Advertisement

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

12:03 AM Apr 18, 2024 | Team Udayavani |

ಮಡಿಕೇರಿ: ಕುಂಡ್ಯೋಳಂಡ ಹಾಕಿ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಕುಟ್ಟಂಡ ವಿರುದ್ಧ ಕಣ್ಣಂಡ ತಂಡ 2-1 ಅಂತರದ ಜಯ ಗಳಿಸಿದೆ. ಕಣ್ಣಂಡ ಪರ ಅರುಣ್‌ ನಾಚಪ್ಪ ಮತ್ತು ರೋಹನ್‌ ಅಯ್ಯಪ್ಪ ಗೋಲು ಬಾರಿಸಿದರು.

Advertisement

ಇನ್ನೊಂದು ಪಂದ್ಯದಲ್ಲಿ ಸಣ್ಣುವಂಡ ಐಚಂಡ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿತು. ಸೋಮೆಯಂಡ ಮತ್ತು ಮಾತರಂಡ ನಡುವಿನ ಪಂದ್ಯ 2-2ರಿಂದ ಸಮಬಲಗೊಂಡಿತು. ಅನಂತರದ ಶೂಟೌಟ್‌ನಲ್ಲಿ ಮಾತರಂಡ 7-5 ಗೆಲುವು ದಾಖಲಿಸಿತು. ಉಳಿದಂತೆ, ಮುದ್ದಂಡ ವಿರುದ್ಧ ಚೆಂದಿರ 4-0, ಮುಂಡಚಂದಿರ ವಿರುದ್ಧ ಕೊಳ್ಳಿರ 1-0, ತೀತಿಮಡ ವಿರುದ್ಧ ನಂಬುದುಮಡ 3-1, ಮಾಣೆಯಪಂಡ ವಿರುದ್ಧ ನಾಪಂಡ 3-0 ಜಯ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next