Advertisement

Hockey: ಮಲ್ಲಜಿರ ತಂಡಕ್ಕೆ 5-0 ಗೆಲುವು

11:10 PM Apr 04, 2024 | Team Udayavani |

ಮಡಿಕೇರಿ: ಇಲ್ಲಿನ ನಾಪೋ ಕ್ಲುವಿನ ಕೆಪಿಎಸ್‌ ಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಹಾಕಿ ಹಬ್ಬದ ಗುರುವಾರದ ಪಂದ್ಯದಲ್ಲಿ ವಚನ್‌ ಅಯ್ಯಪ್ಪ ಅವರ 4 ಗೋಲು ಗಳ ನೆರವಿನಿಂದ ಮಲ್ಲಜಿರ ತಂಡವು ಪೆಬ್ಬತಿರ ತಂಡವನ್ನು 5-0 ಗೋಲು ಗಳಿಂದ ಸುಲಭವಾಗಿ ಮಣಿಸಿತು.

Advertisement

ಭರ್ಜರಿ ಆಟದ  ಪ್ರದರ್ಶನ ನೀಡಿದ ವಚನ್‌ ಅವರು ಪಂದ್ಯದ 10, 22, 26 ಮತ್ತು 29ನೇ ನಿಮಿಷದಲ್ಲಿ ಗೋಲನ್ನು ಹೊಡೆದು ತಂಡದ ದೊಡ್ಡ ಗೆಲುವಿಗೆ ಕಾರಣರಾದರು. ತಂಡದ ಇನ್ನೊಂದು ಗೋಲನ್ನು ಚೇತನ್‌ ಚೆಂಗಪ್ಪ ಹೊಡೆದರು. ಎದುರಾಳಿ ಪೆಬ್ಬತಿರ ತಂಡ ಯಾವುದೇ ಗೋಲು ದಾಖಲಿಸಲು ವಿಫ‌ಲವಾಯಿತು.

ದಿನದ ಇನ್ನೊಂದು ಪಂದ್ಯದಲ್ಲಿ ಮುಕ್ತತಿರ ತಂಡವು ಕಲ್ಲಿರ ತಂಡವನ್ನು 3-1 ಗೋಲುಗಳಿಂದ ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next