Advertisement

“ದೇಶದ್ರೋಹಿ’ಪದಕ್ಕೆ ಶಾಸನದಲ್ಲಿ ವ್ಯಾಖ್ಯಾನವಿಲ್ಲ

08:05 PM Dec 21, 2021 | Team Udayavani |

ನವದೆಹಲಿ:”ದೇಶದ್ರೋಹಿ’ ಎಂಬ ಪದವನ್ನು ಶಾಸನದಲ್ಲಿ ವ್ಯಾಖ್ಯಾನಿಸಿರಲಿಲ್ಲ. 1976ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಆ ಪದವನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ನಂತರ, ಒಂದು ವರ್ಷದ ಬಳಿಕ ಅದನ್ನು ತೆಗೆದುಹಾಕಲಾಯಿತು ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್‌ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

Advertisement

ಯಾವುದಾದರೂ ಶಾಸನ ಅಥವಾ ರೂಲ್‌ಗಳು ಅಥವಾ ಇತರೆ ಕಾನೂನಾತ್ಮಕ ಅಧಿನಿಯಮದಲ್ಲಿ ಸರ್ಕಾರವು “ದೇಶದ್ರೋಹಿ’ ಎಂಬ ಪದವನ್ನು ವ್ಯಾಖ್ಯಾನಿಸಿದೆಯೇ ಎಂಬ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಅವರ ಪ್ರಶ್ನೆಗೆ ಸಚಿವ ರಾಯ್‌ ಈ ರೀತಿ ಉತ್ತರಿಸಿದ್ದಾರೆ.

ಇದನ್ನೂ ಓದಿ:ಯಡ್ರಾಮಿ : ರೈತ ಸಂಘಟನೆಯಿಂದ ಅಹೋರಾತ್ರಿ ಪ್ರತಿಭಟನೆ ; ಹಲವರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ದೇಶದ್ರೋಹಿ ಎಂಬ ಪದವನ್ನು ಶಾಸನದಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಆದರೆ, ದೇಶದ ಏಕತೆ ಮತ್ತು ಸಮಗ್ರತೆಗೆ ಹಾನಿ ಉಂಟುಮಾಡುವಂಥ ಕಾನೂನುಬಾಹಿರ ಮತ್ತು ಇತರೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕ್ರಿಮಿನಲ್‌ ಕಾನೂನುಗಳು ಮತ್ತು ವಿವಿಧ ನ್ಯಾಯಾಂಗದ ತೀರ್ಪುಗಳು ನಮ್ಮ ಮುಂದಿವೆ ಎಂದು ರಾಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next