Advertisement

Wimbledon: ಸ್ವಿಯಾಟೆಕ್‌ ಮುನ್ನಡೆ

10:55 PM Jul 05, 2023 | Team Udayavani |

ಲಂಡನ್‌: ವಿಶ್ವದ ನಂಬರ್‌ ವನ್‌ ಆಟಗಾತಿರ ಐಗಾ ಸ್ವಿಯಾಟೆಕ್‌ ಸುಲಭ ಜಯದೊಂದಿಗೆ ವಿಂಬಲ್ಡನ್‌ ಟೆನಿಸ್‌ ಕೂಟದಲ್ಲಿ 3ನೇ ಸುತ್ತು ತಲುಪಿದ್ದಾರೆ. ಅವರೊಂದಿಗೆ ದರಿಯಾ ಕಸಾತ್ಕಿನಾ, ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಕೂಡ ಜಯ ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ.

Advertisement

ಪಂದ್ಯದಿಂದ ಪಂದ್ಯಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ಸ್ವಿಯಾಟೆಕ್‌ ಅವರು ಸಾರಾ ಸೋರಿಬೆಸ್‌ ಟೋರ್ಮೊ ಅವರನ್ನು 6-2, 6-0 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಕಸಾತ್ಕಿನಾ ಅವರು ಬ್ರಿಟಿಷ್‌ನ ಜೋಡಿ ಬುರಾಜ್‌ ಅವರನ್ನು 6-0, 6-2 ಸೆಟ್‌ಗಳಿಂದ ಕೆಡಹಿ ಮೂರನೇ ಸುತ್ತು ತಲುಪಿದ್ದಾರೆ. ಮೊದಲ ಸುತ್ತಿನಲ್ಲಿ ಅಮೆರಿಕದ ಕ್ಯಾರೋಲಿನ್‌ ಡೊಲೆಹೈಡ್‌ ಅವರನ್ನು ಉರುಳಿಸಿದ್ದ ಕಸಾತ್ಕಿನಾ ಉತ್ತಮ ಫಾರ್ಮ್ನಲ್ಲಿದ್ದಾರೆ.

ಮೆಡ್ವೆಡೇವ್‌ ಮುನ್ನಡೆ
ಪುರುಷರ ವಿಭಾಗದ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ಬ್ರಿಟಿಷ್‌ನ ಆರ್ಥರ್‌ ಫೆರಿ ಅವರನ್ನು 7-5, 6-4, 6-3 ಸೆಟ್‌ಗಳಿಂದ ಸೋಲಿಸಿದರು. ಇಲ್ಲಿ ಒಮ್ಮೆ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದಿದ್ದ ಅವರು ಕಳೆದ ವರ್ಷ ರಷ್ಯಾ ಆಟಗಾರರಿಗೆ ನಿಷೇ«ವಿದ್ದ ಕಾರಣ ಆಡಿರ ಲಿಲ್ಲ. 2021ರ ಯುಎಸ್‌ ಚಾಂಪಿಯನ್‌ ಆಗಿದ್ದ ಮೆಡ್ವೆಡೇವ್‌ 2023ರಲ್ಲಿ 5 ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

ಪ್ರತಿಭಟನೆಯಿಂದ ಅಡ್ಡಿ
ಜಸ್ಟ್‌ ಸ್ಟಾಪ್‌ ಆಯಿಲ್‌ ಗುಂಪಿನ ಪರಿಸರ ಪ್ರತಿಭಟನ ಕಾರರು ಅಡ್ಡಿಪಡಿಸಿದ್ದರಿಂದ ಕೆಲವೊಂದು ಪಂದ್ಯಗಳನ್ನು ಸ್ವಲ್ಪ ಹೊತ್ತು ಮುಂದೂಡಬೇಕಾಯಿತು. ಕೆಲವು ಪ್ರತಿ ಭಟನಕಾರರು ಅಂಗಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next