Advertisement
ಬ್ಯಾಟಿಂಗ್ ನೆಚ್ಚಿಕೊಂಡ ಬಾಂಗ್ಲಾ ವನಿತೆ ಯರು ಆರಂಭಿಕ ಆಟಗಾರ್ತಿ ಶಾಥಿ ರಾಣಿ, ಶೋಭನಾ ಮೊಸ್ತರಿ ಮತ್ತು ನಾಯಕಿ ನಿಗರ್ ಸುಲ್ತಾನಾ ಅವರ ಉಪಯುಕ್ತ ಆಟದಿಂದಾಗಿ 7 ವಿಕೆಟಿಗೆ 119 ರನ್ನುಗಳ ಉತ್ತಮ ಮೊತ್ತ ಪೇರಿಸಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಸ್ಕಾಟ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 103 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಸ್ಕಾಟ್ಲೆಂಡಿನ ವಿಕೆಟ್‌ಕೀಪರ್ ಸಾರಾ ಬ್ರೈಸ್ ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಪ್ರಯತ್ನಿಸಿದರು. ಆದರೆ ಅವರಿಗೆ ಉಳಿದ ಆಟಗಾರ್ತಿಯರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಇನ್ನಿಂಗ್ಸ್‌ಪೂರ್ತಿ ಏಕಾಂಗಿಯಾಗಿ ಹೋರಾಡಿದ ಅವರು 52 ಎಸೆತಗ
ಳಿಂದ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಕೇವಲ 1 ಬೌಂಡರಿ ಹೊಡೆದಿದ್ದರು. ಬ್ರೈಸ್ ಅವರನ್ನು ಬಿಟ್ಟರೆ ಸ್ಕಾಟ್ಲೆಂಡಿನ ಕೇವಲ ಇಬ್ಬರು ಆಟಗಾರ್ತಿಯರಾದ ನಾಯಕಿ ಕ್ಯಾತರಿನ್ ಬ್ರೈಸ್ (11) ಮತ್ತು ಪ್ರಿಯಾನಾಜ್ ಚಟರ್ಜಿ (11) ಎರಡಂಕೆಯ ಮೊತ್ತ ಗಳಿಸಿದ್ದರು. ಬಾಂಗ್ಲಾದ ನಿಖರ ದಾಳಿಯಿಂದಾಗಿ ಸ್ಕಾಟ್ಲೆಂಡಿನ ವನಿತೆಯರು ಆಗಾಗ್ಗೆ ವಿಕೆಟ್ ಕಳೆದುಕೊಂಡಿದ್ದರಿಂದ ಬಾಂಗ್ಲಾ ಮೇಲುಗೈ ಸಾಧಿಸುವಂತಾಯಿತು.
Related Articles
Advertisement
ಬಾಂಗ್ಲಾ ಉತ್ತಮ ಆರಂಭಬಾಂಗ್ಲಾದ ಆರಂಭ ಉತ್ತಮವಾಗಿತ್ತು. ಮೊದಲ 11.5 ಓವರ್‌ಗಳಲ್ಲಿ ತಂಡ ಒಂದು ವಿಕೆಟಿಗೆ 68 ರನ್ ಗಳಿಸಿತ್ತು. ಈ ಹಂತದಲ್ಲಿ ತಂಡದ ಕುಸಿತ ಆರಂಭಗೊಂಡಿತ್ತು. ತಂಡ ಆಬಳಿಕ 51 ರನ್ ಪೇರಿಸುವಷ್ಟರಲ್ಲಿ ತಂಡ ಇನ್ನುಳಿದ ಐದು ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು ಅಲ್ಲದೇ ರನ್ ವೇಗಕ್ಕೂ ಕಡಿವಾಣ ಬಿತ್ತು. ಸ್ಕಾಟ್ಲೆಂಡಿನ ಸ್ಪಿನ್ನರ್ ಸಾಸ್ಕಿಯಾ ಹಾರ್ಲೆ 13 ರನ್ನಿಗೆ ಮೂರು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 7 ವಿಕೆಟಿಗೆ 119 (ಶೋಭನಾ ಮೊಸ್ತರಿ 36, ಶಾಥಿ ರಾಣಿ 29, ಸಾಸ್ಕಿಯಾ ಹಾರ್ಲೆ 13ಕ್ಕೆ 3); ಸ್ಕಾಟ್ಲೆಂಡ್ 7 ವಿಕೆಟಿಗೆ 103 (ಸಾರಾ ಬ್ರೈಸ್ 49 ಔಟಾಗದೆ, ರಿತು ಮೋನಿ 15ಕ್ಕೆ 2). ಪಾಕ್ ವನಿತೆಯರಿಗೆ ಜಯ
ದಿನದ 2 ನೇ ಪಂದ್ಯದಲ್ಲಿ ಪಾಕಿಸ್ಥಾನ ವನಿತೆಯರು ಶ್ರೀಲಂಕಾ ವನಿತೆಯರನ್ನು 31 ರನ್ನುಗಳಿಂದ ಸೋಲಿಸಿದ್ದಾರೆ. ಪಾಕಿಸ್ಥಾನ ತಂಡವು 20 ಓವರ್‌ಗಳಲ್ಲಿ 116 ರನ್ನಿಗೆ ಆಲೌಟಾದರೆ ಶ್ರೀಲಂಕಾ ತಂಡವು 9 ವಿಕೆಟಿಗೆ 85 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು.