Advertisement

ವನಿತಾ ಹಾಕಿ ಸ್ಪರ್ಧೆ: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸೋಲು

11:36 PM Aug 02, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತೀಯ ವನಿತಾ ಹಾಕಿ ತಂಡವು ಗೇಮ್ಸ್‌ನ ವನಿತಾ ಹಾಕಿ ಸ್ಪರ್ಧೆಯಲ್ಲಿ ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಉತ್ತಮ ನಿರ್ವಹಣೆ ನೀಡಲು ವಿಫ‌ಲವಾಗಿ ನಿರಾಶೆಗೊಳಗಾಗಿದೆ.

Advertisement

ಆತಿಥೇಯ ಇಂಗ್ಲೆಂಡ್‌ ತಂಡದ ಅದ್ಭುತ ಆಟಕ್ಕೆ ಬೆದರಿದ ಭಾರತವು 1-3 ಗೋಲುಗಳಿಂದ ಶರಣಾಗಿದೆ. ಇಂಗ್ಲೆಂಡ್‌ ಆರಂಭದಲ್ಲಿಯೇ ಗೋಲು ದಾಖಲಿಸಿ ಮುನ್ನಡೆ ಸಾಧಿಸಿತ್ತು. ಗಿಸೆಲೆ ಆ್ಯನ್‌ಸ್ಲೆ ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲನ್ನು ಹೊಡೆದಿದ್ದರು.

ಈಜು ಸ್ಪರ್ಧೆ: ಪೇಜ್‌, ರಾವತ್‌ ಫೈನಲಿಗೆ
ಬರ್ಮಿಂಗ್‌ಹ್ಯಾಮ್‌: ಭಾರತದ ಅದ್ವೈತ್ ಪೇಜ್‌ ಮತ್ತು ಕುಶಾಗ್ರ ರಾವತ?? ಅವರು ಈಜು ಸ್ಪರ್ಧೆಯ ಪುರುಷರ 1,500 ಮೀ. ಫ್ರೀಸ್ಟೈಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಫೈನಲಿಗೇರಲು ಯಶಸ್ವಿಯಾಗಿದ್ದಾರೆ.

ಹೀಟ್‌ ಒಂದರಲ್ಲಿ ಸ್ಪರ್ಧಿಸಿದ ಪೇಜ್‌ 15:39.25 ಸೆ.ನಲ್ಲಿ ಗುರಿ ತಲುಪಿದರೆ ರಾವತ್‌ ಹೀಟ್‌ ಎರಡರಲ್ಲಿ 15:47.77 ಸೆ.ನಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನದೊಂದಿಗೆ ಫೈನಲಿಗೇರಿದರು.

ಶ್ರೀಹರಿ ನಟರಾಜ್‌ ಈಜು ಸ್ಪರ್ಧೆಯ ಪುರುಷರ 200ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದರೂ ಫೈನಲ್‌ ಹಂತಕ್ಕೇರಲು ವಿಫ‌ಲರಾಗಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next