Advertisement

ಚೆಂಬು ಹಿಡಿದು ಮಹಿಳೆಯರ ಪ್ರತಿಭಟನೆ

04:40 PM Nov 09, 2021 | Team Udayavani |

ಗುರುಮಠಕಲ್‌: ಪಟ್ಟಣದ ಗಡಿಮೌಲ್ಲ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ಚೆಂಬು ಹಿಡಿದು ಪ್ರತಿಭಟನೆ ನಡೆಸಿದರು.

Advertisement

ಮಹಿಳೆಯರು ಚೆಂಬು ಹಿಡಿದು ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ತೆರಳುವಾಗ ರಸ್ತೆ ಮಧ್ಯ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಜನರ ಮನವೊಲಿಸಿ ಸ್ಥಳಕ್ಕೆ ಭೇಟಿ ನೀಡಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಶೌಚಾಲಯಕ್ಕೆ ಸಂಪರ್ಕಿಸುವ ನೀರಿನ ಬೋರ್‌ವೆಲ್‌ ಕೆಟ್ಟು 15 ದಿನಗಳು ಕಳೆದಿವೆ. ಈ ಕುರಿತು ಬಡಾವಣೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಮಹಿಳೆಯರಿಗೆ ಬಯಲೇ ಅನಿವಾರ್ಯವಾಗಿದೆ ಎಂದು ಮಹಿಳೆಯರಾದ ಸತ್ಯಮ್ಮ, ಭಾರತಮ್ಮ, ಕಿಷ್ಟಮ್ಮ, ಲಕ್ಷ್ಮೀಬಾಯಿ, ಚಂದ್ರಮ್ಮ, ಬಂದೆಮ್ಮ, ಮಹಾದೇವಮ್ಮ, ದೇವಿಂದ್ರಮ್ಮ, ನರಸಮ್ಮ ಸೇರಿದಂತೆ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಪ್ರತಿಕ್ರಿಯಿಸಿ, ಈ ಕಾಮಗಾರಿ ಟೆಂಡರ್‌ ಆಗಿದ್ದು, ತಿಂಗಳೊಳಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next