Advertisement

ಕಪ್ಪು,ನೀಲಿ ಬಣ್ಣದ ಅಂಡರ್‌ ವೇರನ್ನು ಬಿಚ್ಚಿಸಿದ ವಿಂಬಲ್ಡನ್‌ ಸಂಘಟಕರು

03:20 AM Jul 15, 2017 | |

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಟೆನಿಸ್‌ ಆಟಗಾರರು ಹಾಕುವ ಶೂನಿಂದ ಹಿಡಿದು ಒಳ ಉಡುಪುಗಳವರೆಗೂ ಎಲ್ಲವೂ ಬಿಳೀ ಬಣ್ಣ. ಇದು ವಿಂಬಲ್ಡನ್‌ ಸಂಘಟಕರ ನಿಯಮ. ಈ ನಿಯಮ ಸಡಿಲಿಸಲು ಅವರು ಸುತಾರಾಂ ತಯಾರಿರುವುದಿಲ್ಲ.
 
ಏನಾದರೂ ವ್ಯತ್ಯಾಸವಾದರೆ ಆಟದ ಮಧ್ಯದಲ್ಲೇ ತಡೆಯಲಾಗುತ್ತದೆ. ಅಂತಹದೊಂದು ಘಟನೆ ಬುಧವಾರ ನಡೆದಿದೆ. ಕಿರಿಯರ ವಿಭಾಗದ ಡಬಲ್ಸ್‌ ಪಂದ್ಯದ ವೇಳೆ ಉನ್ನತ ಶ್ರೇಯಾಂಕದ ಡಬಲ್ಸ್‌ ಜೋಡಿ ಹಂಗೇರಿಯಾದ ಸೊಂಬರ್‌ ಪೈರಸ್‌ ಮತ್ತು ಚೀನಾದ ವು ಯಿಬಿಂಗ್‌ ಜೊತೆಯಾಗಿದ್ದರು. ಆ ವೇಳೆ ಪೈರಸ್‌ ನೀಲಿ ಮತ್ತು ಯಿಬಿಂಗ್‌ ಕಪ್ಪು ಬಣ್ಣದ ಅಂಡರ್‌ವೆàರ್‌ ಧರಿಸಿದ್ದರು. ಇದನ್ನು ತಕ್ಷಣ ಪತ್ತೆ ಹಚ್ಚಿದ ಸಂಘಟಕರು ಆಟಗಾರರಿಗೆ ಅಲ್ಲೇ ಬಿಳೀ ಅಂಡರ್‌ವೆàರ್‌ ನೀಡಿ ಹೋಗಿ ಬದಲಿಸಿಕೊಂಡು ಬನ್ನಿ ಎಂದಿದ್ದಾರೆ. ಅನಂತರವೇ ಪಂದ್ಯವಾಡಲು ಅವಕಾಶ ನೀಡಲಾಗಿದೆ. ಅದೃಷ್ಟದ ಸಂಕೇತವೆಂದು ತಾವು ಈ ಬಣ್ಣದ ಅಂಡರ್‌ವೆàರ್‌ ಧರಿಸಿದ್ದಾಗಿ ಆಟಗಾರರು  ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next