Advertisement
‘ಅಪನಾ ಬೇಕರಿ’ ಎಂಬ ಹೆಸರಿನಲ್ಲಿ ಬೇಕರಿ ಆರಂಭವಾಗಿದ್ದು, ರಾಗಿಯಿಂದ ತಯಾರಿಸುವ ಬೇಕರಿ ತಿನಿಸುಗಳು ಇಲ್ಲಿ ಲಭ್ಯವಿದೆ. ನಾಲ್ಕು ವರ್ಷಗಳ ನಿರಂತರ ಪರಿಶ್ರಮದಿಂದಾಗಿ ಈ ಬೇಕರಿ ಆರಂಭವಾಗಿದ್ದು, ಈಗ ಆ ಹತ್ತು ಮಂದಿ ಮಹಿಳೆಯರನ್ನು ಅಲ್ಲಿ ‘ಬೇಕರಿ ಸಿಸ್ಟರ್ಸ್’ ಎಂದೇ ಅಲ್ಲಿ ಕರೆಯುತ್ತಾರೆ ಎನ್ನುವುದು ವಿಶೇಷ.
Related Articles
Advertisement
ಗ್ರಾಮ ಸಭೆಯೊಂದರಲ್ಲಿ ಅಗಾ ಖಾನ್ ಎನ್ ಜಿ ಒ ವೊಂದು ಗ್ರಾಮ ಮಟ್ಟದ ಸ್ವ ಸಹಾಯ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದಾಗ ರಾಜ್ಯ ಸರ್ಕಾರದ ಸಖಿ ಮಂಡಲ ಯೋಜನೆ ಅಡಿಯಲ್ಲಿ ಆರಂಭವಾದ ಈ ರಿದ್ವಿ ಸಿದ್ವಿ ಸ್ವ-ಸಹಾಯ ಸಂಘದ ಮೂಲಕ ಒಂದಾದ ಈ ಮಹಿಳೆಯರು, ತಿಂಗಳಿಗೊಮ್ಮೆ ಸೇರುತ್ತಿದ್ದರು. ದುಡಿದ ಒಂದಿಷ್ಟು ಪಾಲನ್ನು ಸಂಗ್ರಹಿಸಿದ ಮೊತ್ತ ದೊಡ್ಡದಾದಾಗ 2017 ರಲ್ಲಿ ಅಪನಾ ಬೇಕರಿ ಆರಂಭವಾಯಿತು.
ಈಗ ದುಪ್ಪಟ್ಟು ದುಡಿಯುತ್ತಿದ್ದೇವೆ
ಕೃಷಿ ಕಾರ್ಮಿಕರಾಗಿದ್ದಾಗ ನಾವು ದಿನನಿತ್ಯ 100 ರೂ. ವೇತನವನ್ನು ಪಡೆಯುತ್ತಿದ್ದೆವು. ಈಗ ನಮಗೆ ದಿನಕ್ಕೆ 200 ರೂ. ಸಿಗುತ್ತದೆ.” “ಈ ಮೊದಲು ನಾವು ಹಣದ ತೊಂದರೆ ಅನುಭವಿಸುತ್ತಿದ್ದೆವು. ಮಾತ್ರವಲ್ಲದೇ, ನಮ್ಮ ಅಗತ್ಯತೆಗಳಿಗೆ ಬೇರೆಯವರನ್ನು ಅವಲಂಭಿಸಿರಬೇಕಾಗಿತ್ತು. ಆದರೇ, ನಾವು ಈಗ ಸ್ವಾವಲಂಭಿಗಳಾಗಿದ್ದೇವೆ ಎನ್ನುತ್ತಾರೆ ಅಪನಾ ಬೇಕರಿಯಲ್ಲಿ ದುಡಿಯುವ ಜಯಶ್ರೀ ಭೋಯ್.
ಒಟ್ಟಿನಲ್ಲಿ, ಸಮಾಜದ ಕೇಳವರ್ಗದಲ್ಲಿ ಕೃಷಿಯೊಂದಿಗೆ ಅಲ್ಪ ವೇತನಕ್ಕೆ ದುಡಿಯುತ್ತಿದ್ದ ಮಹಿಳೆಯರು ಇಂದು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.