Advertisement

ಲಾಕ್‌ಡೌನ್‌ ಸಡಿಲಿಕೆ : ಜುಲೈ 5 ರಿಂದ ವಂಡರ್‌ಲಾ ರೆಸಾರ್ಟ್‌ ಪ್ರಾರಂಭ

08:21 PM Jul 04, 2021 | Team Udayavani |

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಬಳಿಕ ಜುಲೈ 5 ರಿಂದ ವಂಡರ್‌ ಲಾ ರೆಸಾರ್ಟ್‌ನನ್ನು ಶೇ.50 ರಷ್ಟು ತೆರೆಯುವುದಾಗಿ ವಂಡರ್‌ಲಾ ಹಾಲಿಡೇಸ್ ತಿಳಿಸಿದೆ.

Advertisement

ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ವಂಡರ್‌ಲಾ ಪಾರ್ಕ್‌ ಹಾಗೂ ರೆಸಾರ್ಟ್‌ನನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ರೆಸ್ಟೋರೆಂಟ್‌ಗೆ ಶೇ.50 ರಷ್ಟು ಸಾಮರ್ಥ್ಯದಲ್ಲಿ ತೆರೆಯಲು ಅವಕಾಶ ನೀಡಿದೆ.

ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತೆಯವನ್ನು ಹಾಗೂ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಲಿದೆ ಎಂದು ವಂಡೆರ್‌ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಾಪಿಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next