Advertisement

ಕರೆಮ್ಮ ಗೆಲುವಿಗೆ ಉಡಿ ತುಂಬಿ ಹಾರೈಕೆ

12:49 PM May 07, 2018 | Team Udayavani |

ದೇವದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ ಘಟಾನುಘಟಿಗಳಿಗೆ ಪಕ್ಷೇತರ ಅಭ್ಯರ್ಥಿ ಕರೆಮ್ಮ ಜಿ. ಗೋಪಾಲಕೃಷ್ಣ ನಾಯಕ ತೀವ್ರ ಪೈಪೋಟಿ ನೀಡುವ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಕರೆಮ್ಮ ಅವರು ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಮತಯಾಚನೆಗೆ ಹೋದಾಗ ಗ್ರಾಮಸ್ಥರು, ಮಹಿಳೆಯರು ಸ್ವಾಗತಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಮಹಿಳೆಯರು ಕರೆಮ್ಮ ಅವರಿಗೆ ಉಡಿ ತುಂಬಿ ಚುನಾವಣಾ ವೆಚ್ಚಕ್ಕೆ ಹಣ ನೀಡಿ ಗೆಲುವಿಗೆ ಹಾರೈಸಿ ಕಳುಹಿಸುತ್ತಿದ್ದು, ನಿಮ್ಮ ಬೆನ್ನಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
 
ಮೊದಲು ಜೆಡಿಎಸ್‌ ಟಿಕೆಟ್‌ ನೀಡುವುದಾಗಿ ಹೇಳಿದ್ದರಿಂದ ಕರೆಮ್ಮ ಅವರು ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿದ್ದರು. ಆದರೆ ಜೆಡಿಎಸ್‌ ಚುನಾವಣೆ ಸಮಯದಲ್ಲಿ ಕೈಕೊಟ್ಟಿದ್ದರಿಂದ ಕರೆಮ್ಮ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ ಟಿಕೆಟ್‌ ಕೊಡದೇ ವಂಚಿಸಿರುವುದು ಮತ್ತು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ಒಂದೇ ಕುಟುಂಬದವರಿಗೆ ಮಣೆ ಹಾಕಿರುವುದು ಈ ಬಾರಿ ಕ್ಷೇತ್ರದಲ್ಲಿ ಕರೆಮ್ಮ ಅವರ ಪರ ಅಲೆ ಏಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹಿರೇಬೂದೂರು, ಮಸರಕಲ್‌, ಮಶಿಹಾಳ, ಗಲಗ, ಗಾಣಧಾಳ, ಗಣಿಜಿಲಿ, ಪಿಲಿಗುಂಡ, ಕರಿಗುಡ್ಡ, ಸೋಮನಮರಡಿ, ಕಕ್ಕಲದೊಡ್ಡಿ ಸೇರಿ ಇತರೆ ಗ್ರಾಮಗಳಲ್ಲಿ ಮತದಾರರು ಸ್ವಯಂ ಪ್ರೇರಿತವಾಗಿ ಕರೆಮ್ಮ ಅವರಿಗೆ ಉಡಿ ತುಂಬಿ ಚುನಾವಣಾ ಖರ್ಚಿಗೆ ಸಾವಿರಾರು ರೂ. ದೇಣಿಗೆ ನೀಡುತ್ತಿದ್ದು, ಇದು ದೇವದುರ್ಗ ರಾಜಕೀಯ ಇತಿಹಾಸದಲ್ಲೇ ಪ್ರಥಮವಾಗಿದೆ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ.

ಪುತ್ರ-ಪುತ್ರಿ ಸಾಥ್‌: ಕರೆಮ್ಮ ಜಿ. ಗೋಪಾಲಕೃಷ್ಣ ಅವರ ಮತಯಾಚನೆಗೆ ಪುತ್ರ, ಪುತ್ರಿ ಸಾಥ್‌ ನೀಡುತ್ತಿದ್ದಾರೆ. ಕರೆಮ್ಮ ಅವರು ಹೋದಲ್ಲೆಲ್ಲ ಮಕ್ಕಳ ಮೇಲೆ ಪ್ರಮಾಣ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳುತ್ತಿದ್ದಾರೆ. 

ಇದು ಸ್ಪರ್ಧಾ ಕಣದಲ್ಲಿರುವ ಕಾಂಗ್ರೆಸ್‌ನ ಎ. ರಾಜಶೇಖರ ನಾಯಕ, ಬಿಜೆಪಿಯ ಶಾಸಕ ಕೆ. ಶಿವನಗೌಡ ನಾಯಕ, ಜೆಡಿಎಸ್‌ನ ವೆಂಕಟೇಶ ಪೂಜಾರಿ ಅವರ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಕೂಡಾ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ. ಮತದಾನಕ್ಕೆ ಇನ್ನೂ ಆರು ದಿನ ಬಾಕಿ ಇದ್ದು ಮತದಾರರ ಒಲವು ಯಾರತ್ತ ಹೊರಳಲಿದೆ ಎಂದು ಕಾದು ನೋಡಬೇಕಿ¨

Advertisement

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next