Advertisement

South Korea: ಅಧ್ಯಕ್ಷ ಯೂನ್‌ ರನ್ನು ಕೂಡಲೇ ಬಂಧಿಸಿ: ಪೊಲೀಸರಿಗೆ ದಕ್ಷಿಣ ಕೊರಿಯಾ!

02:26 PM Jan 06, 2025 | Team Udayavani |

ದಕ್ಷಿಣ ಕೊರಿಯಾ: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ಅವರನ್ನು ಬಂಧಿಸಲು ಪೊಲೀಸರು ನೆರವಾಗಬೇಕೆಂದು ದಕ್ಷಿಣ ಕೊರಿಯಾದ ಭ್ರಷ್ಟಾಚಾರ ನಿಗ್ರಹ ಪಡೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಯೂನ್‌ ಅವರ ಬಂಧನಕ್ಕೆ ಹೊರಡಿಸಿರುವ ವಾರಂಟ್‌ ಅವಧಿ ಸೋಮವಾರ ಸಂಜೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಯೂನ್‌ ಅವರನ್ನು ಬಂಧಿಸಲು ಸಹಕರಿಸುವಂತೆ ಭ್ರಷ್ಟಾಚಾರ ನಿಗ್ರಹ ಉನ್ನತ ತನಿಖಾಧಿಕಾರಿ ಪತ್ರ ಮುಖೇನ ಭಾನುವಾರ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಅಧ್ಯಕ್ಷರ ನಿವಾಸದಲ್ಲಿ ಅಧ್ಯಕ್ಷ ಯೂನ್‌ ಭದ್ರತಾ ಸಿಬಂದಿಗಳು ಮತ್ತು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ನಡುವೆ ಸಂಘರ್ಷ ನಡೆದ ನಂತರ ಕಳೆದ ಶುಕ್ರವಾರ ಬಂಧನ ವಾರಂಟ್‌ ಜಾರಿಗೊಳಿಸಲು ತಡೆ ನೀಡಿತ್ತು.

ದಕ್ಷಿಣ ಕೊರಿಯಾದಲ್ಲಿ ಡಿಸೆಂಬರ್‌ 3ರಂದು ದಿಢೀರನೆ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದ ಯೂನ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದ ನಂತರ ಭ್ರಷ್ಟಾಚಾರ ನಿಗ್ರಹ ಪಡೆ ಮತ್ತು, ಪೊಲೀಸರು, ರಕ್ಷಣಾ ಸಚಿವಾಲಯ ಸೇರಿ ತನಿಖೆ ನಡೆಸುತ್ತಿತ್ತು ಎಂದು ವರದಿ ತಿಳಿಸಿದೆ.

Advertisement

ಯೂನ್ಸ್‌ ವಿರುದ್ಧ ಹೊರಡಿಸಿದ್ದ ವಾರಂಟ್‌ ಕಾನೂನು ಬಾಹಿರ ಮತ್ತು ಅಸಿಂಧು ಎಂದು ಯೂನ್ಸ್‌ ಅವರ ಕಾನೂನು ತಜ್ಞರ ತಂಡ ತಿಳಿಸಿದೆ. ದೇಶದಲ್ಲಿ ಮಿಲಿಟರಿ ಆಡಳಿತ ಘೋಷಿಸಿದ್ದ ಯೂನ್ಸ್‌ ವಿರುದ್ಧ ತನಿಖೆ ನಡೆಸುವ ಅಧಿಕಾರ ಭ್ರಷ್ಟಾಚಾರ ನಿಗ್ರಹ ಪಡೆಗಿಲ್ಲ ಎಂದು ತಿರುಗೇಟು ನೀಡಿದೆ.

“ತನ್ನನ್ನು ಬಂಧಿಸಲು ಹಾಗೂ ಅಧ್ಯಕ್ಷರ ನಿವಾಸವನ್ನು ಶೋಧಿಸಲು ಹೊರಡಿಸಿರುವ ವಾರಂಟ್‌ ಗೆ ನಿರ್ಬಂಧ ಹೇರಬೇಕೆಂದು ಕೋರಿ ಯೂನ್‌ ಭಾನುವಾರ ಸಿಯೋಲ್‌ ಕೋರ್ಟ್‌ ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು”.

Advertisement

Udayavani is now on Telegram. Click here to join our channel and stay updated with the latest news.

Next