Advertisement

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

05:36 PM Nov 11, 2024 | Team Udayavani |

ತೆಂಗಿನ ಎಣ್ಣೆ ಹೈಡ್ರೇಟಿಂಗ್ ಗುಣಲಕ್ಷಣಗಳು ಮತ್ತು ಪೋಷಕಾಂಶಗಳಿಂದ ಕೂಡಿದೆ. ತೆಂಗಿನ ಎಣ್ಣೆ ಕೇವಲ ಅಡುಗೆಗೆ ಬಳಕೆಯಾಗುವುದು ಮಾತ್ರವಲ್ಲದೇ  ತ್ವಚೆಯ ಸೌಂದರ್ಯಕ್ಕೂ ಅಗತ್ಯವಾಗಿ ಬಳಕೆಯಾಗುತ್ತದೆ.

Advertisement

ನಿಮ್ಮ ಮುಖಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಹುಡುಕುತ್ತಿದ್ದಿರಾ? ಹಾಗಿದ್ದರೆ ತ್ವಚೆಯ ರಕ್ಷಣೆಗೆ ತೆಂಗಿನ ಎಣ್ಣೆಯನ್ನೊಮ್ಮೆ ಉಪಯೋಗಿಸಿ ನೋಡಿ.

ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಿಸುತ್ತದೆ. ನಿಮಗೆ ಮೇಕಪ್ ರಿಮೂವರ್ ಅಗತ್ಯವಿದೆಯೇ? ತೆಂಗಿನ ಎಣ್ಣೆ ಮೇಕ್ಅಪ್ ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ. ತ್ವಚೆಯನ್ನು ಸ್ವಚ್ಛ ಹಾಗೂ ಮೃದುವಾಗಿಡಲು ತೆಂಗಿನ ಎಣ್ಣೆ ಉಪಯುಕ್ತವಾಗಿದೆ.

ತೆಂಗಿನ ಎಣ್ಣೆ ನೈಸರ್ಗಿಕ ಲಿಪ್ ಬಾಮ್ ಆಗಿಯೂ ಉಪಯೋಗಿಸಬಹುದು. ತೆಂಗಿನೆಣ್ಣೆ ತ್ವಚೆಯ ಅಗತ್ಯಗಳಿಗಾಗಿ ಆಲ್ ಇನ್ ಒನ್ ಪರಿಹಾರವಾಗಿದೆ.

ತೆಂಗಿನ ಎಣ್ಣೆ ಒಣ ತ್ವಚೆಯನ್ನು ತೇವಗೊಳಿಸುವುದರಿಂದ ಹಿಡಿದು ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ.

Advertisement

ತೆಂಗಿನ ಎಣ್ಣೆಯು ಮುಖಕ್ಕೆ ಅಥವಾ ನಮ್ಮ ತ್ವಚೆಗೆ ಹೇಗೆ ಪ್ರಯೋಜನ ನೀಡುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಪ್ರಯೋಜನಗಳೇನು:

  1. ಡಾರ್ಕ್ ಸರ್ಕಲ್ಸ್ ಮತ್ತು ಹೈಪರ್ ಪಿಗ್ಮೆಂಟೇಶನ್ ವಿರುದ್ಧ ಹೋರಾಡಲು: ಕಣ್ಣಿನ ಸುತ್ತ ಕಪ್ಪು ಕಲೆ ಡಾರ್ಕ್ ಸರ್ಕಲ್ಸ್ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಕಣ್ಣಿನ ಸುತ್ತ ಕಪ್ಪು ಕಲೆ ಮೂಡುವುದಕ್ಕೆ ಹಲವಾರು ಕಾರಣಗಳಿವೆ. ಆದರೆ ಇವುಗಳ ನಿವಾರಣೆಗೆ ತೆಂಗಿನ ಎಣ್ಣೆ ಉಪಕಾರಿಯಾಗಿ ಕೆಲಸ ಮಾಡುತ್ತದೆ. ಈ ನೈಸರ್ಗಿಕ ತೈಲ ಅದರ ಹೊಳಪು ಗುಣಗಳಿಗೆ ಹೆಸರುವಾಸಿಯಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಅಂತಹ ಉತ್ಕರ್ಷಣ ನಿರೋಧಕಗಳು ಹೆಚ್ಚಿರುವುದರಿಂದ ಇವುಗಳನ್ನು ಸುಲಭವಾಗಿ ಹೋಗಲಾಡಿಸಬಹುದು.

ಕಣ್ಣುಗಳ ಸುತ್ತ ಇರುವ ಕಲೆಯನ್ನು ಕಡಿಮೆ ಮಾಡಲು ಮತ್ತು ತ್ವಚೆಯ ಮೈ ಕಾಂತಿಗೆ ಸಹಾಯ ಮಾಡುತ್ತದೆ. ಕಣ್ಣುಗಳ ಸುತ್ತ ಊತವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.

2.ವಿಶ್ರಾಂತಿ ಪಡೆಯಲು:

ಒತ್ತಡದ ಜೀವನಶೈಲಿಯಲ್ಲಿ ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಅತ್ಯಗತ್ಯ. ಸ್ವಲ್ಪ ತೆಂಗಿನೆಣ್ಣೆ ತೆಗೆದುಕೊಂಡು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮುಖವನ್ನು ಮಸಾಜ್ ಮಾಡಿ.

ಹೀಗೆ ಮಸಾಜ್ ಮಾಡುವುದರಿಂದ ಮುಖದ ಸ್ನಾಯುಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆನೋವು ಅಥವಾ ದವಡೆಯ ಸೆಳೆತದಂತಹ ಒತ್ತಡ-ಸಂಬಂಧಿತ ರೋಗಲಕ್ಷಣಗಳನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯ ನೈಸರ್ಗಿಕ, ಸುಗಂಧ ಭರಿತವಾಗಿದ್ದು, ಇದು ಶಾಂತಗೊಳಿಸುವ ಪರಿಣಾಮ ಹೊಂದಿದೆ ಎಂದು ಹೇಳಲಾಗುತ್ತದೆ. ಇದು ವಿಶ್ರಾಂತಿ ಮತ್ತು ಮಾನಸಿಕ ಯೋಗಕ್ಷೇಮವನ್ನು ಕೂಡಾ ಹೆಚ್ಚಿಸುತ್ತದೆ.

  1. ಮಾಯಿಶ್ಚರೈಸರ್ ನಂತೆ ಉಪಯೋಗ:

ಒಣ ತ್ವಚೆಯಿಂದ ಮುಕ್ತವಾಗಿ, ನಯ, ಮೃದುವಾದ ಚರ್ಮವನ್ನು ಹೊಂದಲು ತೆಂಗಿನ ಎಣ್ಣೆ ಅತ್ಯುತ್ತಮ ಆಯ್ಕೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು, ವಿಶೇಷವಾಗಿ ಲಾರಿಕ್ ಮತ್ತು ಕ್ಯಾಪ್ರಿಲಿಕ್ ಆಮ್ಲಗಳ ಹೆಚ್ಚಿನ ಅಂಶ ಚರ್ಮವನ್ನು ಆಳವಾಗಿ ಆರ್ಧ್ರಕಗೊಳಿಸಲು ಶಕ್ತಗೊಳಿಸುತ್ತದೆ.

  1. ಸನ್‌ ಸ್ಕ್ರೀನ್‌ ನಂತೆ ಕಾರ್ಯನಿರ್ವಹಿಸುತ್ತದೆ:

ಸೂರ್ಯನ ಕಿರಣಗಳಿಂದ ತ್ವಚೆಯನ್ನು ಕಾಪಾಡಲು ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಹೊರಾಂಗಣ ಚಟುವಟಿಕೆಗಳಿಗೆ (ಬಿಸಿಲಿಗೆ ಹೊರಗಡೆ ಸುತ್ತಾಡುವವರು, ಕೆಲಸ ಮಾಡುವವರಿಗೆ) ತೆಂಗಿನ ಎಣ್ಣೆ ಸೂಕ್ತವಾದ ಆಯ್ಕೆಯಾಗಿದೆ. ಇದರ ನೈಸರ್ಗಿಕ ಗುಣಲಕ್ಷಣಗಳು ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.

  1. ಮೇಕಪ್ ತೆಗೆಯಲು ಸಹಕಾರಿ:

ತೆಂಗಿನ  ಎಣ್ಣೆಯುಕ್ತ ಅಂಶದಿಂದಾಗಿ ತ್ವಚೆಯ ಮೇಕಪ್ ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಚರ್ಮವನ್ನು ಒಣಗಿಸುವ ಕೆಲ ಮೇಕಪ್ ರಿಮೂವರ್‌ಗಳಿಗಿಂತ ಇದು ಭಿನ್ನವಾಗಿ ಕೆಲಸ ಮಾಡುತ್ತದೆ ತೆಂಗಿನೆಣ್ಣೆ ಬಳಕೆಯ ನಂತರ  ಚರ್ಮವನ್ನು ತೇವಗೊಳಿಸುವಂತೆ ಮಾಡುತ್ತದೆ. ತ್ವಚೆ ಬಗೆಗಿನ ಕಾಳಜಿ ವಹಿಸುವವರು ಮೇಕ್ಅಪ್ ತೆಗೆದುಹಾಕಲು ತೆಂಗಿನ ಎಣ್ಣೆ ಉತ್ತಮ ಆಯ್ಕೆಯಾಗಿದೆ.

  1. ಲಿಪ್ ಗ್ಲಾಸ್ ಆಗಿ ಉಪಯೋಗಿಸಬಹುದು:

ತೆಂಗಿನ ಎಣ್ಣೆ ಸಾಂಪ್ರದಾಯಿಕ ಲಿಪ್ ಗ್ಲಾಸ್‌ಗೆ ಉತ್ತಮ ಪರ್ಯಾಯವಾಗಿದೆ. ತುಟಿಗಳಿಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು  ಹಚ್ಚುವುದರಿಂದ ಅವುಗಳಿಗೆ ಹೊಳಪು ಬರುತ್ತದೆ. ತೆಂಗಿನ ಎಣ್ಣೆ ಆರೋಗ್ಯಕರ ಹೊಳಪನ್ನು ನೀಡಬಹುದು ಮತ್ತು ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಬಹುದು.

ತೆಂಗಿನ ಎಣ್ಣೆ ತುಟಿಗಳಿಗೆ ಹೊಳಪನ್ನು ನೀಡುವುದರ ಜೊತೆಗೆ, ತುಟಿಗಳನ್ನು ತೇವಗೊಳಿಸುವಂತೆ ಮಾಡುತ್ತದೆ, ಶುಷ್ಕತೆ ಮತ್ತು ಬಿರುಕುಗಳಂತಹ ಸಮಸ್ಯೆಗಳನ್ನು ನಿಭಾಯಿಸುತ್ತದೆ.

ನೈಸರ್ಗಿಕ, ಶುದ್ಧ ಮತ್ತು ಸಾವಯವ ತೆಂಗಿನ ಎಣ್ಣೆ ಮಾತ್ರ ತ್ವಚೆಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂಬ ಬಗ್ಗೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next