Advertisement

ಹುಲಸೂರ ತಾಲೂಕು ಅಭಿವೃದ್ಧಿಗೆ ಶ್ರಮಿಸುವೆ

10:02 AM Jun 11, 2018 | |

ಬಸವಕಲ್ಯಾಣ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹುಲಸೂರ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು.

Advertisement

ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ನೂತನ ಹುಲಸೂರ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅಭಿವೃದ್ಧಿಗೆ ಪಕ್ಷಭೇದ ಮರೆತು ಎಲ್ಲರು ಕೈ ಜೋಡಿಸಬೇಕು ಎಂದರು.

ಹುಲಸೂರನಲ್ಲಿ ಈಗಾಗಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಹುಲಸೂರನಲ್ಲಿ ಪಿಜಿ ಸೆಂಟರ್‌ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ ಎಂದರು.

ಬಸವಣ್ಣನವರ ಕರ್ಮ ಭೂಮಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಶಿಘ್ರದಲ್ಲಿಯೇ ಅಡಿಗಲ್ಲು ಸಮಾರಂಭ ನೆರವೇರಿಸಲಾಗುವು. ಅಡಿಗಲ್ಲು ಸಮಾರಂಭಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗುವುದು. ಬಿಕೆಡಿಬಿಗೆ
ಅನುದಾನ ಕಲ್ಪಿಸಿ ಇಲ್ಲಿಯ ಶರಣ ಸ್ಮಾರಕಗಳ ಅಭಿವೃದ್ಧಿ ಜತೆಗೆ ಬಸವಕಲ್ಯಾಣ ನಗರವನ್ನು ಸಮಗ್ರ ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರಿಯ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.

ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿ ಪತಿ ಡಾ| ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಶರಣ ತತ್ವ ಪ್ರತಿಪಾದಕರಾಗಿರುವ ಬಿ.ನಾರಾಯಣರಾವ್‌ ಅವರು ಶಾಸಕರಾಗಿ ಆಯ್ಕೆಯಾಗಿದ್ದು ಎಲ್ಲರಿಗೂ ಸಂತಸ ತಂದಿದೆ. ನಾರಾಯಣರಾವ್‌ ಅವರ ಅವಧಿಯಲ್ಲಿ ಶರಣ ಭೂಮಿ ಹೆಚ್ಚು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ಐತಿಹಾಸಿಕ ಚರಿತ್ರೆ ಹೊಂದಿರುವ ಹುಲಸೂರು ಗ್ರಾಮದ ಅಭಿವೃದ್ಧಿ ಆದ್ಯತೆ ನೀಡಬೇಕು. ಇಲ್ಲಿಯ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಕಾಂಗ್ರೆಸ್‌ ಪ್ರಮುಖ ಸಂತೋಷ ಗುತ್ತೇದಾರ, ಪ್ರಮುಖರಾದ ಓಂಕಾರ ಪಟೆ°, ಪ್ರಹ್ಲಾದ ಮೋರೆ, ಸುರೇಶ ಚಿಕುರ್ತೆ, ರಣಜಿತ ಗಾಯಕವಾಡ, ವಿವೇಕ ಚಳಕಾಪುರೆ, ವಿದ್ಯಾಸಾಗರ ಬನ್ಸೂಡೆ, ಗೌಸೋದಿನ್‌ ಬಿರಿವಾಲೆ, ಖಾಜಾಮೀಯ್ಯ ಕರಿಮಸಾಬ್‌, ಬಸವಕುಮಾರ ಕೌಟೆ, ಬಾಬುರಾವ್‌ ಮಲೋದೆ, ಶಿವರಾಜ ಕೌಟೆ ಇದ್ದರು. ಬಾಬುರಾವ್‌ ಗೌಂಡಗಾವೆ ಸ್ವಾಗತಿಸಿ, ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next