ಇದನ್ನು ವೈದ್ಯರ ಕ್ಲಿನಿಕ್‌ನಲ್ಲಿ ಫ‌ುಲ್‌ -ಬಾಡಿ ಕ್ಯಾಬಿನೆಟ್‌ ಅಥವಾ ಕೈಯಲ್ಲಿ ಹಿಡಿಯುವ ಸಾಧನದ ಮೂಲಕ ಮಾಡುತ್ತಾರೆ. 

ಬಾಧಿತ ವ್ಯಕ್ತಿಯಲ್ಲಿ ತೊನ್ನು ಹೇಗೆ ಕಾಣುತ್ತಿರುತ್ತದೆ?
ತೊನ್ನು ಈ ಕೆಳಗಿನ ಮೂರರಲ್ಲಿ ಒಂದು ರೀತಿಯಲ್ಲಿ ಕಾಣಿಸಿಕೊಳ್ಳಬಹುದು 
– ಫೋಕಲ್‌ ವಿನ್ಯಾಸ
ಬಣ್ಣಗೆಡುವಿಕೆ ಅಥವಾ ಡಿಪೆಗೆ¾ಂಟೇಷನ್‌ ಒಂದು ಅಥವಾ ಕೆಲವೇ ಕೆಲವು ಜಾಗಗಳಿಗೆ ಸೀಮಿತವಾಗಿರುವುದು.  
– ಸೆಗೆ¾ಂಟಲ್‌ ವಿನ್ಯಾಸ
ಕೆಲವು ಜನರಲ್ಲಿ ಅವರ ಶರೀರದ ಒಂದು ಪಾರ್ಶ್ವದಲ್ಲಿ ಮಾತ್ರವೇ ಚರ್ಮವು ಬಣ್ಣಗೆಡುವುದು ಅಥವಾ ಡಿಪೆಗೆ¾ಂಟೇಷನ್‌ ಆಗುವುದು.
– ಜನರಲೈಸ್ಡ್ ವಿನ್ಯಾಸ
ತೊನ್ನು ಇರುವ ಹೆಚ್ಚಿನ ಜನರಲ್ಲಿ, ದೇಹದ ಬೇರೆ ಬೇರೆ ಭಾಗಗಳಲ್ಲಿ ಚರ್ಮವು ಬಣ್ಣಗೆಡುವುದು ಅಥವಾ ತೇಪೆಗಳು ಕಾಣಿಸಿಕೊಳ್ಳುವುದು. 

ತೊನ್ನು ಅಂಟುರೋಗವೇ?
ತೊನ್ನು ಎಂದರೆ ಅದೊಂದು ಅಂಟುರೋಗ, ಹಾಗಾಗಿ ತೊನ್ನಿನಿಂದ ಬಾಧಿತರಾದ ವ್ಯಕ್ತಿಗಳನ್ನು ದೂರವಿರಿಸಬೇಕು. ಅವರನ್ನು ಸಾಮಾಜಿಕವಾಗಿ ಮತ್ತು ಗುಂಪಿನಿಂದ ದೂರ ಇರಬೇಕು. ಎಂದು ಕೆಲವು ಜನರು ಅಂದುಕೊಳ್ಳುತ್ತಾರೆ. ಆದರೆ ತೊನ್ನು ಅಂಟು ರೋಗ ಅಲ್ಲ.

– ಮುಂದಿನ  ವಾರಕ್ಕೆ 

– ಡಾ| ಸತೀಶ್‌ ಪೈ,
ಡಾ| ಶ್ರೀಚರಿತ ಶೆಟ್ಟಿ,,   
ಪ್ರೊಫೆಸರ್‌ ಮತ್ತು ಮುಖ್ಯಸ್ಥರು,
ಚರ್ಮರೋಗಗಳ ಚಿಕಿತ್ಸಾ ವಿಭಾಗ,
ಕೆಎಂಸಿ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next