Advertisement
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಚುನಾವಣ ಪ್ರಚಾರದ ಪ್ರಯುಕ್ತ ಶನಿವಾರ ಉಜಿರೆಯಲ್ಲಿ ನಡೆದ ಬƒಹತ್ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು.
Related Articles
ಕರಾವಳಿ ಕರ್ನಾಟಕ ಉಗ್ರ ಚಟುವಟಿಕೆಯುಳ್ಳ ಸ್ಲಿàಪರ್ ಸೆಲ್ ಆಗುತ್ತಿದೆ. ಕೊಡಗಿನಿಂದ ಹಿಡಿದು ಮಲೆನಾಡಿನವರೆಗೆ ಉಗ್ರಚಟುವಟಿಕೆ ಸದ್ದಿಲ್ಲದೆ ಚಿಗುರುತ್ತಿದೆ. ಅದಕ್ಕಾಗಿ ಅಮಿತ್ ಶಾ ಅವರು ಪಿಎಫ್‌ಐ ನಿಷೇಧಿಸಿದರು. ಆದರೆ ಕಾಂಗ್ರೆಸ್ ಬಾಂಬ್ ಹಾಕುವವರ ರಕ್ಷಣೆಗೆ ನಿಂತಿದೆ. ಉಗ್ರರೇನು ನಿಮ್ಮ ಅಣ್ಣ ತಮ್ಮಂದಿರಾ ಎಂದು ಕಟುವಾಗಿ ಟೀಕಿಸಿದರು.
Advertisement
ಮುಸಲ್ಮಾನರಿಗೆ ಮೀಸಲಾತಿ ನೀಡಿದಂತೆ ಎಲ್ಲ ವರ್ಗಕ್ಕೂ ಮೀಸಲಾತಿ ನೀಡಬೇಕೆಂಬುದು ನಮ್ಮ ಆಶಯ, ಕಾಂಗ್ರೆಸ್ ಕೇವಲ ಮುಸಲ್ಮಾನರ ಓಲೆ„ಕೆಗೆ ಸರಕಾರ ನಡೆಸುತ್ತದೆ, ಅದಕ್ಕಾಗಿ ಏಕರೂಪದ ಕಾನೂನು ಜಾರಿ ಮಾಡಬೇಕು. ಎಲ್ಲರಿಗೂ ಸಮಾನವಾಗಿ ಸವಲತ್ತುಗಳು ಸಿಗಬೇಕು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಐದು ವರ್ಷದ ಹಿಂದೆ ಜನ ನನಗೆ ವಿಶ್ವಾಸವಿಟ್ಟು ಮತ ನೀಡಿದ್ದನ್ನು ನಾನು ಮರೆತಿಲ್ಲ. ನನ್ನ ಕಾರ್ಯವೈಖರಿ ಬಗ್ಗೆ ಇಂದು ಬೆಳ್ತಂಗಡಿ ಜನ ಮಾತನಾಡುತ್ತಿದ್ದಾರೆ, ಬೆಳ್ತಂಗಡಿ ಜನತೆ 60 ಸಾವಿರ ಮತ ಅಂತರದಿಂದ ಗೆಲ್ಲಿಸಬೇಕು ಎಂದರು.ಉಜಿರೆಯ ಎಸ್‌ಡಿಎಂ ಕಾಲೇಜು ಬಳಿಯಿಂದ ಜನಾರ್ದನಸ್ವಾಮಿ ದೇವಸ್ಥಾನದವರೆಗೆ ತೆರೆದ ಜೀಪಿನಲ್ಲಿ ರೋಡ್ ಶೋ ನಡೆಯಿತು. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಪ್ರಮುಖರು, ಶಕ್ತಿ ಕೇಂದ್ರ ಅಧ್ಯಕ್ಷರು, ಜಿ.ಪಂ. ಮಾಜಿ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ರೋಡ್ ಶೋನಲ್ಲಿ ಪಾಲ್ಗೊಂಡು ಹರೀಶ್ ಪೂಂಜ, ಮೋದಿಗೆ ಜೈಕಾರ ಹಾಕಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿರುವೆರ್ ಕುಡ್ಲ ಸ್ಥಾಪಕ ಉದಯ್ ಪೂಜಾರಿ, ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಪ್ರಮುಖರಾದ ಕುಶಾಲಪ್ಪ ಗೌಡ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಉಪಾಧ್ಯಕ್ಷ ಸೀತರಾಮ್ ಬೆಳಾಲು, ಜಯಂತ್ ಗೌಡ, ಪ್ರಶಾಂತ್ ಪಾರೆಂಕಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.