Advertisement

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

10:46 PM Oct 05, 2024 | Team Udayavani |

ದುಬಾೖ: ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಮುಖಾಮುಖಿಯಲ್ಲೇ ನ್ಯೂಜಿಲ್ಯಾಂಡ್‌ ಕೈಯಲ್ಲಿ ಆಘಾತಕಾರಿ ಸೋಲುಂಡ ಭಾರತಕ್ಕೆ ಮುಂದಿ ನೆಲ್ಲ ಪಂದ್ಯಗಳೂ ನಿರ್ಣಾಯಕವಾಗಿ ಪರಿಣಮಿಸಿವೆ. ಇಂಥ ಒತ್ತಡದಲ್ಲೇ ಕೌರ್‌ ಪಡೆ ರವಿವಾರ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಕಿವೀಸ್‌ ವಿರುದ್ಧ ಎಲ್ಲ ವಿಭಾಗಗಳಲ್ಲೂ ವೈಫ‌ಲ್ಯ ಅನುಭವಿಸಿದ ಭಾರತ, ಒಗ್ಗೂಡಿ ಹೋರಾಡಿ ಹಳಿ ಏರಲು ಶತಪ್ರಯತ್ನ ಮಾಡಬೇಕಿದೆ.

Advertisement

ಇನ್ನೊಂದೆಡೆ ಪಾಕಿಸ್ಥಾನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಎಂದೇ ಪರಿಗಣಿಸಲಾಗಿದ್ದ ಶ್ರೀಲಂಕಾವನ್ನು 31 ರನ್ನುಗಳಿಂದ ಮಣಿಸಿ, ಭಾರತ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಕುಸಿದಿದೆ ರನ್‌ರೇಟ್‌

ನ್ಯೂಜಿಲ್ಯಾಂಡ್‌ ಕೈಯಲ್ಲಿ 58 ರನ್ನುಗಳ ಸೋಲನುಭವಿಸಿದ ಕಾರಣ ಭಾರತದ ರನ್‌ರೇಟ್‌ – 2.900ಕ್ಕೆ ಇಳಿದಿದೆ. ಮುಂದೆ ಹಾಲಿ ಚಾಂಪಿ ಯನ್‌ ಆಸ್ಟ್ರೇಲಿಯ, ಏಷ್ಯಾ ಕಪ್‌ ಚಾಂಪಿಯನ್‌ ಶ್ರೀಲಂಕಾವನ್ನು ಎದು ರಿಸಬೇಕಾದ ಭಾರೀ ಸವಾಲಿದೆ. ಸೆಮಿ ಫೈನಲ್‌ ಪ್ರವೇಶಿಸಬೇಕಾದರೆ ಉಳಿದೆಲ್ಲ ಪಂದ್ಯಗಳನ್ನೂ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದುದು ಅಗತ್ಯ. “ಎ’ ವಿಭಾಗ “ಗ್ರೂಪ್‌ ಆಫ್ ಡೆತ್‌’ ಆಗಿ ಪರಿಣಮಿ ಸಿರುವುದು ಕೂಡ ಇನ್ನೊಂದು ಕಾರಣ.

ಕೇವಲ ಒಂದು ದಿನದ ಅವಧಿಯಲ್ಲಿ ಪುನರ್‌ ಸಂಘಟಿತಗೊಂಡು ಗೆಲುವಿನ ಮೆಟ್ಟಿಲೇರುವುದು ಸುಲಭವಲ್ಲ. ಅಂದ ಮಾತ್ರಕ್ಕೆ ಅಸಾಧ್ಯವಲ್ಲ. ದಾಖಲೆಗಳೆಲ್ಲ ಭಾರತದ ಪರವಾಗಿವೆ. ಪಾಕ್‌ ವಿರುದ್ಧ ಆಡಿದ 15 ಟಿ20 ಪಂದ್ಯಗಳಲ್ಲಿ ಭಾರತ 12ರಲ್ಲಿ ಜಯ ಸಾಧಿಸಿದೆ.

Advertisement

ಕೆಲವು ಎಡವಟ್ಟುಗಳು

ಭಾರತವಿಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಮಾಡಿಕೊಂಡ ಕೆಲವು ಎಡವಟ್ಟುಗ ಳನ್ನು ಸರಿಪಡಿಸಿಕೊಳ್ಳಬೇಕಿದೆ. ನಾಯಕಿ ಕೌರ್‌ 3ನೇ, ಜೆಮಿಮಾ 4ನೇ, ರಿಚಾ 5ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಆದರೆ ಇವ್ಯಾವುದೂ ಇವರ ಬ್ಯಾಟಿಂಗ್‌ ಕ್ರಮಾಂಕವಲ್ಲ. ಕೌರ್‌ 4ನೇ ಕ್ರಮಾಂಕದ ಗಟ್ಟಿಗಿತ್ತಿ. ವನ್‌ಡೌನ್‌ನಲ್ಲಿ ಆಡಿದ 19 ಪಂದ್ಯಗಳಲ್ಲಿ ಅವರಿಂದ ಒಂದೂ ಅರ್ಧ ಶತಕ ದಾಖಲಾಗಿಲ್ಲ. ಅರ್ಥಾತ್‌, ಭಾರತ ವಿನ್ನೂ ಸೂಕ್ತ ವನ್‌ಡೌನ್‌ ಆಟಗಾರ್ತಿಯ ಹುಡುಕಾಟದಲ್ಲೇ ಇದೆ!

Advertisement

Udayavani is now on Telegram. Click here to join our channel and stay updated with the latest news.

Next