Advertisement
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ 2013ರಲ್ಲಿ ಚುನಾವಣೆ ನಡೆದು ಮತ ಎಣಿಕೆ ನಡೆಯುವ ವೇಳೆ ಅಚ್ಚರಿಯ ಘಟನೆ ನಡೆದಿತ್ತು. ಇಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡು ಪಕ್ಷಗಳ ನಡುವೆ ತೀವ್ರ ತರಹದ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ನ ಡಾ| ರಘು ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಎಸ್. ಅಂಗಾರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ಆರಂಭದಿಂದಲೂ ಡಾ| ರಘು ಮುನ್ನಡೆ ಸಾಧಿಸಿದ್ದರು. ಮತ ಎಣಿಕೆ ಮುಕ್ಕಾಲು ಭಾಗ ಪೂರ್ತಿಗೊಳ್ಳುತ್ತಿದ್ದಂತೆ ಕೆಲವು ಚಾನೆಲ್‌ಗಳಲ್ಲಿ ಕಾಂಗ್ರೆಸ್‌ನ ಡಾ| ರಘು ಅವರು ವಿಜಯಿ ಎಂದು ಸುದ್ದಿ ಬಿತ್ತರವಾಯಿತು. ಹೀಗಾಗಿ ಸುಳ್ಯ ನಗರದಲ್ಲಿ ಗುಂಪು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಆದರೆ ಎಣಿಕೆ ಅಂತಿಮಗೊಂಡು ಫಲಿತಾಂಶ ಘೋಷಣೆಯಾದಾಗ ವಿಜಯಲಕ್ಷ್ಮಿಯು ಎಸ್. ಅಂಗಾರ ಅವರಿಗೆ ಒಲಿದಿದ್ದಳು. ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಯಿಂದ ಅಲ್ಲಿಂದ ಜಾಗ ಖಾಲಿ ಮಾಡಿದ್ದರು.
Advertisement
ಗೆದ್ದವರು ಬಿಜೆಪಿ ಅಭ್ಯರ್ಥಿ; ಸಂಭ್ರಮಿಸಿದ್ದು ಕಾಂಗ್ರೆಸಿಗರು!
12:58 PM Mar 30, 2018 | |
Advertisement
Udayavani is now on Telegram. Click here to join our channel and stay updated with the latest news.