Advertisement
ಆಸ್ಟ್ರೇಲಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡ 28 ರನ್ ಗಳಿಸಿದ್ದ ವೇಳೆ 9 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಔಟಾದರು. ಆ ಬಳಿಕ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅಮೋಘ ಜತೆಯಾಟವಾಡಿದರು. ವಾರ್ನರ್ 93 ಎಸೆತಗಳಲ್ಲಿ 104 ರನ್ ಗಳಿಸಿ ಔಟಾದರು. ಸ್ಮಿತ್ 71 ರನ್ ಗಳಿಸಿ ಔಟಾದರು. ಆ ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರಿಸಿದರು. 40 ಎಸೆತಗಳಲ್ಲಿ 102 ರನ್ ಗಳಿಸಿ ವಿಶ್ವ ಕಪ್ ನ ಅತೀ ವೇಗದ ಶತಕದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡರು. 44 ಎಸೆತಗಳಲ್ಲಿ 106 ರನ್ ಗಳಿಸಿ ಔಟಾದರು. ಅವರು 9 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಜೋಶ್ ಇಂಗ್ಲಿಸ್ 14, ಪ್ಯಾಟ್ ಕಮ್ಮಿನ್ಸ್ ಔಟಾಗದೆ 12 ರನ್ ಗಳಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ – (40 ಎಸೆತ) ನೆದರ್ಲ್ಯಾಂಡ್ಸ್ ವಿರುದ್ಧ (ದೆಹಲಿ)
ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (49 ಎಸೆತ) ಶ್ರೀಲಂಕಾ ವಿರುದ್ಧ ( ದೆಹಲಿ)
ಐರ್ಲ್ಯಾಂಡ್ ನ ಕೆವಿನ್ ಒ’ಬ್ರೇನ್ (50 ಎಸೆತ) ಇಂಗ್ಲೆಂಡ್ ವಿರುದ್ಧ , ಬೆಂಗಳೂರು 2011
ಗ್ಲೆನ್ ಮ್ಯಾಕ್ಸ್‌ವೆಲ್ (51 ಎಸೆತ) ಶ್ರೀಲಂಕಾ ವಿರುದ್ಧ ಸಿಡ್ನಿ 2015
ಎಬಿ ಡಿವಿಲಿಯರ್ಸ್ (52 ಎಸೆತ) ವೆಸ್ಟ್ ಇಂಡೀಸ್ ವಿರುದ್ಧ ಸಿಡ್ನಿ 2015