Advertisement

England ಕ್ರಿಕೆಟಿಗ ಅಂಡರ್‌ವುಡ್‌ ನಿಧನ

12:34 AM Apr 16, 2024 | Team Udayavani |

ಲಂಡನ್‌: ಎಪ್ಪತ್ತರ ದಶಕದ ಶ್ರೇಷ್ಠ ಸ್ಪಿನ್ನರ್‌ ಆಗಿದ್ದ ಇಂಗ್ಲೆಂಡ್‌ನ‌ ಡೆರೆಕ್‌ ಅಂಡರ್‌ವುಡ್‌ (78) ಸೋಮವಾರ ಕೆಂಟ್‌ನಲ್ಲಿ ಕೊನೆಯುಸಿರೆಳೆದರು.

Advertisement

ನಿಧಾನ ಗತಿಯ ಎಡಗೈ ಸ್ಪಿನ್ನರ್‌ ಅಗಿದ್ದ ಡೆರೆಕ್‌ ಅಂಡರ್‌ವುಡ್‌, 86 ಟೆಸ್ಟ್‌ಗಳಿಂದ 297 ವಿಕೆಟ್‌ ಉರುಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. 24 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್‌ ಬಾಳ್ವೆಯಲ್ಲಿ 2,465 ವಿಕೆಟ್‌ ಉಡಾಯಿಸಿದ ಸಾಧನೆ ಇವರದ್ದಾಗಿದೆ. ಅಂದಿನ ಬ್ಯಾಟಿಂಗ್‌ ಹೀರೋ ಸುನೀಲ್‌ ಗಾವಸ್ಕರ್‌ ಅವರನ್ನು ಸರ್ವಾಧಿಕ 12 ಸಲ ಔಟ್‌ ಮಾಡಿದ ಹೆಗ್ಗಳಿಕೆ ಅಂಡರ್‌ವುಡ್‌ ಅವರದು. 1977ರ ಭಾರತ ಪ್ರವಾಸದ ವೇಳೆ ಇಂಗ್ಲೆಂಡ್‌ನ‌ 3-1 ಸರಣಿ ಗೆಲುವಿನಲ್ಲಿ ಅಂಡರ್‌ವುಡ್‌ ಪಾತ್ರ ಮಹತ್ವದ್ದಾಗಿತ್ತು. ಅವರು 29 ವಿಕೆಟ್‌ ಉಡಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next