Advertisement

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

03:34 PM Oct 29, 2024 | Team Udayavani |

ಮೆಲಿಯೊಡೋಸಿಸ್‌ ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಈ ಕಾಯಿಲೆಯು ಮಣ್ಣು ಹಾಗೂ ನೀರಿನಲ್ಲಿ ಕಂಡುಬರುವ ಬರ್ಕೋಲ್‌ಡೇರಿಯಾ ಸೂಡೋಮೆಲಿ ಎಂಬ ಬ್ಯಾಕ್ಟೀರಿಯಾದಿಂದ ಬರುವುದು.ಇದು ಉಸಿರಾಟದ ಮೂಲಕ, ಗಾಯದ ಮೂಲಕ ಅಥವಾ ನೀರಿನ ಸೇವನೆಯ ಮೂಲಕ ಉಂಟಾಗುವುದು.

Advertisement

ಉದ್ಯೋಗದಲ್ಲಿ ಅಥವಾ ಮನೊರಂಜನಾ ಚಟುವಟಿಕೆಗಳಲ್ಲಿ ಮಣ್ಣು ಮತ್ತು ನೀರಿನ ಸಂಪರ್ಕಕ್ಕೆ ಬರುವ ಜನರಿಗೆ ಪರಿಣಾಮ ಬೀರುತ್ತದೆ.

ಅನಿಯಂತ್ರಿತ ಮಧುಮೇಹ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ದೀರ್ಘಕಾಲದ ಮದ್ಯಪಾನ, ಥಲಸ್ಸೆಮಿಯಾ, ರೋಗನಿರೋಧಕ, ಶಕ್ತಿಹೀನತೆ ಪರಿಸ್ಥಿತಿಗಳು ಇತ್ಯಾದಿಗಳಿದ್ದಲ್ಲಿ ಹೆಚ್ಚಿನ ಅಪಾಯವಾಗುವ ಸಾಧ್ಯತೆಗಳಿವೆ. ಇದರಲ್ಲಿ ತೀವ್ರಗತಿಯ (1-21 ದಿನಗಳು) ಹಾಗೂ ದೀರ್ಘಕಾಲದ ಹಂತ (>2 ತಿಂಗಳಿಂದ ಮೇಲ್ಪಟ್ಟು) ಎಂಬ ವಿಧಗಳಿವೆ.

ರೋಗಿಯಲ್ಲಿ ಮೆಲಿಯೊಡೋಸಿಸ್‌ ಅನ್ನು ಹೇಗೆ ಪತ್ತೆ ಹಚ್ಚಬಹುದು?
ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ, ವಿಶೇಷವಾಗಿ ಅವರು ಈ ಕೆಳಗಿನ ಅಂಶಗಳನ್ನು ಹೊಂದಿದ್ದರೆ;
– ರಕ್ತದ ಸೋಂಕು
– ನ್ಯುಮೋನಿಯಾ
– ಆಳವಾದ ಹುಣ್ಣುಗಳು
– ಅನಿಯಂತ್ರಿತ ಮಧುಮೇಹ ಅಥವಾ ಇತರ ಪೂರ್ವಭಾವಿ ಅಂಶಗಳು
– ಮಣ್ಣು/ನೀರಿನ ಸಂಪರ್ಕ
– ಪ್ರಮಾಣಿತ ಚಿಕಿತ್ಸೆಗೆ ಸ್ಪಂದಿಸದೇ ಇರುವುದು

Advertisement

ಮೆಲಿಯೊಡೋಸಿಸ್‌ ರೋಗಿಗಳು ಸಾಮಾನ್ಯವಾಗಿ ಎಲ್ಲಿ ಮತ್ತು ಹೇಗೆ ಕಾಣಿಸಿಕೊಳ್ಳುತ್ತಾರೆ?

ನಿರ್ದಿಷ್ಟ ಲಕ್ಷಣಗಳು ಮತ್ತು ಚಿಹ್ನೆಗಳು ಸಾಮಾನ್ಯ ಪ್ರವೇಶ ವಿಭಾಗಗಳು
1.    ಎದೆನೋವು, ಉಸಿರಾಟದ ತೊಂದರೆ ಎಮೆರ್ಜೆನ್ಸಿ ಮೆಡಿಸಿನ್‌, ಜನರಲ್‌ ಮೆಡಿಸಿನ್‌, ಪಲ್ಮನರಿ ಮೆಡಿಸಿನ್‌, ಕಾರ್ಡಿಯಾಲಜಿ
2.    ಅಂಗಗಳ ಬಾವು (ಯಕೃತ್, ಶ್ವಾಸಕೋಶ, ಗುಲ್ಮ, ಪರೋಟಿಡ್‌, ಪ್ರಾಸ್ಪೆಟ್‌, ದುಗ್ಧರಸ ಗ್ರಂಥಿಗಳು ಅಥವಾ ಮೆದುಳು) ಶಸ್ತ್ರಚಿಕಿತ್ಸೆ, ನರಶಸ್ತ್ರಚಿಕಿತ್ಸೆ
3.    ರೋಗಗ್ರಸ್ತವಾಗುವಿಕೆ, ದಿಗ್ಭ್ರಮೆ, ಕುತ್ತಿಗೆಬಿಗಿತ, ಲಕ್ಷಣಗಳು ಮತ್ತು ಎನ್ಸೆಫಲೋಮೈಲಿಟಿಸ್/‌ ಮೆನಿಂಜೈಟಿಸ್‌/ ಹೆಚ್ಚುವರಿ ಮೆನಿಂಜಿಯಲ್‌ ಕಾಯಿಲೆಯ ಚಿಹ್ನೆಗಳು ಎಮರ್ಜೆನ್ಸಿ ಮೆಡಿಸನ್‌, ಜನರಲ್‌ ಮೆಡಿಸಿನ್‌, ನ್ಯೂರೋಮೆಡಿಸಿನ್‌
4.    ಕೀಲುನೋವು , ರೋಗಲಕ್ಷಣಗಳು ಮತ್ತು ಸೆಪ್ಟಿಕ್‌ ಸಂಧಿವಾತ, ಆಸ್ಟಿಯೋಮೈಲಿಟಿಸ್‌ ಅನ್ನು ಸೂಚಿಸುವ ಚಿಹ್ನೆಗಳು ಆರ್ಥೋಪೆಡಿಕ್ಸ್
5.    ಅಧಿಕ ಜ್ವರ, ಅಧಿಕ ರಕ್ತದೊತ್ತಡ, ದಿಗ್ಭ್ರಮೆ, ಸ್ವನಿಯಂತ್ರಿತ ಅಪಸಾಮಾನ್ಯ ಕ್ರಿಯೆ, ಸೆಪ್ಸಿಸ್‌ ನ ಚಿಹ್ನೆಗಳು‌ ಮತ್ತು ಲಕ್ಷಣಗಳು ಏಮರ್ಜೆನ್ಸಿ ಮೆಡಿಸಿನ್‌, ಜನರಲ್‌ ಮೆಡಿಸಿನ್
6.    ಚರ್ಮದ ಹುಣ್ಣು, ಗಂಟುಗಳು, ಚರ್ಮದ ಬಾವು ಡರ್ಮಟಾಲಜಿ

ಮೆಲಿಯೊಡೋಸಿಸ್‌ ರೋಗಿಗಳ ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳು

ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳು ಪ್ರವೇಶ ವಿಭಾಗಗಳು
1.    ಜ್ವರ( ತಾಪಮಾನ >38.0°C [100.4°F])

ಎಲ್ಲಾ ವಿಭಾಗಗಳು,

ವಿಶೇಷವಾಗಿ ಮೆಡಿಸಿನ್‌,

ಎಮರ್ಜೆನ್ಸಿ ಮೆಡಿಸಿನ್

2.    ಉಸಿರಾಟದ ತೊಂದರೆ
3.    ಸ್ನಾಯು ನೋವುಗಳು
4.    ತಲೆನೋವು
5.    ಎದೆನೋವು
6.    ರಕ್ತದ ಕಮ್ಮಿಗೂಡಿಕೆ
7.    ಹೊಟ್ಟೆಯ ಅಸ್ವಸ್ಥತೆ
8.    ತೂಕ ಇಳಿಕೆ
9.    ಚರ್ಮದ ಹುಣ್ಣು

ಮೆಲಿಯೊಡೋಸಿಸ್‌ನ ಸಾಮಾನ್ಯ ರೋಗಲಕ್ಷಣಗಳು:

  • ರಕ್ತದ ಸೋಂಕು
  • ನ್ಯುಮೋನಿಯಾ
  • ಆಳವಾದ ಅಂಗದ ಬಾವು (ಯಕೃತ್, ಗುಲ್ಮ, ದುಗ್ಧರಸ ಗ್ರಂಥಿಗಳು)
  • ಕೆನ್ನೆಯ ಉರಿಯೂತ
  • ಸೆಪ್ಟಿಕ್‌ ಸಂಧಿವಾತ
  • ಆಸ್ಟಿಯೋಮೈಲಿಟೀಸ್ ‌
  • ಚರ್ಮದ ಹಾಗೂ ಅಂಗಾಂಶದ ಉರಿಯೂತ
  • ಚರ್ಮದ ಹುಣ್ಣು
  • ಚರ್ಮದ ಬಾವು
  • ಮೆದುಳಿನ ಉರಿಯೂತ

ಶಂಕಿತ ಮೆಲಿಯೊಡೋಸಿಸ್‌ ರೋಗಿಯಿಂದ ಸರಿಯಾದ ಮಾದರಿಗಳನ್ನು ಸಂಗ್ರಹಿಸಬೇಕು:

  • ರಕ್ತಪರೀಕ್ಷೆ (ಕನಿಷ್ಟ 20 ಮಿಲಿ ರಕ್ತ)
  • ಕಫ (ಅಥವಾ ಯಾವುದೇ ಇತರ ಉಸಿರಾಟದ ಮಾದರಿಗಳು)
  • ಕೀವು (ಚರ್ಮದ ಬಾವು ಅಥವಾ ಆಳವಾದ ಅಂಗದ ಬಾವುಗಳು)
  • ಅಂಗಾಂಶ (ಚರ್ಮದ ಹುಣ್ಣುಗಳಿಂದ)
  • ದೇಹದ ದ್ರವಗಳು (ಪೆರಿಟೋನಿಯಲ್‌, ಪ್ಲೂರಲ್‌, ಪೆರಿಕಾರ್ಡಿಯಲ್‌)
  • ಕೀಲಿನ ದ್ರವ
  • ಮೆದುಳು ಮತ್ತು ಬೆನ್ನುಹುರಿಯ ದ್ರವ
  • ಬಯಾಪ್ಸಿ (ಲಿಂಫಾಡಿನೋಪತಿಯಲ್ಲಿ)
  • ಮೂತ್ರ


*ಮೈಕ್ರೋಬಯಾಲಜಿ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌
ಮಣಿಪಾಲ, ಕರ್ನಾಟಕ
ಇಮೇಲ್‌ ಐಡಿ: mission.taskforce@manipal.edu

Advertisement

Udayavani is now on Telegram. Click here to join our channel and stay updated with the latest news.

Next